ಕರ್ನಾಟಕ

karnataka

ETV Bharat / bharat

ಯುವಕರ ಕೈನಲ್ಲಿದೆ ಉತ್ತರಾಖಂಡದ ಅಧಿಕಾರ: ತೇಜಸ್ವಿ ಸೂರ್ಯ

ಬಿಜೆಪಿಯ ಯುವ ನಾಯಕ ತೇಜಸ್ವಿ ಸೂರ್ಯ ಉತ್ತರಾಖಂಡ ತಲುಪಿದ್ದಾರೆ. 'ಈಟಿವಿ ಭಾರತ'​ ಜೊತೆ ಮಾತನಾಡಿದ ಅವರು, ಪ್ರಸ್ತುತ ಉತ್ತರಾಖಂಡದ ಅಧಿಕಾರ ಯುವಕರ ಕೈನಲ್ಲಿದೆ. ಬರುವ ವಿಧಾನಸಭಾ ಚುನಾವಣೆಯಲ್ಲೂ ಯುವಕರ ಕೈಯಲ್ಲೇ ಅಧಿಕಾರ ಇರಲಿದೆ. ಉತ್ತರಾಖಂಡದಲ್ಲಿ ಯುವಕರು ಇತಿಹಾಸ ಸೃಷ್ಟಿಸಲಿ ಎಂದು ತೇಜಸ್ವಿ ಸೂರ್ಯ ಹಾರೈಸಿದ್ದಾರೆ.

Tejasvi surya in dehradun  Tejashwi Suryas road show reached Dehradun  Tejashwi Surya National President of BJP Yuva Morcha  Tejashwi Surya reached Dehradun  Special conversation with Tejashwi Surya National President of JPA Yuva Morcha  BJYM President Tejashwi Surya  BJYM President Tejashwi Surya  ಯುವಕರ ಕೈಯಲಿದೆ ಉತ್ತರಾಖಂಡದ ಅಧಿಕಾರ  ಈಟಿವಿ ಭಾರತ್​ ಜೊತೆ ಮಾತನಾಡಿದ ತೇಜಸ್ವಿ ಸೂರ್ಯ  ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ  ಉತ್ತರಾಖಂಡದಲ್ಲಿ ತೇಜಸ್ವಿ ಸೂರ್ಯಗೆ ಭವ್ಯ ಸ್ವಾಗತ
ಯುವಕರ ಕೈಯಲಿದೆ ಉತ್ತರಾಖಂಡದ ಅಧಿಕಾರ ಎಂದ ತೇಜಸ್ವಿ

By

Published : Dec 21, 2021, 2:42 AM IST

Updated : Dec 21, 2021, 8:19 AM IST

ಡೆಹ್ರಾಡೂನ್: ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ನಿನ್ನೆ ಡೆಹ್ರಾಡೂನ್ ತಲುಪಿದ್ದಾರೆ. ಈ ವೇಳೆ ಬಿಜೆಪಿ ಯುವಮೋರ್ಚಾದ ಕಾರ್ಯಕರ್ತರು ಭವ್ಯ ಸ್ವಾಗತ ಕೋರಿದರು. ತೇಜಸ್ವಿ ಸೂರ್ಯರನ್ನು ಸ್ವಾಗತಿಸಲು ಜಾಲಿ ಗ್ರಾಂಟ್‌ನಿಂದ ಬಿಜಾಪುರ ಅತಿಥಿ ಗೃಹದವರೆಗೆ ರೋಡ್ ಶೋ ನಡೆಸಲಾಯಿತು. ಈ ವೇಳೆ ಯುವಶಕ್ತಿಯ ದಂಡು ಬೀದಿಗಿಳಿದಿತ್ತು.

ಈ ವೇಳೆ ತೇಜಸ್ವಿ ಸೂರ್ಯ 'ಈಟಿವಿ ಭಾರತ' ಜೊತೆ ಮಾತನಾಡಿದ ಅವರು, ಉತ್ತರಾಖಂಡದ ಆಡಳಿತ ಯುವ ಮುಖ್ಯಮಂತ್ರಿಯ ಕೈನಲ್ಲಿದೆ ಎಂದು ಹೇಳಿದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಉತ್ತರಾಖಂಡದ ಯುವಕರು ಖಂಡಿತವಾಗಿಯೂ ಇತಿಹಾಸ ಸೃಷ್ಟಿಸಲಿದ್ದಾರೆ ಎಂದರು.

