ನವದೆಹಲಿ :ಫೆಬ್ರವರಿ 21 ಅಂತಾರಾಷ್ಟ್ರೀಯ ಮಾತೃಭಾಷಾ ದಿನವಾಗಿದೆ. ಈ ಬಗ್ಗೆ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್'ನ 86ನೇ ಆವೃತ್ತಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಜನರು ತಮ್ಮ ಮಾತೃಭಾಷೆಯನ್ನು ಹೆಮ್ಮೆಯಿಂದ ಮಾತನಾಡಬೇಕು ಎಂದು ಕರೆ ನೀಡಿದ್ದಾರೆ.
ನಮ್ಮ ತಾಯಿಯು ನಮ್ಮ ಜೀವನವನ್ನು ರೂಪಿಸುವ ರೀತಿಯಲ್ಲಿ, ಮಾತೃಭಾಷೆಯು ನಮ್ಮ ಜೀವನವನ್ನು ರೂಪಿಸುತ್ತದೆ, ತಾಯಿ ಮತ್ತು ಮಾತೃಭಾಷೆ ಎರಡೂ ಒಟ್ಟಿಗೆ ಜೀವನದ ಅಡಿಪಾಯವನ್ನು ಬಲಪಡಿಸಲು ಸಾಧ್ಯ. ಹಾಗೆಯೇ ನಾವು ನಮ್ಮ ತಾಯಿಯನ್ನಾಗಲಿ, ಮಾತೃಭಾಷೆಯನ್ನಾಗಲಿ ತ್ಯಜಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಹೇಳಿದರು.
ತಮಿಳು ಪ್ರಪಂಚದ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದಾಗಿದೆ. ಇಂತಹ ಮಹತ್ವದ ಪರಂಪರೆಯನ್ನು ನಾವು ಹೊಂದಿದ್ದೇವೆ ಎಂದು ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡಬೇಕು. ಭಾರತದ ಜನರು 121 ಪ್ರಕಾರದ ಮಾತೃಭಾಷೆಗಳೊಂದಿಗೆ ಸಂಬಂಧ ಹೊಂದಿದ್ದಾರೆ.