ಕರ್ನಾಟಕ

karnataka

ETV Bharat / bharat

ಸ್ಪುಟ್ನಿಕ್‌ ವಿ ಲಸಿಕೆಯ ಬೆಲೆ 995 ರೂಪಾಯಿ 40 ಪೈಸೆ!

ದೇಶದಲ್ಲಿ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳ ಕೊರತೆ ಕಂಡು ಬಂದ ಹಿನ್ನೆಲೆಯಲ್ಲಿ ‘ಸ್ಪುಟ್ನಿಕ್ ವಿ’ ಲಸಿಕೆಯನ್ನು ತುರ್ತು ಸಂದರ್ಭದಲ್ಲಿ ಬಳಕೆ ಮಾಡಲು ಡಿಸಿಜಿಐ ಕಳೆದ ತಿಂಗಳು ಅನುಮೋದನೆ ನೀಡಿತ್ತು.

‘ಸ್ಪುಟ್ನಿಕ್ ವಿ’ ಮುಂದಿನ ವಾರದಿಂದ ದೇಶದ ಮಾರುಕಟ್ಟೆಯಲ್ಲಿ ಲಭ್ಯ
‘ಸ್ಪುಟ್ನಿಕ್ ವಿ’ ಮುಂದಿನ ವಾರದಿಂದ ದೇಶದ ಮಾರುಕಟ್ಟೆಯಲ್ಲಿ ಲಭ್ಯ

By

Published : May 14, 2021, 1:08 PM IST

Updated : May 14, 2021, 2:52 PM IST

ನವದೆಹಲಿ: ರಷ್ಯಾ ಅಭಿವೃದ್ಧಿಪಡಿಸಿರುವ ಕೋವಿಡ್‌–19 ವಿರುದ್ಧದ ಲಸಿಕೆ ‘ಸ್ಪುಟ್ನಿಕ್ ವಿ’ ಮುಂದಿನ ವಾರದಿಂದ ದೇಶದ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಆಮದಾಗುವ ಲಸಿಕೆಯ ಪ್ರತಿ ಡೋಸ್‌ಗೆ 995.40 ರೂ.ಗಳನ್ನು ನಿಗದಿಪಡಿಸಲಾಗಿದೆ ಎಂದು ಡಾ. ರೆಡ್ಡಿಸ್ ಲ್ಯಾಬೊರೇಟರೀಸ್ ಲಿಮಿಟೆಡ್ ಗುರುವಾರ ತಿಳಿಸಿದೆ.

ಕೋವಿಡ್ ವಿರುದ್ಧ ಹೋರಾಡಲು ಈಗಾಗಲೇ ಭಾರತಕ್ಕೆ ಆಗಮಿಸಿರುವ ರಷ್ಯಾದ ಈ ಲಸಿಕೆ ಮುಂದಿನ ವಾರದಿಂದ ಮಾರುಕಟ್ಟೆಗೆ ಲಭ್ಯವಿರಲಿದೆ. ಇದೇ ವಿಚಾರವಾಗಿ ಮಾಹಿತಿ ನೀಡಿದ ಡಾ.ವಿ.ಕೆ. ಪೌಲ್​, ಸ್ಪುಟ್ನಿಕ್​ ಭಾರತಕ್ಕೆ ಬಂದಿದೆ. ಮುಂದಿನ ವಾರ ಇದು ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ ಎಂದು ತಿಳಿಸಿದ್ದಾರೆ.

ರಷ್ಯಾ ತಯಾರಿಸಿರುವ ಸ್ಪುಟ್ನಿಕ್ ವಿ ಲಸಿಕೆಯ ಎರಡು ಡೋಸ್‌ಗಳು ಕೋವಿಡ್–19 ವಿರುದ್ಧ ಶೇ 91.6ರಷ್ಟು ಪರಿಣಾಮಕಾರಿ ಎಂದು ವೈಜ್ಞಾನಿಕ ನಿಯತಕಾಲಿಕೆ ‘ದಿ ಲ್ಯಾನ್ಸೆಟ್‌’ ವರದಿ ಮಾಡಿದೆ. ಸದ್ಯ ಲಸಿಕೆಯನ್ನು ರಷ್ಯಾದಿಂದ ಆಮದು ಮಾಡಲಾಗುತ್ತಿದ್ದು ದರ ಹೆಚ್ಚಿದೆ. ಈ ಲಸಿಕೆಯನ್ನು ದೇಶದಲ್ಲಿ ಉತ್ಪಾದಿಸಲು ಪ್ರಾರಂಭಿಸಿದರೆ ಕಡಿಮೆ ದರದಲ್ಲಿ ಜನರಿಗೆ ಸಿಗಲಿದೆ.

ಇದನ್ನೂ ಓದಿ: 2021ರ ಅಂತ್ಯದ ವೇಳೆಗೆ 200 ಕೋಟಿ ಕೋವಿಡ್ ಡೋಸ್, ಮುಂದಿನ ವಾರ ಮಾರುಕಟ್ಟೆಗೆ ಸ್ಪುಟ್ನಿಕ್​​

Last Updated : May 14, 2021, 2:52 PM IST

ABOUT THE AUTHOR

...view details