ಕರ್ನಾಟಕ

karnataka

ETV Bharat / bharat

ಚಂದ್ರಬಾಬು ನಾಯ್ಡು ಬಹಿರಂಗ ಸಭೆಯಲ್ಲಿ ಭಾರಿ ದುರಂತ: ಕಾಲ್ತುಳಿತಕ್ಕೆ 8 ಜನರು ಸಾವು - ಟಿಡಿಪಿ ನಾಯಕ ಚಂದ್ರಬಾಬು

ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಭಾಗವಹಿಸಿದ್ದ ಬಹಿರಂಗ ಸಭೆಯಲ್ಲಿ ಭೀಕರ ಕಾಲ್ತುಳಿತ ಸಂಭವಿಸಿದೆ.

stampede-at-chandrababu-naidu-meeting-in-nellore-seven-people-died
ಚಂದ್ರಬಾಬು ನಾಯ್ಡು ಬಹಿರಂಗ ಸಭೆಯಲ್ಲಿ ದುರಂತ: ಏಳು ಜನ ಕಾರ್ಯಕರ್ತರ ಸಾವು

By

Published : Dec 28, 2022, 9:48 PM IST

Updated : Dec 28, 2022, 11:01 PM IST

ಚಂದ್ರಬಾಬು ನಾಯ್ಡು ಬಹಿರಂಗ ಸಭೆಯಲ್ಲಿ ಭಾರಿ ದುರಂತ

ನೆಲ್ಲೂರು (ಆಂಧ್ರ ಪ್ರದೇಶ):ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಭಾರಿ ದುರಂತ ಸಂಭವಿಸಿತು. ಕಾಲ್ತುಳಿತ ಉಂಟಾಗಿ ಎಂಟು ಜನ ಕಾರ್ಯಕರ್ತರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.

ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಕಂದುಕೂರಿನಲ್ಲಿ ಇಂದು ಸಂಜೆ ದುರಂತ ಘಟಿಸಿತು. ಚಂದ್ರಬಾಬು ಸಭೆಗೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಮಾತಿನ ಚಕಮಕಿ ನಡೆದಿದೆ. ಈ ಗಲಾಟೆ ಉಂಟಾಗಿ ಮುಂದೆ ಕಾಲ್ತುಳಿತ ಸಂಭವಿಸಿತು. ಇದೇ ವೇಳೆ ಕಾಲುವೆಗೆ ಬಿದ್ದು ಕಾರ್ಯಕರ್ತರು ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.

ಚಂದ್ರಬಾಬು ನಾಯ್ಡು ಕೂಡಲೇ ಭಾಷಣ ನಿಲ್ಲಿಸಿ ಆಸ್ಪತ್ರೆಗೆ ತೆರಳಿ ಸಂತ್ರಸ್ತರನ್ನು ಭೇಟಿ ಮಾಡಿದ್ದಾರೆ. ಅಲ್ಲದೇ, ಮೃತರ ಪ್ರತಿ ಕುಟುಂಬಕ್ಕೆ 10 ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಿದ್ದಾರೆ. ಸಂತ್ರಸ್ತರ ಮಕ್ಕಳಿಗೆ ಎನ್​ಟಿಆರ್ ಟ್ರಸ್ಟ್ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ನೀಡಲಾಗುವುದು ಎಂದು ಪ್ರಕಟಿಸಿದರು. ಮೃತರ ಅಂತ್ಯಕ್ರಿಯೆಯನ್ನು ಪಕ್ಷದ ವತಿಯಿಂದಲೇ ನಡೆಸಲಾಗುವುದು ಎಂದು ಮುಖಂಡರು ತಿಳಿಸಿದ್ದಾರೆ.

ಇದನ್ನೂ ಓದಿ:ವೈ​ಎಸ್ಆರ್‌​ ಕಾಂಗ್ರೆಸ್-ಟಿಡಿಪಿ ಕಾರ್ಯಕರ್ತರ ಮಾರಾಮಾರಿ: ಕಚೇರಿಗೆ ಬೆಂಕಿ, ಮನೆಗಳ ಮೇಲೆ ದಾಳಿ

Last Updated : Dec 28, 2022, 11:01 PM IST

ABOUT THE AUTHOR

...view details