ಹೈದರಾಬಾದ್:ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜಮ್ಮು- ಕಾಶ್ಮೀರದ ವಿಷಯ ಪ್ರಸ್ತಾಪ ಮಾಡಿದ್ದ ಪಾಕ್ ಪ್ರಧಾನಿಗೆ ತೀಕ್ಷ್ಣವಾಗಿ ತಿರುಗೇಟು ನೀಡಿರುವ ಭಾರತದ ಕಾರ್ಯದರ್ಶಿ ಸ್ನೇಹಾ ದುಬೆ ಬಗ್ಗೆ ಇದೀಗ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಪಾಕಿಸ್ತಾನಕ್ಕೆ ಕಟುವಾಗಿ ಉತ್ತರ ನೀಡಿ, ಭಾರತೀಯರ ಹೃದಯ ಗೆದ್ದಿರುವ ಇವರ ಬಗ್ಗೆ ಇದೀಗ ಹೆಚ್ಚಿನ ಚರ್ಚೆಯಾಗಲು ಶುರುವಾಗಿದೆ.
ಸ್ನೇಹಾ ದುಬೆ 2012ರ ಐಎಫ್ಎಸ್ ಬ್ಯಾಚ್ನ ಅಧಿಕಾರಿಯಾಗಿದ್ದು, ಸಿವಿಲ್ ಸರ್ವೀಸ್ನ ಪರೀಕ್ಷೆಯನ್ನ ಮೊದಲ ಸುತ್ತಿನಲ್ಲೇ ಪಾಸ್ ಮಾಡಿದ್ದರು. ಗೋವಾದಲ್ಲಿ ಶಾಲಾ ಶಿಕ್ಷಣ ಮುಗಿಸಿರುವ ಇವರು, ತದನಂತರ ಪುಣೆಯ ಫರ್ಗ್ಯುಸನ್ ಕಾಲೇಜ್ನಲ್ಲಿ ಕಾಲೇಜ್ ಹಂತದ ಶಿಕ್ಷಣ ತದನಂತರ MPhil ಶಿಕ್ಷಣವನ್ನ ಜವಾಹರ್ಲಾಲ್ ನೆಹರು ವಿಶ್ವವಿದ್ಯಾಲಯದಿಂದ ಪಡೆದುಕೊಂಡಿದ್ದಾರೆ.
ಯಾರಿದು ಸ್ನೇಹಾ ದುಬೆ?
ಯುಪಿಎಸ್ಸಿ ಪರೀಕ್ಷೆ ಪಾಸ್ ಆಗಿ ಸರ್ಕಾರಿ ನೌಕರಿ ಪಡೆದ ಸ್ನೇಹಾ ದುಬೈ ತಂದೆ ವ್ಯಾಪಾರಿಯಾಗಿದ್ದು, 12 ವರ್ಷದ ಬಾಲಕಿಯಾಗಿದ್ದ ಸಂದರ್ಭದಲ್ಲೇ ಇಂಡಿಯನ್ ಫಾರಿನ್ ಸರ್ವೀಸ್ ಸೇರುವ ಆಸೆ ಕಂಡಿದ್ದರು. ಅದಕ್ಕಾಗಿ ಎಲ್ಲ ರೀತಿಯ ತಯಾರಿ ನಡೆಸಿ 2011ರಲ್ಲಿ ಮೊದಲ ಪ್ರಯತ್ನದಲ್ಲೇ ಪರೀಕ್ಷೆ ಪಾಸ್ ಮಾಡಿದ್ದರು.