ಕರ್ನಾಟಕ

karnataka

ETV Bharat / bharat

'ನಮ್ಮನ್ನು ಭಯೋತ್ಪಾದಕರು, ಕೊಲೆಗಾರರೆಂದು ಬಿಂಬಿಸದೇ ಸಂತ್ರಸ್ತರಂತೆ ನೋಡಿ' - ಮಧುರೈ ಕೇಂದ್ರ ಕಾರಾಗೃಹ

ನಾವು ‘ಮುಗ್ಧರು’ ಎಂದು ಸಮಯ ತೀರ್ಪು ನೀಡಲಿದೆ. ಉತ್ತರ ಭಾರತದ ಜನರು ನಮ್ಮನ್ನು ಭಯೋತ್ಪಾದಕರು ಅಥವಾ ಕೊಲೆಗಾರರ ​​ಬದಲಿಗೆ ಸಂತ್ರಸ್ತರಂತೆ ನೋಡಬೇಕು ಎಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿಗಳಲ್ಲಿ ಒಬ್ಬರಾದ ಆರ್‌ಪಿ ರವಿಚಂದ್ರನ್ ಹೇಳಿದ್ದಾರೆ.

RP Ravichandran
ಆರ್‌ಪಿ ರವಿಚಂದ್ರನ್

By

Published : Nov 13, 2022, 12:43 PM IST

ಮಧುರೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಬಿಡುಗಡೆಯಾದ ಆರು ಮಂದಿ ಅಪರಾಧಿಗಳಲ್ಲಿ ಒಬ್ಬರಾದ ಆರ್‌ಪಿ ರವಿಚಂದ್ರನ್ ಅವರು ಉತ್ತರ ಭಾರತದ ಜನತೆಗೆ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ನಮ್ಮನ್ನು ಭಯೋತ್ಪಾದಕರು ಅಥವಾ ಕೊಲೆಗಾರರು ಎಂದು ಬಿಂಬಿಸದೇ ಸಂತ್ರಸ್ತರಂತೆ ನೋಡಬೇಕು ಎಂದು ಹೇಳಿದ್ದಾರೆ.

ಮಧುರೈ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾದ ನಂತರ ಮಾತನಾಡಿದ ಅವರು, ನಾವು ‘ಮುಗ್ಧರು’ ಎಂದು ಸಮಯ ತೀರ್ಪು ನೀಡಲಿದೆ. ಉತ್ತರ ಭಾರತದ ಜನರು ನಮ್ಮನ್ನು ಭಯೋತ್ಪಾದಕರು ಅಥವಾ ಕೊಲೆಗಾರರ ​​ಬದಲಿಗೆ ಸಂತ್ರಸ್ತರಂತೆ ನೋಡಬೇಕು. ಸಮಯ ಮತ್ತು ಶಕ್ತಿಯು ಯಾರು ಭಯೋತ್ಪಾದರು ಅಥವಾ ಸ್ವಾತಂತ್ರ್ಯ ಹೋರಾಟಗಾರರು ಎಂಬುದನ್ನು ನಿರ್ಧರಿಸುತ್ತದೆ. ನಾವು ಭಯೋತ್ಪಾದಕರು ಎಂಬ ಆರೋಪ ಹೊತ್ತಿದ್ದರೂ ಸಹ ಕಾಲವೇ ನಮ್ಮನ್ನು ನಿರಪರಾಧಿ ಎಂದು ನಿರ್ಣಯಿಸುತ್ತದೆ ಎಂದರು.

