ಕರ್ನಾಟಕ

karnataka

ETV Bharat / bharat

ಈಗಾಗಲೇ ನೀವು ಸತ್ತಿದ್ದೀರಿ ಎಂದರು.. ಈ ಮಾತು ಕೇಳಿದ ವೃದ್ಧರೆಲ್ಲಾ ಶಾಕ್​..!  ಏನಿದು ಎಡವಟ್ಟು!! - etvbharatkannada

ಸರ್ಕಾರಿ ಪೇಪರ್‌ಗಳಲ್ಲಿ ಅವರು ಸತ್ತಿದ್ದಾರೆ ಎಂಬ ಸುದ್ದಿ ತಿಳಿದು ಎಲ್ಲರೂ ಆಘಾತಕ್ಕೊಳಗಾಗಿ ಜೀವಂತವಾಗಿದ್ದೇವೆ ಎಂದು ಸಾಬೀತುಪಡಿಸಲು ಕೊರಳಲ್ಲಿ ಫಲಕವನ್ನು ಹಿಡಿದುಕೊಂಡು ಡಿಸಿ ಕಚೇರಿ ಬಳಿ ಬಂದಿದ್ದಾರೆ.

ವರ್ಷದಿಂದ ಪಿಂಚಣಿ ಬಾರದ ಹಿನ್ನೆಲೆ ವೃದ್ಧರು ಸಂಕಷ್ಟಕ್ಕೆ ಸಿಲುಕಿದ್ದಾರೆ
ವರ್ಷದಿಂದ ಪಿಂಚಣಿ ಬಾರದ ಹಿನ್ನೆಲೆ ವೃದ್ಧರು ಸಂಕಷ್ಟಕ್ಕೆ ಸಿಲುಕಿದ್ದಾರೆ

By

Published : Jul 26, 2022, 8:53 PM IST

ಮಹೋಬ(ಉತ್ತರಪ್ರದೇಶ): ಜಿಲ್ಲೆಯಲ್ಲಿ ಸರ್ಕಾರಿ ಸಿಬ್ಬಂದಿಯ ಬೇಜವಾಬ್ದಾರಿಯಿಂದ 6 ಜನ ವೃದ್ಧರು ಬದುಕಿದ್ದರೂ ಸರ್ಕಾರಿ ದಾಖಲೆಯಲ್ಲಿ ಅವರನ್ನು ಸಾಯಿಸಿದ್ದಾರೆ. ಇದರಿಂದ ಕಳೆದ ಒಂದೂವರೆ ವರ್ಷದಿಂದ ಅವರಿಗೆ ವೃದ್ಧಾಪ್ಯ ವೇತನ ಸಿಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನೊಂದ ಹಿರಿಯರು ‘ಸಾಹೇಬ್ ಐ ಜಿಂದಾ ಹೂಂ’ ಎಂಬ ಫಲಕಗಳನ್ನು ಕೊರಳಿಗೆ ನೇತು ಹಾಕಿಕೊಂಡು ತಿರುಗಾಡುತ್ತಿದ್ದಾರೆ. ಈ ಎಲ್ಲ ಹಿರಿಯರು ತಾವು ಜೀವಂತವಾಗಿರುವುದನ್ನು ಸಾಬೀತುಪಡಿಸಲು ಮುಂದಾಗಿದ್ದಾರೆ.

ಸರ್ಕಾರಿ ಪೇಪರ್‌ಗಳಲ್ಲಿ ಅವರು ಸತ್ತಿದ್ದಾರೆ ಎಂಬ ಸುದ್ದಿ ತಿಳಿದು ಎಲ್ಲರೂ ಆಘಾತಕ್ಕೊಳಗಾಗಿ ಜೀವಂತವಾಗಿದ್ದೇವೆ ಎಂದು ಸಾಬೀತುಪಡಿಸಲು ಕೊರಳಲ್ಲಿ ಫಲಕವನ್ನು ಹಿಡಿದುಕೊಂಡು ಡಿಸಿ ಕಚೇರಿಯ ಬಾಗಿಲ ಬಳಿ ಬಂದಿದ್ದಾರೆ. ಸರ್ಕಾರಿ ಸಿಬ್ಬಂದಿಯ ನಿರ್ಲಕ್ಷ್ಯದ ಈ ಪ್ರಕರಣವು ಮಹೋಬಾ ತಹಸಿಲ್ ಪ್ರದೇಶದ ಪಚ್ಪಹ್ರಾ ಗ್ರಾಮಕ್ಕೆ ಸಂಬಂಧಿಸಿದೆ. ಅಲ್ಲಿ ಮಾಜಿ ಕಾರ್ಯದರ್ಶಿ 6 ವೃದ್ಧರು ಸತ್ತಿದ್ದಾರೆ ಪರಿಗಣಿಸಿ ಅದನ್ನು ದಾಖಲೆಯಲ್ಲಿ ಬರೆದಿದ್ದಾರೆ.

