ಮುಂಬೈ: 38 ವರ್ಷಗಳ ಹಳೆಯ ಕೊಲೆ ಯತ್ನ ಪ್ರಕರಣದಲ್ಲಿ ವಿಶೇಷ ಎಸ್‌ಬಿಐ ನ್ಯಾಯಾಲಯವು ಭೂಗತ ದೊರೆ ಛೋಟಾ ರಾಜನ್ ಖುಲಾಸೆಗೊಳಿಸಿದೆ, ಪೊಲೀಸರ ಮೇಲೆ ಹಲ್ಲೆ, ಕೊಲೆ ಯತ್ನ ಆರೋಪವಿತ್ತು.
1983ರಲ್ಲಿ ತಿಲಕ್ ನಗರ ಪೊಲೀಸ್ ಠಾಣೆಯ ಪೊಲೀಸರ ತಂಡವು ಪೂರ್ವ ಮುಂಬೈನ ಘಾಟ್‌ಕೋಪರ್‌ನಲ್ಲಿರುವ ರಾಜವಾಡಿ ಆಸ್ಪತ್ರೆಯ ಬಳಿ ಮದ್ಯ ಕಳ್ಳಸಾಗಣೆ ಮಾಡುತ್ತಿದ್ದ ಟ್ಯಾಕ್ಸಿಯನ್ನು ತಡೆದಿದ್ದರು. ಬಂಧಿಸುವ ಮುನ್ನ ಛೋಟಾ ರಾಜನ್ ಇಬ್ಬರು ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದರು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 (ಕೊಲೆಗೆ ಯತ್ನ) ಮತ್ತು 353 (ಕರ್ತವ್ಯಕ್ಕೆ ಅಡ್ಡಿ) ಅಡಿ ಕೇಸ್ ದಾಖಲಾಗಿತ್ತು.
2015ರಲ್ಲಿ ಮುಂಬೈ ಪೊಲೀಸರಿಂದ ಪ್ರಕರಣವನ್ನು ಕೈಗೆತ್ತಿಕೊಂಡ ಕೇಂದ್ರೀಯ ತನಿಖಾ ದಳ (ಸಿಬಿಐ) ನ್ಯಾಯಾಲಯಕ್ಕೆ ವರದಿ ಸಲ್ಲಿಸಿತ್ತು, ಪ್ರಕರಣದ ದಾಖಲೆಗಳು ನಾಪತ್ತೆಯಾಗಿವೆ ಮತ್ತು ಹೆಚ್ಚಿನ ಸಾಕ್ಷಿಗಳು ಪತ್ತೆಯಾಗಿಲ್ಲ ಎಂದು ಸಿಬಿಐ ತಿಳಿಸಿತ್ತು. ಆದರೆ, ತನಿಖೆ ಮುಂದುವರಿಸುವಂತೆ ನ್ಯಾಯಾಲಯ ಸಿಬಿಐಗೆ ಸೂಚಿಸಿತ್ತು.
2015ರಲ್ಲಿ ಇಂಡೋನೇಷ್ಯಾದಿಂದ ಗಡೀಪಾರು ಮಾಡಿದ ನಂತರ ಪ್ರಸ್ತುತ ತಿಹಾರ್ ಜೈಲಿನಲ್ಲಿರುವ ರಾಜನ್ ಸುಮಾರು 70 ಪ್ರಕರಣಗಳಲ್ಲಿ ವಿಚಾರಣೆಯನ್ನು ಎದುರಿಸುತ್ತಿದ್ದಾರೆ ಮತ್ತು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.
ಇದನ್ನೂ ಓದಿ:11 ತಿಂಗಳ ನಂತರ ಗಾಜಿಪುರ ಗಡಿಯಲ್ಲಿ ಬ್ಯಾರಿಕೇಡ್ ತೆರವುಗೊಳಿಸಿದ ದೆಹಲಿ ಪೊಲೀಸರು