ಶಹದೋಲ್ (ಮಧ್ಯಪ್ರದೇಶ):ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಶನಿವಾರ ಶಹದೋಲ್ ಜಿಲ್ಲೆಯ ಪ್ರವಾಸದಲ್ಲಿದ್ದರು. ಭದ್ರತೆಯಲ್ಲಿ ಯಾವುದೇ ಲೋಪವಾಗದಂತೆ ಅವರ ಭೇಟಿಗೆ ಸಂಬಂಧಿಸಿದಂತೆ ಸಾಕಷ್ಟು ವಿಸ್ತಾರವಾದ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಮೂಲೆ ಮೂಲೆಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಆದರೆ, ಮುಖ್ಯಮಂತ್ರಿ ಆಗಮನದ ಮುನ್ನವೇ ಗಂಭೀರ ಭದ್ರತಾ ಲೋಪವಾಗಿದೆ. ಸಿಎಂ ಮೋಹನ್ ಯಾದವ್ ಸಭೆ ನಡೆಸಲಿದ್ದ ಪಾಲಿಟೆಕ್ನಿಕ್ ಮೈದಾನದಲ್ಲಿ ಭದ್ರತಾ ಸಿಬ್ಬಂದಿ ನಡುವೆಯೇ ನಕಲಿ ಕಾನ್ಸ್ಟೇಬಲ್ ನುಸುಳಿ ಬಂದಿದ್ದಾನೆ. ಆ ನಕಲಿ ಕಾನ್ಸ್ಟೇಬಲ್ ಕಾರ್ಯಕ್ರಮದಲ್ಲಿ ಎಲ್ಲೆಡೆ ಸುತ್ತಾಡಿದ್ದಾನೆ. ಅಷ್ಟೇ ಅಲ್ಲ, ಸಿಎಂ ಇರುವ ಜಾಗಕ್ಕೂ ತಲುಪಿದ್ದನು.
ಸಮವಸ್ತ್ರದಲ್ಲಿರುವ ಪಾನಮತ್ತ ಯಾರು?:ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಇಂದು ಶಹದೋಲ್ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಈ ಘಟನೆ ಬೆಳಕಿಗೆ ಬಂದ ನಂತರ ಪೊಲೀಸ್ ಇಲಾಖೆ ತೀವ್ರ ಆತಂಕಕ್ಕೆ ಒಳಗಾಗಿತ್ತು. ಪೊಲೀಸ್ ಸಮವಸ್ತ್ರದಲ್ಲಿ ಪಾನಮತ್ತ ಅಪರಿಚಿತ ವ್ಯಕ್ತಿಯೊಬ್ಬ ಭದ್ರತಾ ಸಿಬ್ಬಂದಿಯ ನಡುವೆ ಹೇಗೆ ಪ್ರವೇಶಿಸಿದ ಎಂಬುದೇ ಈಗ ಎಲ್ಲರಲ್ಲಿ ಮೂಡಿರುವ ಪ್ರಶ್ನೆಯಾಗಿದೆ.
ಈ ಪಾನಮತ್ತ ವ್ಯಕ್ತಿ ಪೊಲೀಸ್ ಸಮವಸ್ತ್ರ ಧರಿಸಿ ಸಿಎಂ ಕಾರ್ಯಕ್ರಮದ ಸ್ಥಳಕ್ಕೆ ತೆರಳಬೇಕಿದ್ದ ಜಾಗಕ್ಕೆ ತಲುಪಿದ್ದಲ್ಲದೇ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಮಕ್ಕಳ ನಡುವೆ ನಶೆಯಲ್ಲಿ ಗೇಟ್ ಪ್ರವೇಶಿಸಿದ್ದಾನೆ. ಮಾಧ್ಯಮದವರನ್ನು ನೋಡಿದ ತಕ್ಷಣ ಪೊಲೀಸ್ ಸಮವಸ್ತ್ರದಲ್ಲಿದ್ದ ವ್ಯಕ್ತಿ ಏಕಾಏಕಿ ಓಡಿ ಹೋಗಲಾರಂಭಿಸಿದ್ದನು.