ಅಮೃತಸರ(ಪಂಜಾಬ್):ಮಧ್ಯಪ್ರದೇಶದಲ್ಲಿರುವ ಬಾಬಾ ಬಾಗೇಶ್ವರ ಧಾಮದ ಪಂಡಿತ್ ಧೀರೇಂದ್ರ ಶಾಸ್ತ್ರಿ ಹೊಸ ವಿವಾದದಲ್ಲಿ ಸಿಲುಕಿದ್ದಾರೆ. ಅವರು ಸಿಖ್ಖರನ್ನು 'ಸನಾತನ ಧರ್ಮದ ಸೇನೆ' ಎಂದು ಬಣ್ಣಿಸಿದ್ದರು. ಈ ಹೇಳಿಕೆಯನ್ನು ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿ (ಎಸ್‌ಜಿಪಿಸಿ) ತೀವ್ರವಾಗಿ ಖಂಡಿಸಿದೆ.
ಬಾಬಾ ಹೇಳಿಕೆಯನ್ನು ಟೀಕಿಸಿರುವ ಎಸ್‌ಜಿಪಿಸಿ ಪ್ರಧಾನ ಕಾರ್ಯದರ್ಶಿ ಗುರುಚರಣ್ ಸಿಂಗ್ ಗ್ರೆವಾಲ್ "ಸಿಖ್ಖರು ಸನಾತನ ಧರ್ಮದ ಸೈನ್ಯದ ಭಾಗವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರತಿಯೊಂದು ಧರ್ಮಕ್ಕೂ ಒಂದೊಂದು ಗುರುತಿದೆ. ಅದೇ ರೀತಿ ಸಿಖ್ ಧರ್ಮ ಕೂಡ ಪ್ರತ್ಯೇಕ ಧರ್ಮವಾಗಿದೆ. ಅವರು ಬೇರೆ ಯಾವುದೇ ಧರ್ಮದ ಭಾಗವಾಗಲು ಸಾಧ್ಯವಿಲ್ಲ. ದಬ್ಬಾಳಿಕೆಯನ್ನು ವಿರೋಧಿಸಲು ಸಿಖ್ ಸಮುದಾಯವನ್ನು ರಚಿಸಲಾಗಿದೆ. ಸಿಖ್ಖರು ಸನಾತನ ಧರ್ಮದ ಸೈನ್ಯ ಎಂದು ಹೇಳುವುದು ತಪ್ಪು. ಶಾಸ್ತ್ರಿ ಅವರು ಮೊದಲು ಸಿಖ್ ಧರ್ಮದ ಬಗ್ಗೆ ತಿಳಿದುಕೊಳ್ಳುಬೇಕು" ಎಂದು ಸಲಹೆ ನೀಡಿದ್ದಾರೆ.
ಅವರಿಗೆ ಸಿಖ್ ಧರ್ಮದ ಜ್ಞಾನವಿಲ್ಲ:ಬಾಗೇಶ್ವರ ಧಾಮದ ಬಾಬಾ ಅವರನ್ನು ಅಜ್ಞಾನಿ ಎಂದು ಟೀಕಿಸಿದ ಗುರುಚರಣ್ ಸಿಂಗ್ ಅವರಿಗೆ ಸಿಖ್ ಧರ್ಮದ ಬಗ್ಗೆ ಯಾವುದೇ ಜ್ಞಾನವಿಲ್ಲ ಎಂದು ಹೇಳಿದರು. ಬಾಬಾ ಅವರಿಗೆ ಸಿಖ್ ಇತಿಹಾಸ ಮತ್ತು ಐವರು ಪ್ರೀತಿಪಾತ್ರರ ಹೆಸರನ್ನು ಹೇಗೆ ಉಚ್ಚರಿಸಬೇಕು ಎಂದು ತಿಳಿದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಖ್ ಸಮುದಾಯದ ಬಗ್ಗೆ ಆಕ್ಷೇಪಾರ್ಹ ಪದಗಳನ್ನು ಬಳಸಬಾರದು. ಬಾಬಾ ಅವರ ಈ ಹೇಳಿಕೆಯಿಂದ ಸಿಖ್ಖರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಸಿಖ್ಖರು ಪ್ರತಿಯೊಂದು ಧರ್ಮವನ್ನು ಗೌರವಿಸುತ್ತಾರೆ. ಸಿಖ್ ಧರ್ಮವನ್ನು ಸನಾತನ ಧರ್ಮದ ಸೇನೆ ಎಂದು ಬಣ್ಣಿಸಿದ್ದಕ್ಕಾಗಿ ಬಾಬಾ ಅವರು ಸಾರ್ವಜನಿಕವಾಗಿ ಸಿಖ್ಖರ ಕ್ಷಮೆಯಾಚಿಸಬೇಕು ಎಂದು ಗುರುಚರಣ್ ಸಿಂಗ್ ಆಗ್ರಹಿಸಿದ್ದಾರೆ.
ಸರ್ದಾರರು ಸನಾತನ ಧರ್ಮದ ಸೈನ್ಯ: "ಕಾಶ್ಮೀರಿ ಪಂಡಿತರನ್ನು ಕೊಂದು ಓಡಿಸಿದಾಗ, ಆ ಕಾಶ್ಮೀರಿ ಪಂಡಿತರನ್ನು ರಕ್ಷಿಸಲು ಕತ್ತಿಯನ್ನು ಎತ್ತಿದ ಒಂಬತ್ತನೇ ಗುರು ಶ್ರೀ ತೇಜ್ ಬಹದ್ದೂರ್ ಸಾಹಿಬ್. "ಸರ್ದಾರ್ ನಮ್ಮ ಸನಾತನ ಧರ್ಮದ ಸೈನ್ಯ. ಪಂಜ್ ಪ್ಯಾರೆ (ಐದು ಪ್ರಿಯರು) ಸನಾತನ ಧರ್ಮದ ರಕ್ಷಣೆಗಾಗಿ ಮಾತ್ರ ಇವೆ. ಪೇಟ, ಕತ್ತಿ.. ಇವೆಲ್ಲವೂ ಸನಾತನ ಧರ್ಮದ ರಕ್ಷಣೆಗಾಗಿ. ಯಾರೇ ತಪ್ಪು ಹೇಳಿದರೂ ಅವರ ಮನಸ್ಸಿನಲ್ಲಿ ಕೊಳಕು ಇದೆ ಎಂದರ್ಥ. ಅವರ ಬುದ್ಧಿಯ ಶುದ್ಧೀಕರಣದ ಅಗತ್ಯವಿದೆ. ಸರ್ದಾರ್ ಎಂದರೆ ಸನಾತನ ಧರ್ಮದ ಸೈನ್ಯ. ಸನಾತನ ಧರ್ಮವನ್ನು ರಕ್ಷಿಸಲು ಸೇನೆಯ ಅಗತ್ಯವಿದೆ. ಅದಕ್ಕಾಗಿಯೇ ಸರದಾರರನ್ನು ಸೃಷ್ಟಿಸಲಾಗಿದೆ ಎಂದು ಧೀರೇಂದ್ರ ಶಾಸ್ತ್ರಿ ಹೇಳಿದ್ದರು.
ನಾವು ಗುರುಗಳ ಕಥೆಯನ್ನು ಹೇಳುತ್ತೇವೆ:ನಾವು ಒಂಬತ್ತನೇ ಗುರು ತೇಗ್ ಬಹದ್ದೂರ್ ಜಿ ಮತ್ತು ಹತ್ತನೇ ಗುರು ಶ್ರೀ ಗುರು ಗೋಬಿಂದ್ ಸಿಂಗ್ ಜಿ ಅವರ ಕಥೆಯನ್ನು ಹೇಳುತ್ತೇವೆ. ಇವು ನಮ್ಮ ಸನಾತನ ಧರ್ಮದ ಆದರ್ಶಗಳು. ಕಾಶ್ಮೀರಿ ಪಂಡಿತರ ರಕ್ಷಣೆಗಾಗಿ ತಮ್ಮ ಮಕ್ಕಳನ್ನು ಬಲಿಕೊಟ್ಟು ರಕ್ಷಣೆಗಾಗಿ ಕತ್ತಿಯನ್ನು ಹಿಡಿದ ನಮ್ಮ ಸನಾತನ ಸಂಸ್ಥೆಯ ಸೌಭಾಗ್ಯ ಎಂದು ಧೀರೇಂದ್ರ ಶಾಸ್ತ್ರಿ ಹೇಳಿದ್ದರು.
ಹೇಳಿಕೆ ಖಂಡಿಸಿದ ಎಸ್‌ಜಿಪಿಸಿ:ಪಂಡಿತ್ ಧೀರೇಂದ್ರ ಶಾಸ್ತ್ರಿ ಅವರು ಸಿಖ್ ಧರ್ಮದ ಬಗ್ಗೆ ಮೊದಲು ತಿಳಿದುಕೊಳ್ಳಬೇಕು ಎಂದು ಎಸ್‌ಜಿಪಿಸಿ ಪ್ರಧಾನ ಕಾರ್ಯದರ್ಶಿ ಗುರ್ಚರಣ್ ಗ್ರೆವಾಲ್ ಹೇಳಿದ್ದಾರೆ. "ಹೌದು, ಕಾಶ್ಮೀರಿ ಪಂಡಿತರ ರಕ್ಷಣೆಗಾಗಿ ನಮ್ಮ 9ನೇ ಗುರುಗಳು ಪ್ರಾಣತ್ಯಾಗ ಮಾಡಿದ್ದು ನಿಜ. ಆದರೆ, ಈ ಹೇಳಿಕೆ ನೀಡುವ ಮೊದಲು ಪಂಜ್ ಪ್ಯಾರೆ (ಐದು ಪ್ರಿಯರು) ಬಗ್ಗೆ ತಿಳಿದುಕೊಳ್ಳಬೇಕು. ಹಿಂದೂಗಳು ಮಾತ್ರವಲ್ಲ, ಸಿಖ್ಖರೂ ಸಹ ದಬ್ಬಾಳಿಕೆಯ ವಿರುದ್ಧ ನಿಲ್ಲುತ್ತಾರೆ. ಇದರರ್ಥ ಈ ಸಮುದಾಯ ಹಿಂದೂಗಳಿಗೆ ಮಾತ್ರ ಎಂದು ಅರ್ಥವಲ್ಲ. ಸಿಖ್ಖರು ಯಾವುದೇ ದೌರ್ಜನ್ಯದ ವಿರುದ್ಧ ನಿಲ್ಲುತ್ತಾರೆ. ಬ್ರಿಟಿಷರು ದಬ್ಬಾಳಿಕೆ ನಡೆಸಿದಾಗ, ಅದಕ್ಕೂ ಮೊದಲು ಮೊಘಲ್ ಸರ್ಕಾರ ದಬ್ಬಾಳಿಕೆ ನಡೆಸಿದಾಗ ಸಿಖ್ಖರು ಅದರ ವಿರುದ್ಧ ನಿಂತರು"-ಗುರುಚರಣ್ ಸಿಂಗ್ ಗ್ರೆವಾಲ್, ಎಸ್‌ಜಿಪಿಸಿ, ಪ್ರಧಾನ ಕಾರ್ಯದರ್ಶಿ.
ಇದನ್ನೂ ಓದಿ:ಮೂರು ಪ್ರಶ್ನೆಗೆ ಉತ್ತರ ಹೇಳಿದಲ್ಲಿ ದೇವಮಾನವ ಧೀರೇಂದ್ರ ಶಾಸ್ತ್ರಿ ಬಾಬಾಗೆ 10 ಲಕ್ಷ ರೂ ಬಹುಮಾನ : ನರೇಂದ್ರ ನಾಯಕ್ ಸವಾಲು