ಕರ್ನಾಟಕ

karnataka

ETV Bharat / bharat

ಪತಿಯೊಂದಿಗೆ ಜಗಳ: ಆರು ಮಕ್ಕಳ ಕೊಂದು ಬಾವಿಗೆ ಎಸೆದ ಪಾಪಿ ತಾಯಿ - MOTHER SUICIDE WITH CHILDRENS IN MAHAD SIX SIX CHILDRENS DEATH

ಗಂಡನೊಂದಿಗೆ ಜಗಳವಾಡಿರುವ ಹೆಂಡತಿಯೊಬ್ಬಳು ಆರು ಮಕ್ಕಳನ್ನ ಹತ್ಯೆ ಮಾಡಿ ಬಾವಿಗೆ ಎಸೆದಿದ್ದಾಳೆ. ಮಹಾರಾಷ್ಟ್ರದಲ್ಲಿ ಈ ಘಟನೆ ನಡೆದಿದೆ.

Six children are killed Raigad
Six children are killed Raigad

By

Published : May 30, 2022, 11:02 PM IST

ರಾಯಗಢ(ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ಭೀಕರ ಘಟನೆಯೊಂದು ನಡೆದಿರುವುದು ಬೆಳಕಿಗೆ ಬಂದಿದೆ. ಆರು ಮಕ್ಕಳ ಜೊತೆ ತಾಯಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆಂದು ತಿಳಿದು ಬಂದಿದೆ. ಮಹಾರಾಷ್ಟ್ರದ ದಲ್ಕತಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಘಟನಾ ಸ್ಥಳಕ್ಕೆ ತಲುಪಿರುವ ಪೊಲೀಸರು ಈಗಾಗಲೇ ಎಲ್ಲ ಮೃತದೇಹಗಳನ್ನ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದು. ತನಿಖೆ ಮುಂದುವರೆದಿದೆ. ಮಕ್ಕಳ ಮೃತದೇಹಗಳನ್ನ ಈಗಾಗಲೇ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.ಲಭ್ಯವಾಗಿರುವ ಮಾಹಿತಿ ಪ್ರಕಾರ, ಪತಿ ಜೊತೆ ಜಗಳವಾಡಿರುವ ಮಹಿಳೆಯಾಗಿದ್ದಾರೆ. ತನ್ನ ಐವರು ಪುತ್ರಿಯರು ಹಾಗೂ ಒಂದೂವರೆ ವರ್ಷದ ಬಾಲಕನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಘಟನೆಯಲ್ಲಿ ಐವರು ಮಕ್ಕಳು ಸಾವನ್ನಪ್ಪಿದ್ದು, ಮಹಿಳೆಯನ್ನ ರಕ್ಷಣೆ ಮಾಡಲಾಗಿದೆ.

ABOUT THE AUTHOR

...view details