ವಾರಣಾಸಿ: ನಟ ಸೋನು ಸೂದ್ ಮತ್ತು ಸನ್ನಿ ಲಿಯೋನ್ಗೆ ಅಂಗರಕ್ಷಕನಾಗಿ ಕೆಲಸ ಮಾಡಿದ್ದ, ವಾರಣಾಸಿ ಹತ್ತಿರದ ಚೋಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಭೈಠೋಲಿ ಗ್ರಾಮದ ನಿವಾಸಿ ಅವಿನಾಶ್ ಸಿಂಗ್ ಬುಧವಾರ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಕೊರೊನಾ ಪೀಡಿತರಾಗಿದ್ದ ಅವಿನಾಶ್ ಅವರಿಗೆ ಬಾಬತಪುರ ಪಟ್ಟಣದ ಸನ್ಮುಖ ಆಸ್ಪತ್ರೆಯಲ್ಲಿ ಕಳೆದ ಒಂದು ವಾರದಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಕಳೆದ ಮೂರು ದಿನಗಳಿಂದ ವೆಂಟಿಲೇಟರ್ ಮೇಲಿದ್ದ ಅವರು ಬುಧವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಸೋನು ಸೂದ್, ಸನ್ನಿ ಲಿಯೋನ್ಗೆ ಅಂಗರಕ್ಷಕನಾಗಿದ್ದ ಅವಿನಾಶ್ ಕೊರೊನಾಗೆ ಬಲಿ - corona death
ಅವಿನಾಶ್ ಚಿಕ್ಕಂದಿನಲ್ಲಿಯೇ ಮುಂಬೈ ಸೇರಿಕೊಂಡು ಅಲ್ಲಿಯೇ ಇರುತ್ತಿದ್ದರು. ಸ್ವಗ್ರಾಮಕ್ಕೆ ಬರುವುದು ಅಪರೂಪವಾಗಿತ್ತು. ಆದರೆ ಕಳೆದ ವರ್ಷ ಕೊರೊನಾ ಹರಡಿದಾಗ ಮುಂಬೈ ಬಿಟ್ಟು ಸ್ವಗ್ರಾಮಕ್ಕೆ ಬಂದು ನೆಲೆ ಕಂಡುಕೊಂಡಿದ್ದರು.
ಬಾಲಿವುಡ್ ನಟ ಸೋನು ಸೂದ್ ಹಾಗೂ ಮಾಡೆಲ್ ಸನ್ನಿ ಲಿಯೋನ್ ಅವರಿಗೆ ಮುಂಬೈನಲ್ಲಿ ಅಂಗರಕ್ಷಕರಾಗಿ ಅವಿನಾಶ್ ಕೆಲಸ ಮಾಡಿದ್ದರು. ಆದರೆ ಮೇ 2020ರಲ್ಲಿಯೇ ಮುಂಬೈ ತೊರೆದು ಸ್ವಗ್ರಾಮ ಬೈಠೋಲಿಗೆ ಬಂದು ನೆಲೆಸಿದ್ದರು. ಸ್ಥಳೀಯ ಅಶುತೋಷ ಕ್ಲಬ್ ಎಂಬ ಜಿಮ್ನಲ್ಲಿ ಫಿಟ್ನೆಸ್ ಟ್ರೇನರ್ ಆಗಿ ಕೆಲಸ ಮಾಡುತ್ತ ಪರಿವಾರದೊಂದಿಗೆ ಜೀವನ ಸಾಗಿಸುತ್ತಿದ್ದರು. ಅವಿನಾಶ್ ಅವರಿಗೆ ಒಂದು ವರ್ಷದ ಹೆಣ್ಣು ಮಗುವಿದೆ.
ಅವಿನಾಶ್ ಚಿಕ್ಕಂದಿನಲ್ಲಿಯೇ ಮುಂಬೈ ಸೇರಿಕೊಂಡು ಅಲ್ಲಿಯೇ ಇರುತ್ತಿದ್ದರು. ಸ್ವಗ್ರಾಮಕ್ಕೆ ಬರುವುದು ಅಪರೂಪವಾಗಿತ್ತು. ಆದರೆ ಕಳೆದ ವರ್ಷ ಕೊರೊನಾ ಹರಡಿದಾಗ ಮುಂಬೈ ಬಿಟ್ಟು ಸ್ವಗ್ರಾಮಕ್ಕೆ ಬಂದು ನೆಲೆ ಕಂಡುಕೊಂಡಿದ್ದರು. ಇವರ ತಂದೆಯು ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವುದು ಸಹ ಅವಿನಾಶ್ರನ್ನು ಚಿಂತೆಗೆ ದೂಡಿತ್ತು.