ಕರ್ನಾಟಕ

karnataka

ETV Bharat / bharat

ವಿದ್ಯುತ್ ತಗುಲಿ ಸಾವನ್ನಪ್ಪಿದ ಗಜರಾಜ.. ಸಮಾಧಿ ಬಳಿ ರಾತ್ರಿಯೆಲ್ಲಾ ಘೀಳಿಟ್ಟ ಆನೆಗಳ ಹಿಂಡು

ಆನೆಯ ಸಮಾಧಿ ಸ್ಥಳದಲ್ಲಿ ರಾತ್ರಿ ಪೂರ್ತಿ ಆನೆಗಳ ಸದ್ದು ಕೇಳಿಬಂದಿದೆ. ಆನೆಯನ್ನು ಹುಡುಕಿಕೊಂಡ ಬಂದು ಹಿಂಡು ಸಮಾಧಿ ಬಳಿ ರೋಧಿಸಿವೆ. ಆನೆಗಳ ಓಡಿಸಲು ಪ್ರಯತ್ನಿಸಿದ ಸ್ಥಳೀಯರ ಮೇಲೆಯೇ ದಾಳಿಗೆ ಮುಂದಾಗಿದ್ದವು ಎಂದು ತಿಳಿದುಬಂದಿದೆ.

strange-incident-elephants-stayed-at-spot-where-died-elephant-of-their-herd-buried
ವಿದ್ಯುತ್ ತಗುಲಿ ಸಾವನ್ನಪ್ಪಿದ ಗಜರಾಜ

By

Published : Jun 13, 2021, 8:01 PM IST

Updated : Jun 13, 2021, 8:35 PM IST

ಚಿತ್ತೂರು (ಆಂಧ್ರ ಪ್ರದೇಶ): ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದ ಆನೆಯ ಸಮಾಧಿ ಮಾಡಿದ್ದ ಜಾಗದಲ್ಲಿ 13ಕ್ಕೂ ಹೆಚ್ಚಿನ ಆನೆಗಳು ದಿನಪೂರ್ತಿ ಮರುಕ ವ್ಯಕ್ತಪಡಿಸಿವೆ. ಮೃತಪಟ್ಟ ಆನೆಯ ಸಮಾಧಿ ಮಾಡಲಾದ ಜಾಗದಲ್ಲಿಯೇ ಘೀಳಿಡುತ್ತಾ 13 ಆನೆಗಳು ರಾತ್ರಿಪೂರ್ತಿ ಕಳೆದಿವೆ.

ಹೌದು, ಚಿತ್ತೂರು ಜಿಲ್ಲೆಯ ಪಾಲಮನೇರು ಗ್ರಾಮೀಣ ವಲಯದ ಕೋಟಿಗುಟ್ಟ ಉಪನಗರದಲ್ಲಿ ವಿದ್ಯುತ್ ತಗುಲಿ ಶನಿವಾರ ಆನೆಯೊಂದು ಮೃತಪಟ್ಟಿತ್ತು. ಕೋಟಿಗುಟ್ಟ ಗ್ರಾಮದ ಹೊರವಲಯದಲ್ಲಿ ಹಿಂಡಿನಿಂದ ಬೇರ್ಪಟ್ಟಿದ್ದ ಆನೆ ವಿದ್ಯುತ್​​ಗೆ ಬಲಿಯಾಗಿತ್ತು. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಅಲ್ಲಿಯೇ ಅದನ್ನು ಸಮಾಧಿ ಮಾಡಿದ್ದರು.

ಸಮಾಧಿ ಬಳಿ ರಾತ್ರಿಯೆಲ್ಲಾ ಘೀಳಿಟ್ಟ ಆನೆಗಳ ಹಿಂಡು

ಆದರೆ ಆನೆ ಸಮಾಧಿ ಮಾಡಿರುವ ಸ್ಥಳದಲ್ಲಿ ರಾತ್ರಿ ಪೂರ್ತಿ ಗಜಪಡೆಗಳ ಸದ್ದು ಕೇಳಿಬಂದಿದೆ. ಮೃತಪಟ್ಟ ಗಜರಾಜನನ್ನು ಹುಡುಕಿಕೊಂಡು ಬಂದು ಆನೆಗಳು ಸಮಾಧಿ ಬಳಿ ರೋಧಿಸಿವೆ. ಈ ಹಿಂಡನ್ನು ಓಡಿಸಲು ಪ್ರಯತ್ನಿಸಿದ ಸ್ಥಳೀಯರ ಮೇಲೆಯೇ ದಾಳಿಗೆ ಮುಂದಾಗಿದ್ದವು. ಅಂತಿಮವಾಗಿ ಅರಣ್ಯ ಸಿಬ್ಬಂದಿ ಮತ್ತು ಗ್ರಾಮಸ್ಥರು ಒಟ್ಟಾಗಿ ಆನೆ ಹಿಂಡನ್ನು ಕೌಂಡಿನಿಯಾ ನದಿ ದಾಟಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಓದಿ:ವರ್ಚುವಲ್ ಮೂಲಕವೇ ಭಕ್ತರಿಗೆ ವಿವಿಧ ಸೇವೆ: ಆಂಧ್ರದ ಬೊಕ್ಕಸಕ್ಕೆ ಹರಿದು ಬಂತು ಕೋಟಿ ರೂಪಾಯಿ

Last Updated : Jun 13, 2021, 8:35 PM IST

ABOUT THE AUTHOR

...view details