ಕೇರಳ/ಮಹಾರಾಷ್ಟ್ರ:ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು ಕಲ್ಲಿನ ಕ್ವಾರಿಯ ಹೊಂಡಕ್ಕೆ ಬಿದ್ದು, ಮೂವರು ಸಾವನ್ನಪ್ಪಿರುವ ಘಟನೆ ಕೇರಳದ ತ್ರಿಶ್ಯೂರ್‌ನಲ್ಲಿ ನಡೆದಿದೆ. ಮೃತರನ್ನು ಕೊಂಪಡಿಂಜಾಮಕಲ್ ಎಂಬಲ್ಲಿನ ನಿವಾಸಿಗಳಾದ ಶ್ಯಾಮ್, ಜಾರ್ಜ್ ಹಾಗೂ ಮುರಿಕಾಡ್ ನಿವಾಸಿ ಟಿಟೊ ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ಸೋಮವಾರ ರಾತ್ರಿ 10:30 ಸುಮಾರಿಗೆ ತ್ರಿಶೂರ್‌ನ ಮಾಲಾ ಬಳಿಯ ಖಿಕ್ಕಟುತ್ಸೆರಿಯಲ್ಲಿ ಘಟನೆ ನಡೆದಿದೆ. ಕಾರು ಕಲ್ಲಿನ ಕ್ವಾರಿ ಸಮೀಪ ಸಂಚರಿಸುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದಿದೆ. ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಆಲೂರು ಪೊಲೀಸರು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯ ಕೈಗೊಂಡರು.
ಚಾಲಕುಡಿಯ ಸ್ಕೂಬಾ ತಂಡ ಸ್ಥಳಕ್ಕೆ ಕರೆಸಲಾಗಿತ್ತು. ಪರಮಡದ ಜಲಮೂಲದಲ್ಲಿ ಶೋಧ ನಡೆಸಿದ ಬಳಿಕ ಮಧ್ಯರಾತ್ರಿ 12:45ರ ಸುಮಾರಿಗೆ ಮೂವರ ಶವ ಪತ್ತೆಯಾಗಿದೆ. ಮೃತದೇಹಗಳನ್ನು ಖಿಕ್ಕಾಟುಸೆರಿಯ ಖಾಸಗಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.