ನವದೆಹಲಿ:ಕಸ್ಟಮ್ ಅಧಿಕಾರಿಗಳು ಎಂದು ಹೇಳಿಕೊಂಡು ಆರು ಜನರು ಶಸ್ತ್ರಾಸ್ತ್ರದೊಂದಿಗೆ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸರಕು ಟರ್ಮಿನಲ್ ಒಳಗೆ ಪ್ರವೇಶಿಸಿದ್ದಾರೆ.
ಆರೋಪಿಗಳು ಫಾರ್ಚೂನರ್ ಕಾರಿನಲ್ಲಿ ಬಂದಿದ್ದು, ಮಾಹಿತಿ ತಿಳಿದ ಕೂಡಲೇ ಸಿಐಎಸ್‌ಎಫ್ ಸಿಬ್ಬಂದಿ ಆರು ಜನರನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಐಎಸ್ಎಫ್ ಸಿಬ್ಬಂದಿ ಕಾರು ಸವಾರರನ್ನು ಹಿಡಿದು ಕೂಡಲೇ ಪೊಲೀಸರಿಗೆ ಒಪ್ಪಿಸಿದರು. ಕಾರಿನಲ್ಲಿದ್ದ ರೈಫಲ್ ಸೆಕ್ಯುರಿಟಿ ಗಾರ್ಡ್‌ಗೆ ಸೇರಿದ್ದು, ಸೆಕ್ಯುರಿಟಿ ಗಾರ್ಡ್ ಕೂಡ ಕಾರಿನಲ್ಲಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ. ಪೊಲೀಸರ ಪ್ರಕಾರ, ಆರೋಪಿಗಳು ಮಾದಕ ವ್ಯಸನಿಯಾಗಿದ್ದು, ಕಸ್ಟಮ್ ಅಧಿಕಾರಿಯನ್ನು ಭೇಟಿಯಾಗಲು ಬಂದಿದ್ದರು.
ಬಂಧಿತರಿಂದ ರೈಫಲ್ ಮತ್ತು 31 ಕಾರ್ಟ್ರಿಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಗುಪ್ತಚರ ದಳದ ಅಧಿಕಾರಿಗಳು, ದೆಹಲಿ ಪೊಲೀಸರು ಮತ್ತು ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಆರೋಪಿಗಳ ವಿಚಾರಣೆ ನಡೆಸಿದ್ದಾರೆ.
ಆರೋಪಿಗಳನ್ನು ಶಿವರಾಜ್, ತರುಣ್ ಸಚ್‌ದೇವ, ವಿಲಾಸ್ ರಾಮ್, ಪ್ರತಾಪ್ ಸಿಂಗ್, ಅನಿಲ್ ಕುಮಾರ್ ಮತ್ತು ಗುಲ್ಶನ್ ಸೈನಿ ಎಂದು ಗುರುತಿಸಲಾಗಿದೆ.