ಬುಲ್ದಾನಾ(ಮಹಾರಾಷ್ಟ್ರ):ಮಹಾರಾಷ್ಟ್ರದಲ್ಲಿ ಕಳೆದ ಕೆಲ ದಿನಗಳಿಂದ ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗುತ್ತಿದ್ದು, ನಿಯಂತ್ರಣಕ್ಕೆ ಬಾರದಂತೆ ತನ್ನ ಆರ್ಭಟ ಮುಂದುವರೆಸಿದೆ. ಈ ವಿಚಾರ ಇದೀಗ ಅಲ್ಲಿನ ಆಡಳಿತ ಹಾಗೂ ವಿಪಕ್ಷ ನಾಯಕರ ನಡುವಿನ ವಾಕ್ಸಮರಕ್ಕೂ ವೇದಿಕೆಯಾಗಿದೆ.
ಕೊರೊನಾ ವಿಷಯವನ್ನಿಟ್ಟುಕೊಂಡು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಿರುದ್ಧ ಶಿವಸೇನೆ ಶಾಸಕ ಸಂಜಯ್ ಗಾಯಕ್ವಾಡ್ ವಾಗ್ದಾಳಿ ನಡೆಸಿದ್ದಾರೆ. ಕೊರೊನಾ ವೈರಸ್ ನನ್ನ ಕೈಗೆ ಸಿಕ್ಕರೆ ಅದನ್ನ ದೇವೇಂದ್ರ ಫಡ್ನವೀಸ್ ಬಾಯಿಯೊಳಗೆ ಹಾಕುತ್ತೇನೆಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಶಿವಸೇನೆ ಶಾಸಕನ ಆಕ್ರೋಶದ ನುಡಿ ಮಹಾರಾಷ್ಟ್ರ ಸೇರಿಕೊಳ್ಳಬೇಕಾಗಿದ್ದ ರೆಮ್ಡೆಸಿವಿರ್ ಚುಚ್ಚುಮದ್ದು ದೇವೇಂದ್ರ ಫಡ್ನವೀಸ್ ಅವರ ವರ್ಚಸ್ಸಿನಿಂದಾಗಿ ಗುಜರಾತ್ ಸೇರಿಕೊಂಡಿರುವ ಆರೋಪ ಕೇಳಿ ಬಂದಿದ್ದು, ಇದೇ ವಿಚಾರವಾಗಿ ಶಿವಸೇನೆ ಶಾಸಕ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರ ಮಹಾರಾಷ್ಟ್ರ ಸರ್ಕಾರಕ್ಕೆ ಸಹಕಾರ ನೀಡುವ ಬದಲು ಆರೋಪ ಮಾಡುತ್ತಿದೆ. ಅಗತ್ಯವಾದ ವೈದ್ಯಕೀಯ ಮೂಲಸೌಲಭ್ಯ ಒದಗಿಸುತ್ತಿಲ್ಲ ಎಂದು ಗಾಯಕ್ವಾಡ್ ಆರೋಪಿಸಿದ್ದಾರೆ. ರಾಜಕೀಯ ಮಾಡಲು ಇದು ಸರಿಯಾದ ಸಮಯವೇ? ಕೇಂದ್ರ ಸರ್ಕಾರ ಮತ್ತು ಫಡ್ನವೀಸ್ ಇಂತಹ ಕೆಲಸ ಮಾಡ್ತಿದ್ದು, ಅವರಿಗೆ ನಾಚಿಕೆಯಾಗಬೇಕು ಎಂದು ಗಾಯಕ್ವಾಡ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ರೆಮ್ಡಿಸಿವಿರ್ ಲಸಿಕೆಗಾಗಿ ಕೀಳು ಮಟ್ಟಕ್ಕಿಳಿದ ರಾಜಕಾರಣಿಗಳು.. ಗುಜರಾತ್, ಮಹಾರಾಷ್ಟ್ರದಲ್ಲಿ ನಡುರಾತ್ರಿ ಹೈಡ್ರಾಮಾ!
ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರದಲ್ಲಿ ನಿತ್ಯ 50 ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣ ದಾಖಲಾಗುತ್ತಿದ್ದು, ಇದು ಕೂಡ 53 ಸಾವಿರ ಸೋಂಕಿತ ಪ್ರಕರಣ ಹಾಗೂ 300ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ.