ಕರ್ನಾಟಕ

karnataka

ETV Bharat / bharat

ಉಕ್ರೇನ್​ನಲ್ಲಿ ಮಗ, ಚಿಂತೆಯಲ್ಲೇ ಪ್ರಾಣಬಿಟ್ಟ ತಾಯಿ: ವಿಡಿಯೋ ಕರೆಯ​ಲ್ಲೇ ಅಂತಿಮ ದರ್ಶನ ಪಡೆದ ಪುತ್ರ - ಉಕ್ರೇನ್ ಮೇಲೆ ರಷ್ಯಾ ದಾಳಿ

ಉಕ್ರೇನ್​ನಲ್ಲಿ ಸಿಲುಕಿಕೊಂಡಿರುವ ತಮಿಳುನಾಡು ಮೂಲದ ವಿದ್ಯಾರ್ಥಿಯು ವಿಡಿಯೋ ಕಾಲ್​ನಲ್ಲಿ ತಾಯಿಯ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಘಟನೆ ನಡೆದಿದೆ.

Son stranded in Ukraine
ವಿಡಿಯೋ ಕಾಲ್​ನಲ್ಲಿ ಅಂತಿಮ ದರ್ಶನ

By

Published : Feb 28, 2022, 8:32 AM IST

ತಿರುಪತ್ತೂರ್(ತಮಿಳುನಾಡು): ರಷ್ಯಾ ದಾಳಿಯಿಂದಾಗಿ ಉಕ್ರೇನ್​ನಲ್ಲಿ ಅಂದಾಜು 13 ಸಾವಿರ ಭಾರತೀಯರು ಸಿಲುಕಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಮಕ್ಕಳನ್ನು ರಕ್ಷಿಸುವಂತೆ ಕೇಂದ್ರ ಸರ್ಕಾರಕ್ಕೆ ಪೋಷಕರು ಮನವಿ ಮಾಡುತ್ತಿದ್ದಾರೆ.

ಈ ಮಧ್ಯೆ ಉಕ್ರೇನ್​ನಲ್ಲಿ ಸಿಲುಕಿರುವ ತನ್ನ ಮಗನ ಬಗ್ಗೆ ತೀವ್ರವಾಗಿ ಚಿಂತಿಸುತ್ತಿದ್ದ ತಾಯಿಯೊಬ್ಬರು ಮೃತಪಟ್ಟಿದ್ದಾರೆ. ಯುದ್ಧಪೀಡಿತ ದೇಶದಿಂದ ಸ್ವದೇಶಕ್ಕೆ ಬರಲು ಸಾಧ್ಯವಾಗದ ಮಗ ವಿಡಿಯೋ ಕರೆಯಲ್ಲೇ ಅಮ್ಮನ ಪಾರ್ಥಿವ ಶರೀರದ ದರ್ಶನ ಪಡೆದಿದ್ದು ಮನಕಲಕುವಂತಿತ್ತು.

ತಮಿಳುನಾಡಿನ ತಿರುಪತ್ತೂರು ಜಿಲ್ಲೆಯ ಪುದೂರಿನ ಶಶಿಕಲಾ ಮೃತ ಮಹಿಳೆ. ಶಂಕರ್ ಮತ್ತು ಶಶಿಕಲಾ ದಂಪತಿಯ ಮಗ ಶಕ್ತಿವೆಲ್ ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದು, ಉಕ್ರೇನ್​ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಇತ್ತ ಮೊದಲೇ ಬಿಪಿ ಮತ್ತು ಡಯಾಬಿಟಿಸ್​ನಿಂದ ಬಳಲುತ್ತಿದ್ದ ಶಶಿಕಲಾ ಉಕ್ರೇನ್​ನಲ್ಲಿ ಯುದ್ಧ ಆರಂಭವಾದ ಬಳಿಕ ಮಗನ ಪರಿಸ್ಥಿತಿ ಬಗ್ಗೆ ತೀವ್ರವಾಗಿ ಚಿಂತಿಸುತ್ತಿದ್ದರಂತೆ. ಫೆ.26 ರ ಸಂಜೆ ಅಸ್ವಸ್ಥರಾಗಿ ಕುಸಿದು ಬಿದ್ದ ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಆಸ್ಪತ್ರೆಗೆ ದಾಖಲಿಸಿದ ಕೆಲವೇ ಹೊತ್ತಿನಲ್ಲಿ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ.

ಶಕ್ತಿವೇಲ್ ಉಕ್ರೇನ್​ನಲ್ಲಿ ಸಿಲುಕಿಕೊಂಡಿದ್ದು, ತಾಯಿನ ಅಂತ್ಯಸಂಸ್ಕಾರಕ್ಕೆ ಬರುವ ಸ್ಥಿತಿಯಲ್ಲಿರಲಿಲ್ಲ. ಅಂತೆಯೇ, ಪೋಷಕರು ವಿಡಿಯೋ ಕರೆಯಲ್ಲೇ ಮಗನಿಗೆ ತಾಯಿಯ ಮೃತದೇಹದ ಅಂತಿಮ ದರ್ಶನ ಮಾಡಿಸಿದರು.

ಇದನ್ನೂ ಓದಿ: ರಷ್ಯಾ ವಿರುದ್ಧ ಹೋರಾಡಲು ಗನ್‌ ಹಿಡಿದ ಉಕ್ರೇನ್ ಸುಂದರಿ

ABOUT THE AUTHOR

...view details