ಯುವಕರ ಕೈಯಲಿದೆ ಉತ್ತರಾಖಂಡದ ಅಧಿಕಾರ ಎಂದ ತೇಜಸ್ವಿ

ತೇಜಸ್ವಿ ಸೂರ್ಯ ಮುಂದಿನ 2 ದಿನಗಳ ಕಾಲ ಉತ್ತರಾಖಂಡದಲ್ಲಿ ಇರಲಿದ್ದಾರೆ. ಈ ವೇಳೆ ಮುಂಬರುವ ಚುನಾವಣಾ ಕಾರ್ಯತಂತ್ರದ ಕುರಿತು ಯುವಕರೊಂದಿಗೆ ಚರ್ಚಿಸಲಿದ್ದಾರೆ. ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರ ಸ್ವಾಗತ ಕಾರ್ಯಕ್ರಮದ ನಂತರ ವಿವಿಧ ಸ್ಥಳಗಳಲ್ಲಿ ತೇಜಸ್ವಿ ಸೂರ್ಯ ಸಭೆ ನಡೆಸಲು ನಿನ್ನೆ ಮಧ್ಯಾಹ್ನ ಡೆಹ್ರಾಡೂನ್​ಗೆ ತಲುಪಿದರು.

ಓದಿ:ಆಗಸದಲ್ಲಿ ನಕ್ಷತ್ರದಂತೆ ಗೋಚರಿಸಿದ ಬೆಳಕಿನ ಸರ... ವಿಜ್ಞಾನಿಗಳು ಹೇಳಿದ್ದು ಹೀಗೆ

ತೇಜಸ್ವಿ ಸೂರ್ಯ ಡಿಸೆಂಬರ್ 21 ರಂದು ಬೆಳಿಗ್ಗೆ 7 ಗಂಟೆಗೆ ತಪಕೇಶ್ವರ ಮಹಾದೇವ್​ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ದರ್ಶನದ ನಂತರ ಅಭಿಮನ್ಯು ಕ್ರಿಕೆಟ್ ಅಕಾಡೆಮಿಯಲ್ಲಿ ಮುಖ್ಯಮಂತ್ರಿ 11 ಮತ್ತು ಯುವ ಮೋರ್ಚಾ 11 ರ ನಡುವೆ ನಡೆಯುತ್ತಿರುವ ಪಂದ್ಯದ ಆಟಗಾರರನ್ನು ಗೌರವಿಸುತ್ತಾರೆ. ಇದರೊಂದಿಗೆ ಪಂದ್ಯದಲ್ಲೂ ಪಾಲ್ಗೊಳ್ಳಲಿದ್ದಾರೆ. ಇದಾದ ಬಳಿಕ 11:30ಕ್ಕೆ ತೇಜಸ್ವಿ ಸೂರ್ಯ ಡೆಹ್ರಾಡೂನ್‌ನಲ್ಲಿ ಯುವ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಶ್ರೀನಗರದಲ್ಲಿ ಆಯೋಜಿಸಿರುವ ಯುವ ಸಂವಾದ ಕಾರ್ಯಕ್ರಮದಲ್ಲಿ ಯುವಕರೊಂದಿಗೆ ಸಂವಾದ ನಡೆಸಲಿದ್ದಾರೆ.

ಮಧ್ಯಾಹ್ನ 3 ಗಂಟೆಗೆ ಸೂರ್ಯ ಭನಿಯಾವಾಲಾದಲ್ಲಿ ಆಯೋಜಿಸಿರುವ ಸದಸ್ಯತ್ವ ಕಾರ್ಯಕ್ರಮದಲ್ಲಿ ತೇಜಸ್ವಿ ಭಾಗವಹಿಸಲಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಸಂಜೆ 5 ಗಂಟೆಗೆ ರಿಷಿಕೇಶದಲ್ಲಿ ಗಂಗಾ ಆರತಿಯಲ್ಲಿ ಭಾಗವಹಿಸಲಿದ್ದಾರೆ.

Last Updated : Dec 21, 2021, 8:19 AM IST

ABOUT THE AUTHOR

...view details