ಬೊಕಾಖಾಟ್ (ಅಸ್ಸೋಂ):ಪ್ರವಾಸಿ ವೀಸಾದೊಂದಿಗೆ ಅಸ್ಸೋಂದ ಗೋಲಾಘಾಟ್ ಜಿಲ್ಲೆಗೆ ಬಂದಿದ್ದ ಏಳು ಜನ ಜರ್ಮನ್ ಪ್ರಜೆಗಳು ನಿರ್ದಿಷ್ಟ ಧರ್ಮವನ್ನು ಬೋಧಿಸುತ್ತಿದ್ದ ಆರೋಪದ ಮೇಲೆ ಅವರನ್ನು ವಶಕ್ಕೆ ಪಡೆದ ಪೊಲೀಸರು, ತಲಾ 500 ಯುಎಸ್ ಡಾಲರ್ ದಂಡ ವಿಧಿಸಿದ್ದಾರೆ.
ಕಾಜಿರಂಗದ ಖಾಸಗಿ ರೆಸಾರ್ಟ್‌ನಲ್ಲಿ ನೆಲೆಸಿದ್ದ ಏಳು ಜನ ಜರ್ಮನ್ ಪ್ರಜೆಗಳ ನಡೆಸುತ್ತಿದ್ದ ಕಾರ್ಯಗಳ ಬಗ್ಗೆ ಸ್ಥಳೀಯರು ದೂರು ನೀಡಿದ್ದರು. ಈ ದೂರಿನ ಮೇರೆಗೆ ಗೋಲಘಾಟ್ ಪೊಲೀಸರು ಶುಕ್ರವಾರ ರಾತ್ರಿ ಅವರೆಲ್ಲರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ ಅವರ ಬಳಿ ಪ್ರವಾಸಿ ವೀಸಾಗಳನ್ನು ಮಾತ್ರ ಇದ್ದವು.
ದೇಶದಲ್ಲಿ ನಿರ್ದಿಷ್ಟ ಧರ್ಮವನ್ನು ಬೋಧಿಸಲು ಅವರಿಗೆ ವಿಶೇಷ ವೀಸಾಗಳ ಅಗತ್ಯವಿತ್ತು. ಆದರೆ, ಜರ್ಮನ್ ಪ್ರಜೆಗಳು ಕೇವಲ ಪ್ರವಾಸಿ ವೀಸಾಗಳನ್ನು ಹೊಂದಿದ್ದರು. ಹೀಗಾಗಿಯೇ ದೇಶದ ವೀಸಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ತಲಾ 500 ಯುಎಸ್ ಡಾಲರ್ ದಂಡ ವಿಧಿಸಲಾಗಿದೆ ಎಂದು ಅಸ್ಸೋಂ ಪೊಲೀಸ್ ವಿಶೇಷ ಡಿಜಿ ಜಿಪಿ ಸಿಂಗ್ ಗುವಾಹಟಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು.