ಕರ್ನಾಟಕ

karnataka

ETV Bharat / bharat

ಪ್ರತಿಮೆ ಸ್ಥಾಪನೆ ವಿಚಾರ: ಹುತಾತ್ಮ ಯೋಧನ ತಂದೆಗೆ ಥಳಿಸಿ ಬಂಧನ - ಹುತಾತ್ಮ ಯೋಧನ ಸಹೋದರ ಅಪಾದನೆ

ಸರ್ಕಾರಿ ಜಮೀನಿನಲ್ಲಿ ಹುತಾತ್ಮ ಯೋಧನ ಪ್ರತಿಮೆ ಸ್ಥಾಪನೆ ವಿಚಾರ ಸಂಘರ್ಷಕ್ಕೆ ಕಾರಣವಾದ ಘಟನೆ ಬಿಹಾರದಲ್ಲಿ ನಡೆದಿದೆ.

statue of a martyred warrior
ಹುತಾತ್ಮ ಯೋಧನ ಪ್ರತಿಮೆ

By

Published : Feb 28, 2023, 10:28 PM IST

ವೈಶಾಲಿ (ಬಿಹಾರ):2022 ರಲ್ಲಿ ಗಾಲ್ವಾನ್ ಘರ್ಷಣೆಯಲ್ಲಿ ಹೋರಾಡಿ ಹುತಾತ್ಮರಾಗಿದ್ದ ಯೋಧನ ಪ್ರತಿಮೆಯನ್ನು ಬಿಹಾರದ ವೈಶಾಲಿ ಸರ್ಕಾರಿ ಜಾಗದಲ್ಲಿ ಸ್ಥಾಪಿಸಿದ್ದ ಕಾರಣಕ್ಕೆ ತಂದೆ ಜೈ ಕಿಶೋರ್ ಸಿಂಗ್ ಎಂಬವರನ್ನು ಥಳಿಸಿ ಬಂಧಿಸಲಾಗಿದೆ. ಈ ಘಟನೆ ಫೆಬ್ರವರಿ 23 ರಂದು ಜರುಗಿದೆ ಎಂದು ಯೋಧನ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.

ಮಗನ ಪ್ರತಿಮೆಯನ್ನು ತಂದೆ ಕಿಶೋರ್ ಸಿಂಗ್ ಅವರು ಸರ್ಕಾರಿ ಜಮೀನಿರುವ ವೈಶಾಲಿಯ ಜಂಡಹಾ ಪ್ರದೇಶದಲ್ಲಿ ಪ್ರತಿಷ್ಠಾಪಿಸಿದ್ದರು. ವೈಶಾಲಿ ಜಂಡಹಾ ಪ್ರದೇಶದ ಒಂದು ಭಾಗ ಹರಿನಾಥ್ ರಾಮ್​ಗೆ ಸೇರಿದ್ದಾಗಿದೆ. ಪ್ರತಿಮೆ ಪ್ರತಿಷ್ಠಾಪನೆಯ ವಿಷಯ ಸ್ಥಳೀಯ ಅಧಿಕಾರಿಗಳ ಕಿವಿಗೆ ಬಿದ್ದಿದೆ. ಪ್ರತಿಮೆ ತೆರವುಗೊಳಿಸುವಂತೆ ಅಧಿಕಾರಿಗಳು ಯೋಧನ ತಂದೆಗೆ ಸೂಚಿಸಿದ್ದಾರೆ. ಒಂದು ವೇಳೆ ತೆರವಿಗೆ ವಿಫಲವಾದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ತಾಕೀತು ಮಾಡಿದ್ದಾರೆ.

ಹರಿನಾಥ ರಾಮ್ ಅವರ ಜಮೀನು ಹಾಗೂ ಜಂಡಾಹದ ಸರ್ಕಾರಿ ಜಮೀನಿನಲ್ಲಿ ಪ್ರತಿಮೆ ಸ್ಥಾಪಿಸಿದ್ದಕ್ಕಾಗಿ ನೋಟಿಸ್ ಪಾಲಿಸಲು ವಿಫಲನಾದ ಕಿಶೋರ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸರ್ಕಾರಿ ಜಮೀನಿನಲ್ಲಿ ಪ್ರತಿಮೆ ಪ್ರತಿಷ್ಠಾಪಿಸಿದ್ದಲ್ಲದೇ ಪ್ರತಿಮೆಯ ಸುತ್ತಲೂ ಗೋಡೆಗಳನ್ನು ಸಹ ನಿರ್ಮಿಸಲಾಗಿದೆ. ಈ ಅಕ್ರಮ ನಿರ್ಮಾಣದಿಂದಾಗಿ ಭೂಮಾಲೀಕರ ಹಕ್ಕು ಉಲ್ಲಂಘನೆಯಾಗುತ್ತಿದೆ ಎಂದು ಎಸ್‌ಡಿಪಿಒ ತಿಳಿಸಿದ್ದಾರೆ.

ಸರ್ಕಾರಿ ಜಾಗದಲ್ಲಿ ಸ್ಥಾಪಿಸಿರುವ ಪ್ರತಿಮೆಯನ್ನು 15 ದಿನದೊಳಗಾಗಿ ತೆರವು ಮಾಡುವಂತೆ ಸ್ಥಳೀಯ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಈ ಘಟನೆ ಕುರಿತಾಗಿಯೂ ಡಿಎಸ್ಪಿ ಅವರ ಮನೆಗೂ ಭೇಟಿ ನೀಡಿದ್ದರು. ನಂತರ ಪೊಲೀಸ್ ಠಾಣೆಯ ಉಸ್ತುವಾರಿ ತಮ್ಮ ಮನೆಗೆ ಬಂದು ತಂದೆಯನ್ನು ಬಂಧಿಸಿ ಥಳಿಸಿದ್ದಾರೆ ಎಂದು ಹುತಾತ್ಮ ಯೋಧನ ಸಹೋದರ ಅಪಾದನೆ ಮಾಡಿದ್ದಾರೆ.

ಇದನ್ನೂಓದಿ:'ಸಿಬಿಐ ಬಂಧನ ಪ್ರಶ್ನಿಸಿ ಹೈಕೋರ್ಟ್​ಗೆ ಹೋಗಿ': ಡಿಸಿಎಂ ಸಿಸೋಡಿಯಾಗೆ ಸುಪ್ರೀಂ ಸೂಚನೆ

ABOUT THE AUTHOR

...view details