ವಿಜಯವಾಡ, ಆಂಧ್ರಪ್ರದೇಶ :ನೀರು ಎಂದು ಭಾವಿಸಿ ವಿದ್ಯಾರ್ಥಿಯೊಬ್ಬ ಆ್ಯಸಿಡ್ ಸೇವಿಸಿರುವ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ವಿಜಯವಾಡ ನಗರದ ಎಣಿಕೆಪಾಡು ಎಂಬಲ್ಲಿ ನಡೆದಿದೆ. ಕೃಷ್ಣಾ ಜಿಲ್ಲೆಯ ನಾಗಾಯಾಲಂಕಾ ಮೂಲದ ಕೋಸೂರು ಚೈತನ್ಯ ಆ್ಯಸಿಡ್ ಕುಡಿದ ವಿದ್ಯಾರ್ಥಿ. ಈತ ವಿಜಯವಾಡದ ಲೊಯೋಲಾ ಕಾಲೇಜಿನಲ್ಲಿ ಪದವಿ ಅಂತಿಮ ವರ್ಷದ ವಾಯುಯಾನ ಕೋರ್ಸ್ ಕಲಿಯುತ್ತಿದ್ದಾನೆ.
ಕೆಸರಪಲ್ಲಿ ಸಮೀಪದ ಬಾಡಿಗೆ ಮನೆಯಲ್ಲಿ ಗೆಳೆಯರೊಂದಿಗೆ ವಾಸವಾಗಿರುವ ಈತ ಇದೇ ತಿಂಗಳ 14ರಂದು ಎಣಿಕೆಪದವಿನಲ್ಲಿರುವ ಸ್ನೇಹಿತರ ಕೊಠಡಿಗೆ ಬಂದಿದ್ದನು. ಸಮೀಪದ ಕೂಲ್ ಡ್ರಿಂಕ್ಸ್ ಅಂಗಡಿಗೆ ಹೋಗಿ ಕುಡಿಯುವ ನೀರಿನ ಬಾಟಲ್ ಕೇಳಿದ್ದಾನೆ. ಅಂಗಡಿಯವನು ಚೈತನ್ಯನಿಗೆ ಫ್ರಿಡ್ಜ್ನಿಂದ ನೀರಿನ ಬಾಟಲಿಯನ್ನು ತೆಗೆದುಕೊಳ್ಳುವಂತೆ ಹೇಳಿದ್ದಾನೆ. ಚೈತನ್ಯ ಅವಸರದಲ್ಲಿ ನೀರಿನ ಬದಲು ಆ್ಯಸಿಡ್ ಸೇವಿಸಿದ್ದಾನೆ.
ಆ್ಯಸಿಡ್ ಬಾಟಲ್ ನೀರಿನ ಬಾಟಲ್ನಂತೆಯೇ ಕಾಣುತ್ತಿತ್ತು. ಅದನ್ನೇ ನೀರು ಎಂದು ಭಾವಿಸಿ ಚೈತನ್ಯ ಆ್ಯಸಿಡ್ ಅನ್ನು ಕುಡಿದಿದ್ದಾನೆ. ಆ್ಯಸಿಡ್ ಸೇವಿಸಿದ ಕೂಡಲೇ ಅಸ್ವಸ್ಥನಾಗಿದ್ದ ಚೈತನ್ಯನನ್ನು ಆತನ ಸ್ನೇಹಿತರು ಸಮೀಪದ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆಸ್ಪತ್ರೆಯಲ್ಲಿ ಆತ ಕುಡಿದಿರುವುದು ಆ್ಯಸಿಡ್ ಎಂಬುದು ದೃಢಪಟ್ಟಿದ್ದು, ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಲಾಗಿದೆ.