ಕರ್ನಾಟಕ

karnataka

ETV Bharat / bharat

ಮೊಬೈಲ್​ ಟಾರ್ಚ್‌ಲೈಟ್​ ಬಳಸಿ ಆಪರೇಷನ್​... ಸರ್ಕಾರಿ ಆಸ್ಪತ್ರೆಯಲ್ಲಿ ಇದೆಂಥಾ ದುಸ್ಥಿತಿ!?

ಸರ್ಕಾರಿ ಆಸ್ಪತ್ರೆಯಲ್ಲಿ ಬೆಳಕಿನ ವ್ಯವಸ್ಥೆ ಇರದ ಕಾರಣ ವೈದ್ಯರು ಮೊಬೈಲ್​ ಟಾರ್ಚ್​ ಲೈಟ್​ ಬಳಸಿ ಶಸ್ತ್ರಚಿಕಿತ್ಸೆ​ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

saving life under mobile light
saving life under mobile light

By

Published : Jul 20, 2021, 5:18 PM IST

ಛತರ್ಪುರ್​(ಮಧ್ಯಪ್ರದೇಶ):ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗೋಸ್ಕರ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಹಣ ಮೀಸಲಿಡಲಾಗುತ್ತದೆ. ಇಷ್ಟೊಂದು ಹಣ ವ್ಯಯಿಸಿದ್ರೂ ಕೂಡ ಅಲ್ಲಿನ ವ್ಯವಸ್ಥೆ ಮಾತ್ರ ಹೇಳತೀರದ್ದಾಗಿರುತ್ತದೆ. ಸದ್ಯ ಮಧ್ಯಪ್ರದೇಶದ ಛತರ್ಪುರ್​​ ಆಸ್ಪತ್ರೆಯಲ್ಲಿ ನಡೆದಿರುವ ಘಟನೆವೊಂದು ಅದಕ್ಕೆ ಹಿಡಿದಿರುವ ಕೈಗನ್ನಡಿಯಂತಿದೆ.

ಸರ್ಕಾರಿ ಆಸ್ಪತ್ರೆಯಲ್ಲಿ ಇದೆಂಥಾ ದುಸ್ಥಿತಿ!?

ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯೋರ್ವಳಿಗೆ ವೈದ್ಯರು ಹಾಗೂ ನರ್ಸ್​ಗಳು ಮೊಬೈಲ್​ ಟಾರ್ಚ್​​ ಲೈಟ್ ಬಳಸಿ ಆಪರೇಷನ್​ ಮಾಡಿರುವ ಘಟನೆ ನಡೆದಿದೆ. ಆಸ್ಪತ್ರೆಯಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿದ್ದರಿಂದ ಬೇರೆ ವ್ಯವಸ್ಥೆ ಇಲ್ಲದೇ ಮೊಬೈಲ್ ಟಾರ್ಚ್​ ಸಹಾಯದಿಂದ ಆಪರೇಷನ್​ ನಡೆಸಿದ್ದಾರೆ.

ನೌಗಾಂವ್​ ಬ್ಲಾಕ್​ನ ಅಲಿಪುರ್ ಪೊಲೀಸ್​ ಠಾಣಾ ಪ್ರದೇಶದಲ್ಲಿ ವಾಸವಾಗಿದ್ದ ಶಿವಶಂಕರ್​(45) ಆತನ ಪತ್ನಿ ಪಾರ್ವತಿ(40) ಜಮೀನಿನಲ್ಲಿ ಕೆಲಸ ಮಾಡ್ತಿದ್ದಾಗ ಸಿಡಿಲು ಬಡೆದ ಕಾರಣ ಗಂಭೀರವಾಗಿ ಗಾಯಗೊಂಡಿದ್ದರು. ಈ ವೇಳೆ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ವೇಳೆ ಶಿವಶಂಕರ್​ ಸಾವನ್ನಪ್ಪಿದ್ದಾರೆಂದು ವೈದ್ಯರು ಘೋಷಣೆ ಮಾಡಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಪಾರ್ವತಿಗೆ ಶಸ್ತ್ರಚಿಕಿತ್ಸೆ ಮಾಡಲು ಮುಂದಾಗಿದ್ದಾರೆ.

ಇದನ್ನೂ ಓದಿ: 500 ರೂ ಕಳ್ಳತನದ ಆರೋಪ: ಮರ್ಯಾದೆಗಂಜಿ ಒಂದೇ ಕುಟುಂಬದ 6 ಮಂದಿಯಿಂದ ವಿಷಸೇವನೆ

ಶಸ್ತ್ರಚಿಕಿತ್ಸೆ ನೀಡುವ ವೇಳೆ ಆಸ್ಪತ್ರೆಯಲ್ಲಿ ವಿದ್ಯುತ್​ ಇರಲಿಲ್ಲ. ಜತೆಗೆ ಜನರೇಟರ್​ ಕೆಲಸ ಮಾಡದ ಕಾರಣ ವೈದ್ಯರು ಮೊಬೈಲ್​ ಟಾರ್ಚ್​ ಲೈಟ್​ನಲ್ಲಿ ಬಳಕೆ ಮಾಡಿ ಆಪರೇಷನ್​ ಮಾಡಿದ್ದಾರೆ. ಮಹಿಳೆಯ ಸ್ಥಿತಿ ಸದ್ಯ ಹೇಗಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಮಧ್ಯಪ್ರದೇಶದಲ್ಲಿ ಆರೋಗ್ಯ ಸೇವೆಗೋಸ್ಕರ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದರೂ, ಇಂತಹ ಪರಿಸ್ಥಿತಿ ಉದ್ಭವವಾಗಿರುವುದು ನಿಜಕ್ಕೂ ಅಲ್ಲಿನ ಜಿಲ್ಲಾಡಳಿತವನ್ನ ಪ್ರಶ್ನೆ ಮಾಡುವಂತಾಗಿದೆ. ಮತ್ತೊಂದೆಡೆ ಮೊಬೈಲ್ ಟಾರ್ಚ್​ ಲೈಟ್​ ಬಳಕೆ ಮಾಡಿ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿರುವುದಕ್ಕೆ ಮೆಚ್ಚುಗೆ ಸಹ ವ್ಯಕ್ತವಾಗುತ್ತಿದೆ.

ABOUT THE AUTHOR

...view details