ಕರ್ನಾಟಕ

karnataka

By

Published : Nov 2, 2021, 3:59 PM IST

ETV Bharat / bharat

ಪಂಜಾಬ್‌ ಸಿಎಂ ವಿರುದ್ಧವೇ ತಿರುಗಿಬಿದ್ದ ನವಜೋತ್‌ ಸಿಂಗ್‌ ಸಿಧು ; ಚನ್ನಿ ಯೋಜನೆಗಳನ್ನು ಲಾಲಿಪಾಪ್‌ಗೆ ಹೋಲಿಸಿ ಟೀಕೆ

ಎರಡು ತಿಂಗಳಲ್ಲಿ ಜನರಿಗೆ 'ಲಾಲಿಪಾಪ್‌ಗಳನ್ನು' ನೀಡಿ. ಇದನ್ನು ಎಲ್ಲಿಂದ ನೀಡುತ್ತದೆ ಎಂಬುದು ನನ್ನ ಪ್ರಶ್ನೆ. ಕೇವಲ ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಸರ್ಕಾರವನ್ನು ರಚಿಸುವ ಉದ್ದೇಶವೇ? ಪಂಜಾಬ್‌ನ ಕಲ್ಯಾಣವು ಮಾರ್ಗಸೂಚಿಯಿಂದ ಬರುತ್ತದೆ. ರಾಜಕಾರಣಿಗಳು ಮತ್ತು ವಿವಿಧ ರಾಜಕೀಯ ಪಕ್ಷಗಳಿಗೆ ಉಚಿತ ಕೊಡುಗೆಗಳನ್ನು ಘೋಷಿಸುವ ಮೂಲಕ ಮತದಾರರನ್ನು ಸೆಳೆಯುವ ತಂತ್ರಗಳಲ್ಲಿ ತೊಡಗಬೇಡಿ ಎಂದು ಸಲಹೆ ನೀಡಿದ್ದಾರೆ..

Sidhu slams Channi for promising 'lollipops' amid infight in Punjab Congress
ಪಂಜಾಬ್‌ ಸಿಎಂ ವಿರುದ್ಧವೇ ತಿರುಗಿಬಿದ್ದ ನವಜೋತ್‌ ಸಿಂಗ್‌ ಸಿಧು; ಚನ್ನಿ ಯೋಜನೆಗಳನ್ನು ಲಾಲಿಪಾಪ್‌ಗೆ ಹೋಲಿಸಿ ಟೀಕೆ

ಚಂಡೀಗಢ :ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಹಾಲಿ ಮುಖ್ಯಮಂತ್ರಿ ವಿರುದ್ಧವೂ ಕ್ಯಾತೆ ತೆಗೆದಿದ್ದಾರೆ. ವಿಧಾನಸಭೆ ಚುನಾವಣೆ ಘೋಷಣೆಗೂ ಮುನ್ನವೇ ಸಿಎಂ ಚರಂಜಿತ್‌ ಸಿಂಗ್‌ ಚನ್ನಿ ಅವರು ಇತ್ತೀಚೆಗೆ ಘೋಷಿಸಿರುವ ಯೋಜನೆಗಳನ್ನು 'ಲಾಲಿಪಾಪ್‌' ಎಂದಿದ್ದಾರೆ.

ಸಂಯುಕ್ತ ಹಿಂದೂ ಮಹಾಸಭಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ವಪಕ್ಷದವರನ್ನೇ ಗುರಿಯಾಗಿಸಿ ಮಾತನಾಡಿರುವ ನವಜೋತ್‌ ಸಿಂಗ್‌, ಚುನಾವಣೆಗೆ ಮುಂಚಿತವಾಗಿ ರಾಜಕಾರಣಿಗಳು ಲಾಲಿಪಾಪ್‌ ಆಫರ್‌ಗಳನ್ನು ನೀಡುತ್ತಿದ್ದಾರೆ.

ರಾಜ್ಯದ ಕಲ್ಯಾಣವು ಮಾರ್ಗಸೂಚಿಯಿಂದ ಬರುತ್ತದೆಯೇ ಹೊರತು ತಂತ್ರಗಳಿಂದಲ್ಲ ಎಂದು ಹೇಳಿದ್ದಾರೆ. ಇದು ಅಲ್ಲಿನ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಇಲ್ಲ ಎನ್ನಲಾಗುತ್ತಿದೆ.

ಸಿಎಂ ಚನ್ನಿ ಅವರು ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯಲ್ಲಿ ಶೇ.11ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದರು. ಇದಾದ ಕೆಲವೇ ದಿನಗಳ ಅಂತರಲ್ಲಿ ಪ್ರತಿ ಯೂನಿಟ್‌ಗೆ 3 ರೂಪಾಯಿಗಳಷ್ಟು ವಿದ್ಯುತ್ ದರವನ್ನು ಕಡಿತಗೊಳಿಸಿದ್ದರು. ಇದರ ಬೆನ್ನಲ್ಲೇ ಸಿಧು ಅವರು ಪಂಜಾಬ್‌ನಲ್ಲಿ ತಮ್ಮದೇ ಸರ್ಕಾರದ ವಿರುದ್ಧ ಟೀಕೆಗಳನ್ನು ಮಾಡಿದ್ದಾರೆ.

ಎರಡು ತಿಂಗಳಲ್ಲಿ ಜನರಿಗೆ 'ಲಾಲಿಪಾಪ್‌ಗಳನ್ನು' ನೀಡಿ. ಇದನ್ನು ಎಲ್ಲಿಂದ ನೀಡುತ್ತದೆ ಎಂಬುದು ನನ್ನ ಪ್ರಶ್ನೆ. ಕೇವಲ ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಸರ್ಕಾರವನ್ನು ರಚಿಸುವ ಉದ್ದೇಶವೇ? ಪಂಜಾಬ್‌ನ ಕಲ್ಯಾಣವು ಮಾರ್ಗಸೂಚಿಯಿಂದ ಬರುತ್ತದೆ.

ರಾಜಕಾರಣಿಗಳು ಮತ್ತು ವಿವಿಧ ರಾಜಕೀಯ ಪಕ್ಷಗಳಿಗೆ ಉಚಿತ ಕೊಡುಗೆಗಳನ್ನು ಘೋಷಿಸುವ ಮೂಲಕ ಮತದಾರರನ್ನು ಸೆಳೆಯುವ ತಂತ್ರಗಳಲ್ಲಿ ತೊಡಗಬೇಡಿ ಎಂದು ಸಲಹೆ ನೀಡಿದ್ದಾರೆ.

'ಶಿಕ್ಷಕರ ಸಂಬಳ ತಿಂಗಳಿಗೆ 50 ಸಾವಿರಕ್ಕೆ ಹೆಚ್ಚಿಸಿ':ರಾಜ್ಯದ ಅಭಿವೃದ್ಧಿಯ ಗುರಿಯನ್ನು ಹೊಂದಿರುವ ಕಾರ್ಯಸೂಚಿಗೆ ಮತ ಚಲಾಯಿಸುವಂತೆ ಜನರನ್ನು ಒತ್ತಾಯಿಸಿರುವ ನವಜೋತ್‌ ಸಿಂಗ್‌, 5 ಲಕ್ಷ ಕೋಟಿ ರೂಪಾಯಿಗಳ ಸಾಲವಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪಂಜಾಬ್ ಸರ್ಕಾರದ ಮೇಲೆ 5 ಲಕ್ಷ ಕೋಟಿ ರೂಪಾಯಿ ಸಾಲ ಇದೆ. ಈ ಸಾಲವನ್ನು ಸರ್ಕಾರ ಮರು ಪಾವತಿ ಮಾಡುತ್ತದೆ ಎಂದು ಜನರು ಭಾವಿಸುತ್ತಾರೆ. ಆದರೆ, ಅದನ್ನು ಜನರು ಹೊರುತ್ತಾರೆ. ಒಂದು ವೇಳೆ ಖಜಾನೆ ತುಂಬಿ ತುಳುಕುತ್ತಿದ್ದರೆ ಶಿಕ್ಷಕರ ಸಂಬಳ ತಿಂಗಳಿಗೆ 50,000 ರೂಪಾಯಿಗೆ ಏಕೆ ಹೆಚ್ಚಿಸುವುದಿಲ್ಲ ಎಂದು ಇದೇ ವೇಳೆ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:ಕ್ಯಾ.ಅಮರೀಂದರ್‌ ಸಿಂಗ್‌ ಹೊಸ ಪಕ್ಷ ಘೋಷಣೆ; ನವಜೋತ್‌ ಸಿಂಗ್‌ ಸಿಧು ಸೋಲಿಸಲು ಪಣ

ABOUT THE AUTHOR

...view details