ಕರ್ನಾಟಕ

karnataka

ETV Bharat / bharat

ರಾಷ್ಟ್ರಪತಿಗಳಿಂದ ಗಣರಾಜ್ಯೋತ್ಸಕ್ಕೆ ಆಹ್ವಾನಿತನಾಗಿದ್ದ ವ್ಯಕ್ತಿ ಕಾಡಾನೆ ದಾಳಿಗೆ ಬಲಿ! - ಚೋಳ ಬುಡಕಟ್ಟು ಜನಾಂಗದ ವೃದ್ದ ಆನೆ ದಾಳಿಗೆ ಬಲಿ

Chola Naicka tribe man killed by wild elephant: ಚೋಳ ಬುಡಕಟ್ಟು ಜನಾಂಗದ ವ್ಯಕ್ತಿಯೋರ್ವ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಈತನಿಗೆ ಕಳೆದ 20 ವರ್ಷಗಳ ಹಿಂದೆ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಪರೇಡ್​ನಲ್ಲಿ ಭಾಗಿಯಾಗುವಂತೆ ರಾಷ್ಟ್ರಪತಿಗಳು ಆಹ್ವಾನ ಸಹ ನೀಡಿದ್ದರು ಎಂದು ತಿಳಿದುಬಂದಿದೆ.

Chola Naicka tribe man killed by wild elephant
Chola Naicka tribe man killed by wild elephant

By

Published : Jan 27, 2022, 4:02 PM IST

ಮಲಪ್ಪುರಂ(ಕೇರಳ):ಕಳೆದ 20 ವರ್ಷಗಳ ಹಿಂದೆ ಗಣರಾಜ್ಯೋತ್ಸವದ ಪರೇಡ್​​ನಲ್ಲಿ ಭಾಗಿಯಾಗಲು ದೆಹಲಿಗೆ ಆಗಮಿಸುವಂತೆ ಆಹ್ವಾನಿತ ಕೇರಳದ ಚೋಳ ಬುಡಕಟ್ಟು ಜನಾಂಗದ ವೃದ್ಧನೋರ್ವ ಆನೆ ದಾಳಿಗೊಳಗಾಗಿ ಸಾವನ್ನಪ್ಪಿದ್ದಾರೆ. ಕೇರಳದ ಮಲಪ್ಪುರಂ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

70 ವರ್ಷದ ಕರಿಂಬುಜ ಮಥನ್(Karimbuzha Mathan)​​ ಪಡಿತರ ಖರೀದಿಸಲು ತೆರಳಿದ್ದ ಸಂದರ್ಭದಲ್ಲಿ ಕಾಡಾನೆಯಿಂದ ದಾಳಿಗೊಳಗಾಗಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಪ್ರಾಣ ಬಿಟ್ಟಿದ್ದಾರೆ. 20 ವರ್ಷಗಳ ಹಿಂದೆ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವಕ್ಕೆ ರಾಷ್ಟ್ರಪತಿಗಳಿಂದ ಚೋಳ ನಾಯ್ಕ ಬುಡಕಟ್ಟು ಜನಾಂಗದ ಮಥನ್​ ಅವರಿಗೆ ಆಹ್ವಾನ ಬಂದಿತ್ತು.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇವರು, ಇತರೆ ಬುಡಕಟ್ಟು ಸದಸ್ಯರ ಜೊತೆ ಪಡಿತರ ತೆಗೆದುಕೊಂಡು ಬರಲು ತೆರಳುತ್ತಿದ್ದರು. ಈ ವೇಳೆ ಕಾಡಾನೆವೊಂದು ದಾಳಿ ಮಾಡಿದ್ದು, ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ.

ಇದನ್ನೂ ಓದಿರಿ:ನಾಪತ್ತೆಯಾಗಿದ್ದ ಯುವಕನನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿದ ಚೀನಾ: ಕಿರಣ್ ರಿಜಿಜು

ಏಷ್ಯಾ ಕಾಡಿನಲ್ಲಿ ಆಳವಾದ ಗುಹೆಗಳಲ್ಲಿ ವಾಸವಾಗಿರುವ ಏಕೈಕ ಬುಡಕಟ್ಟು ಜನಾಂಗ ಚೋಳರದಾಗಿದ್ದು, ತಮ್ಮ ಕುಟುಂಬದೊಂದಿಗೆ ಅನೇಕ ಅಂತಾರಾಷ್ಟ್ರೀಯ ಪ್ರದರ್ಶನಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಳಿವಿನ ಅಂಚಿನಲ್ಲಿರುವ ಅಪರೂಪದ ಬುಡಕಟ್ಟು ಸಂಸ್ಕೃತಿ ಪ್ರದರ್ಶನ ನೀಡಲು ಕಳೆದ 20 ವರ್ಷಗಳ ಹಿಂದೆ ದೆಹಲಿಗೆ ಆಗಮಿಸುವಂತೆ ಇವರಿಗೆ ರಾಷ್ಟ್ರಪತಿಗಳಿಂದ ಆಹ್ವಾನ ನೀಡಲಾಗಿತ್ತು.

ಚೋಳ ಬುಡಕಟ್ಟಿನವರು ಕೇವಲ ನೂರಾರು ಸದಸ್ಯರಿದ್ದು, ಅರಣ್ಯ ಪ್ರದೇಶದಲ್ಲೇ ವಾಸಿಸುತ್ತಿದ್ದಾರೆ. ಸಮಾಜದಿಂದ ದೂರ ಉಳಿದುಕೊಂಡಿರುವ ಚೋಳ ಅಳವಿನಂಚಿನಲ್ಲಿರುವ ಕೆಲ ಸಮುದಾಯಗಳಲ್ಲಿ ಒಂದಾಗಿದೆ. ಆನೆ ದಾಳಿಗೊಳಗಾಗಿ ಪ್ರಾಣ ಕಳೆದುಕೊಂಡಿರುವ ಮಥನ್​ ಅವರ ಮೃತದೇಹವನ್ನ ಈಗಾಗಲೇ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details