ಸಿವಾನ್(ಬಿಹಾರ):ದೇಶಾದ್ಯಂತ ಕಾಮುಕರ ಅಟ್ಟಹಾಸ ಹೆಚ್ಚಾಗಿದ್ದು, ರಕ್ಷಾಬಂಧನದ ದಿನ ಸಹೋದರನಿಗೆ ರಾಖಿ ಕಟ್ಟಲು ತೆರಳುತ್ತಿದ್ದ ಅಪ್ರಾಪ್ತೆ ಮೇಲೆ ಮೂವರು ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಬಿಹಾರದ ಸಿವಾನ್ ಎಂಬಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
15 ವರ್ಷದ ಬಾಲೆ ತನ್ನ ಅಜ್ಜಿಯ ಮನೆಯಲ್ಲಿ ವಾಸವಾಗಿದ್ದಳು. ಪೋಷಕರೊಂದಿಗೆ ಬೇರೆ ಪ್ರದೇಶದಲ್ಲಿದ್ದ ಸಹೋದರನಿಗೆ ರಾಖಿ ಕಟ್ಟುವ ಉದ್ದೇಶದಿಂದ ನಡೆದುಕೊಂಡು ಹೋಗುತ್ತಿದ್ದಳು. ಈ ವೇಳೆ ದಾರಿಯಲ್ಲಿ ಮೂವರು ಕಾಮುಕರು ಆಕೆಯನ್ನು ಬಲವಂತವಾಗಿ ಕರೆದೊಯ್ದು ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ. ವಿರೋಧ ವ್ಯಕ್ತಪಡಿಸಿದ್ದಕ್ಕಾಗಿ ಆಕೆಯ ಮೇಲೆ ಹಲ್ಲೆ ಸಹ ನಡೆಸಲಾಗಿದೆ. ಸಿವಾನ್ ಜಿಲ್ಲೆಯ ಭಗವಾನ್ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.