ಕರ್ನಾಟಕ

karnataka

By

Published : Apr 12, 2021, 10:46 AM IST

ETV Bharat / bharat

ದೇಶಾದ್ಯಂತ ಕೊರೊನಾರ್ಭಟಕ್ಕೆ ಷೇರು ಮಾರುಕಟ್ಟೆ ತಲ್ಲಣ; ಸೆನ್ಸೆಕ್ಸ್ 1,166.95 ಅಂಕ ಕುಸಿತ

ಕೊರೊನಾ ಕೇಸ್​, ಸೆಮಿ ಲಾಕ್‌ಡೌನ್, ಕರ್ಫ್ಯೂನಂತಹ ನಿರ್ಬಂಧಗಳು ಮುಂಬೈ ಷೇರು ಮಾರುಕಟ್ಟೆಯನ್ನು ತಲ್ಲಣಗೊಳಿಸಿದೆ.

Sensex down by 1166.95 points, currently at 48,390.87
ಕರಡಿಗೆ ಸಾಥ್​ ನೀಡಿದ ಕೊರೊನಾ

ಮುಂಬೈ:ದೇಶದಲ್ಲಿನ ಕೊರೊನಾರ್ಭಟಕ್ಕೆ ಷೇರು ಮಾರುಕಟ್ಟೆ ಸಿಲುಕಿಕೊಂಡಿದೆ. ಸೆಮಿ ಲಾಕ್‌ಡೌನ್, ಕರ್ಫ್ಯೂನಂತಹ ನಿರ್ಬಂಧಗಳು, ದಾಖಲೆಯ ಸಂಖ್ಯೆಯಲ್ಲಿ​ ಪ್ರಕರಣಗಳು ವರದಿಯಾಗುತ್ತಿದ್ದಂತೆಯೇ ಇತ್ತ ಬಿಎಸ್ಇ ಮತ್ತು ಎನ್ಎಸ್ಇ ಈಕ್ವಿಟಿ ಸಂವೇದಿ ಸೂಚ್ಯಂಕಗಳು ನೆಲಕಚ್ಚಿವೆ.

ಶೇಕಡಾ 2.5 ರಷ್ಟು ಅಥವಾ 1166.53 ಪಾಯಿಂಟ್‌ ಸೆನ್ಸೆಕ್ಸ್ ಇಳಿಕೆ ಕಂಡಿದ್ದು, 48,390.87 ವಹಿವಾಟು ನಡೆಸುತ್ತಿದೆ. ನಿಫ್ಟಿ ಶೇ 2.48 ರಷ್ಟು (346.55 ಪಾಯಿಂಟ್​) ಕುಸಿತದೊಂದಿಗೆ 14,475.10 ಅಂಕಗಳಿಗೆ ಇಳಿಕೆಯಾಗಿದೆ.

ಇದನ್ನೂ ಓದಿ: ದಾಖಲೆ ಸಂಖ್ಯೆಯಲ್ಲಿ ಕೋವಿಡ್​ ಸಾವು-ನೋವು: ನಿನ್ನೆ 1.68 ಲಕ್ಷ ಕೇಸ್​ ಪತ್ತೆ, 904 ಮಂದಿ ಬಲಿ

ಇಂಡಸ್ಇಂಡ್ ಬ್ಯಾಂಕ್, ಬಜಾಜ್ ಫೈನಾನ್ಸ್, ಎಸ್‌ಬಿಐ, ಬಜಾಜ್ ಆಟೋ, ಐಸಿಐಸಿಐ ಬ್ಯಾಂಕ್ ಮತ್ತು ಕೋಟಕ್ ಬ್ಯಾಂಕ್​ಗಳು ಶೇ.7.82ರಷ್ಟು ನಷ್ಟ ಅನುಭವಿಸಿವೆ. ಇಲ್ಲಿ ಸಂಪತ್ತು ಹೂಡಿಕೆ ಮಾಡಿದ್ದ ಹೂಡಿಕೆದಾರರು ಚಿಂತೆಯ ಸುಳಿಯಲ್ಲಿ ಸಿಲುಕಿದ್ದಾರೆ.

ABOUT THE AUTHOR

...view details