ವರ್ಷದಿಂದ ಬಾರದ ಪಿಂಚಣಿ

ಈ ವೃದ್ಧರೆಲ್ಲರೂ ಪಚ್ಪಹ್ರಾ ಗ್ರಾಮದ ನಿವಾಸಿಗಳು. ವೃದ್ಧ ಸರ್ಮನ್, ಗಿರ್ಜರಾಣಿ, ಕಾಲಿಯಾ, ಸುರ್ಜಿ, ನಂದಕಿಶೋರ್, ರಾಕೇಶರಾಣಿ ಅವರು ಸರ್ಕಾರದಿಂದ ಬರುವ ವೃದ್ಧಾಪ್ಯ ವೇತನದಲ್ಲಿ ಜೀವನ ಸಾಗಿಸುತ್ತಿದ್ದು, ಕಳೆದ ಒಂದೂವರೆ ವರ್ಷಗಳಿಂದ ಅವರ ಖಾತೆಗೆ ಪಿಂಚಣಿ ಬರುತ್ತಿಲ್ಲ. ಈ ಅಸಹಾಯಕ ಬಡವರೆಲ್ಲರಿಗೂ ವೃದ್ಧಾಪ್ಯ ವೇತನ ಸಿಗದ ಕಾರಣ ಸಮಾಜ ಕಲ್ಯಾಣ ಇಲಾಖೆಯಲ್ಲಿ ವಿಚಾರಿಸಿದಾಗ ಅವರೆಲ್ಲ ಸತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ಜಿಲ್ಲಾಧಿಕಾರಿಗಳ ಬಳಿ ತಲುಪಿದ ವೃದ್ಧರೆಲ್ಲರೂ ಅವರಿಗೆ ಲಿಖಿತ ಅರ್ಜಿಯೊಂದಿಗೆ ಅಫಿಡವಿಟ್ ಸಲ್ಲಿಸಿದ್ದಾರೆ. ಅದರಲ್ಲಿ ಅವರು ಜೀವಂತವಾಗಿದ್ದರೂ ಹಿಂದಿನ ಗ್ರಾಮಾಭಿವೃದ್ಧಿ ಅಧಿಕಾರಿ 500 ರೂಪಾಯಿ ಲಂಚ ನೀಡಲಿಲ್ಲ ಎಂದು ಈ ರೀತಿ ಮಾಡಿದ್ದಾರೆ. ಇದರಿಂದಾಗಿ ಪಿಂಚಣಿ ಬರುವುದು ನಿಂತುಹೋಗಿದೆ ಮತ್ತು ಆರ್ಥಿಕ ಸ್ಥಿತಿಯ ಮೇಲೆ ದೊಡ್ಡ ಪರಿಣಾಮ ಉಂಟಾಗಿದೆ ಎಂದು ನೋವು ತೋಡಿಕೊಂಡಿದ್ದಾರೆ.

ಯಾವುದೇ ದುರುದ್ದೇಶದಿಂದ ಆ ರೀತಿ ಮಾಡಿಲ್ಲ, ಕೆಲವು ತಾಂತ್ರಿಕ ಕೊರತೆಯಿಂದ ಇದು ಸಂಭವಿಸಿದೆ. ಸದ್ಯ ಸಂಪೂರ್ಣ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಡಿಎಂ ಹೇಳಿದ್ದಾರೆ.

ಇದನ್ನೂ ಓದಿ:ನನ್ನ ಇಚ್ಛೆಗೆ ವಿರುದ್ಧವಾಗಿ ಲಿಂಗ ಬದಲಾವಣೆ: ಇಬ್ಬರು ತೃತೀಯ ಲಿಂಗಿಗಳ ವಿರುದ್ಧ ತೃತೀಯ ಲಿಂಗಿಯ ಆರೋಪ

ABOUT THE AUTHOR

...view details