ಇನ್ನೊಂದೆಡೆ, ಪ್ರಕರಣದ ಮತ್ತೊಬ್ಬ ಅಪರಾಧಿ ನಳಿನಿ ಶ್ರೀಹರನ್ ವೆಲ್ಲೂರಿನ ಮಹಿಳಾ ವಿಶೇಷ ಕಾರಾಗೃಹದಿಂದ ಹೊರನಡೆದ ನಂತರ, 32 ವರ್ಷಗಳ ಶಿಕ್ಷೆಯ ಸಮಯದಲ್ಲಿ ತನಗೆ ಸಹಾಯ ಮಾಡಿದ ತಮಿಳುನಾಡು ಮತ್ತು ಕೇಂದ್ರ ಸರ್ಕಾರಗಳಿಗೆ ಕೃತಜ್ಞತೆ ಸಲ್ಲಿಸಿದರು. ಜೊತೆಗೆ 32 ವರ್ಷಗಳ ಕಾಲ ತಮ್ಮನ್ನು ಬೆಂಬಲಿಸಿದ ತಮಿಳುನಾಡಿನ ಜನರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಇದನ್ನೂ ಓದಿ:'ಗಾಂಧಿ ಕುಟುಂಬ ಆ ದುರಂತದಿಂದ ಹೊರಬರುವ ಭರವಸೆ ಇದೆ, ಭೇಟಿ ಮಾಡುವ ಯೋಚನೆ ಇಲ್ಲ'

ಬಿಡುಗಡೆಯಾದ ನಂತರ ಗಾಂಧಿ ಕುಟುಂಬದ ಯಾರನ್ನಾದರೂ ಭೇಟಿಯಾಗುತ್ತೀರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಕುರಿತು ನಾನು ಪ್ಲಾನ್​ ಮಾಡಿಲ್ಲ, ನನ್ನ ಪತಿ ಎಲ್ಲಿಗೆ ಹೋದರೂ ಅವರೊಂದಿಗೆ ನಾನು ಹೋಗುತ್ತೇನೆ. ತನ್ನ ಕುಟುಂಬದವರೆಲ್ಲರೂ ನನಗಾಗಿ ಬಹಳ ಸಮಯದಿಂದ ಕಾಯುತ್ತಿದ್ದಾರೆ. ಈಗ ಅವರೊಂದಿಗೆ ಇರಲು ಬಯಸುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ:ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಎಲ್ಲ 6 ಅಪರಾಧಿಗಳ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ

ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ 1991ರ ಮೇ 21 ರಂದು ಚುನಾವಣಾ ಪ್ರಚಾರ ಸಭೆಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಎಲ್‌ಟಿಟಿಇ ಆತ್ಮಹತ್ಯಾ ಬಾಂಬರ್‌ನಿಂದ ಕೊಲ್ಲಲ್ಪಟ್ಟರು. ಈ ಪ್ರಕರಣದಲ್ಲಿ ನಳಿನಿ, ಪೆರಾರಿವಾಲನ್‌, ಆರ್‌ಪಿ ರವಿಚಂದ್ರನ್‌, ಜಯಕುಮಾರ್, ಸಂತನ್, ಮುರುಗನ್, ರಾಬರ್ಟ್ ಪಯಸ್ ಬಂಧಿಸಲಾಗಿತ್ತು. ಅವರ ಮೇಲಿನ ಆರೋಪ ಸಾಬೀತಾಗಿ ಜೀವಾವಧಿ ಶಿಕ್ಷೆ ವಿಧಿಸಲ್ಪಟ್ಟಿತ್ತು. ಆದ್ರೆ, ಈ ವರ್ಷದ ಆರಂಭದಲ್ಲಿ ಸುಪ್ರೀಂ ಕೋರ್ಟ್, ಪೆರಾರಿವೆಲನ್ ಅವರನ್ನು ಬಿಡುಗಡೆ ಮಾಡಲು ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ತನ್ನ ವಿಶೇಷ ಅಧಿಕಾರವನ್ನು ಬಳಸಿತ್ತು. ಹಾಗಾಗಿ, ತಮ್ಮನ್ನೂ ಬಿಡುಗಡೆ ಮಾಡುವಂತೆ ಕೋರಿ ನಳಿನಿ ಮತ್ತು ರವಿಚಂದ್ರನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಎಲ್ಲಾ ಅಪರಾಧಿಗಳನ್ನು ಬಿಡುಗಡೆ ಮಾಡಲಾಗಿದೆ.

ABOUT THE AUTHOR

...view details