ಕಾನ್ಪುರ(ಉತ್ತರಪ್ರದೇಶ):ನಗರದ ಚಿನ್ನ ಬೆಳ್ಳಿ ಉದ್ಯಮಿ ರಾಧಾ ಮೋಹನ್ ಪುರುಷೋತ್ತಮ್ ದಾಸ್ ಅವರ ಜ್ಯುವೆಲರ್ಸ್ ಮತ್ತು ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ದಾಳಿ ಮಾಡಿ, 7 ಕೋಟಿ ರೂಪಾಯಿ ಮೌಲ್ಯದ 12 ಚಿನ್ನದ ಬಿಸ್ಕೆಟ್ಗಳನ್ನು ವಶಕ್ಕೆ ಪಡೆದಿದೆ. ವಶಕ್ಕೆ ಪಡೆದ ಚಿನ್ನದ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳು ಪತ್ತೆಯಾಗಿಲ್ಲ ಎಂದು ಆದಾಯ ತೆರಿಗೆ ಅಧಿಕಾರಿಗಳು ಹೇಳಿದ್ದಾರೆ.
ಉತ್ತರಪ್ರದೇಶದ ಕಾನ್ಪುರ ಸೇರಿದಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದೆಹಲಿ, ಲಕ್ನೋ ಮತ್ತು ಕೋಲ್ಕತ್ತಾದ ವಿವಿಧ ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಈ ವೇಳೆ ಭಾನುವಾರ ಸಿವಿಲ್ ಲೈನ್ಸ್‌ನ ಚಿನ್ನ ಬೆಳ್ಳಿ ವ್ಯಾಪಾರಿ ರಾಧಾ ಮೋಹನ್ ಪುರುಷೋತ್ತಮ್ ದಾಸ್ ನಿವಾಸದ ಬಳಿ ನಿಲ್ಲಿಸಿದ್ದ ಐಷಾರಾಮಿ ಕಾರಿನ ಮ್ಯಾಟ್ ತಳದಲ್ಲಿ ಅಡಗಿಸಿಟ್ಟಿದ್ದ 12 ಚಿನ್ನದ ಬಿಸ್ಕೆಟ್ಗಳು ಪತ್ತೆಯಾಗಿವೆ. 7 ಕೋಟಿ ರೂ. ಮೌಲ್ಯದ ಚಿನ್ನದ ಬಿಸ್ಕೆಟ್ ಕಂಡು ಅಚ್ಚರಿಗೊಂಡ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ತನಿಖೆ ಕೈಗೊಂಡಿದೆ.
ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ಪ್ರಕಾರ, ಚಿನ್ನ ಬೆಳ್ಳಿ ವ್ಯಾಪಾರಿ ರಾಧಾ ಮೋಹನ್ ಪುರುಷೋತ್ತಮ್ ದಾಸ್ ಜ್ಯುವೆಲರ್ಸ್ ಅವರ ಐಷಾರಾಮಿ ಕಾರಿನ ಮ್ಯಾಟ್ ತಳದಲ್ಲಿ ಅಡಗಿಸಿಟ್ಟ 12 ಚಿನ್ನದ ಬಿಸ್ಕೆಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರತಿ ಬಿಸ್ಕೆಟ್ ಒಂದು ಕೆ ಜಿ ತೂಕ ಹೊಂದಿದ್ದು, ಅವುಗಳ ಮೌಲ್ಯ ಸುಮಾರು 7 ಕೋಟಿ ರೂ.ಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ. ಇದಕ್ಕೂ ಮೊದಲು ಶನಿವಾರವೂ ಆದಾಯ ತೆರಿಗೆ ಇಲಾಖೆ 6 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದೆ. ಆದರೆ ಚಿನ್ನ ಬೆಳ್ಳಿ ವ್ಯಾಪಾರಿಯಿಂದ ವಶಕ್ಕೆ ಪಡೆದ ಚಿನ್ನದ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳು ಪತ್ತೆಯಾಗಿಲ್ಲ ಎಂದು ತಿಳಿಸಿದೆ.