ಗುವಾಹಟಿ (ಅಸ್ಸೋಂ):ಏಕಾಏಕಿ ಬೆಂಕಿ ಹೊತ್ತಿಕೊಂಡ ಕಾರಿನಿಂದ ಆರು ಜನರನ್ನು ಯೋಧರು ರಕ್ಷಣೆ ಮಾಡಿರುವ ಘಟನೆ ಮಾಡಿರುವ ಘಟನೆ ಅಸ್ಸೋಂನ ಧೇಮಾಜಿ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಇದ್ದಕ್ಕಿದ್ದಂತೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿಯಲು ಆರಂಭಿಸಿದೆ. ಈ ವಿಷಯ ತಿಳಿದ ಯೋಧರು ಸ್ಥಳಕ್ಕೆ ಧಾವಿಸಿ ಬೆಂಕಿ ಹೊತ್ತಿಕೊಂಡ ಕಾರಿನಿಂದ ಚಾಲಕ ಹಾಗೂ ಐದು ಪ್ರಯಾಣಿಕರು ಸೇರಿ ಆರು ಜನರನ್ನು ರಕ್ಷಿಸಿದ್ದಾರೆ.
ಯೋಧರ ಸಮಯೋಚಿತ ಕಾರ್ಯದಿಂದ ಆರು ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯಿಂದ ಆಘಾತಕ್ಕೊಳಗಾದ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಸದ್ಯ ಸಂಚಾರ ದಟ್ಟಣೆ ಸಹಜ ಸ್ಥಿತಿಗೆ ಬಂದಿದೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿ:ರಾಷ್ಟ್ರೀಯ ಉದ್ಯಾನವನದಲ್ಲಿ ಘೇಂಡಾಮೃಗಕ್ಕೆ ಗಾಯ: ಟ್ರಕ್ ಚಾಲಕನಿಗೆ 14 ಸಾವಿರ ದಂಡ