ಇಸ್ಲಾಮಾಬಾದ್(ಪಾಕಿಸ್ತಾನ):ಅರಬ್ಬಿ ಸಮುದ್ರದಲ್ಲಿ ಶನಿವಾರ ಎರಡು ದೋಣಿಗಳು ಮುಳುಗಿ ಕನಿಷ್ಠ ಎಂಟು ಮೀನುಗಾರರು ನಾಪತ್ತೆಯಾಗಿರುವ ಘಟನೆ ನಡೆದಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಹತ್ತಾರು ಮೀನುಗಾರರನ್ನು ಹೊತ್ತೊಯ್ಯುತ್ತಿದ್ದ ದೋಣಿಗಳು ದೇಶದ ದಕ್ಷಿಣ ಸಿಂಧ್ ಪ್ರಾಂತ್ಯದ ಥಟ್ಟಾ ಕರಾವಳಿ ಪ್ರದೇಶದ ಅರಬ್ಬಿ ಸಮುದ್ರದಲ್ಲಿ ಮುಳುಗಿವೆ ಎಂದು ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಇಬ್ರಾಹಿಂ ಹೈದರಿ ಪ್ರದೇಶದಿಂದ ಹೊರಟಿದ್ದ ಅಲ್-ಸಿದ್ದಿಕ್ ಮತ್ತು ಅಲ್-ಬಹ್ರಿಯಾ ಎಂಬ ಹೆಸರಿನ ಎರಡು ಮೀನುಗಾರಿಕಾ ದೋಣಿಗಳು ಮಗುಚಿವೆ. ರಕ್ಷಣಾ ಪಡೆಗಳು ಸುಮಾರು 25 ಮೀನುಗಾರರನ್ನು ರಕ್ಷಿಸಿದ್ದು, ಇನ್ನೂ ಎಂಟು ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಥಟ್ಟಾ ಜಿಲ್ಲಾಧಿಕಾರಿ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ರವಾನಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅರಬ್ಬಿ ಸಮುದ್ರದಲ್ಲಿನ ಅತಿಯಾದ ಗಾಳಿಯೇ ಅವಘಡಕ್ಕೆ ಕಾರಣ ಎನ್ನಲಾಗುತ್ತಿದೆ.
ಇದನ್ನೂ ಓದಿ:ಒಡಿಶಾದಲ್ಲಿ ಕಾರು- ಟ್ರಕ್ ಮಧ್ಯೆ ಡಿಕ್ಕಿ : ಒಂದೇ ಕುಟುಂಬದ ಮೂವರು ಸೇರಿ ಐವರ ದುರ್ಮರಣ