ನವದೆಹಲಿ: ನಟಿ ಖುಷ್ಬೂ ಸುಂದರ್ ಚೆನ್ನೈನ ‘ಥೌಸಂಡ್ ಲೈಟ್ಸ್’ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಆರಂಭಿಕ ಎಣಿಕೆಯಲ್ಲಿ ಹಿನ್ನಡೆ ಕಾಯ್ದುಕೊಂಡಿದ್ದಾರೆ.
ತಮಿಳುನಾಡಿನ ಥೌಸಂಡ್ ಲೈಟ್ಸ್ ಕ್ಷೇತ್ರದಲ್ಲಿ ನಟಿ ಖುಷ್ಬೂಗೆ ಹಿನ್ನಡೆ - ಚುನಾವಣಾ ಫಲಿತಾಂಶ ಇಂದು ಲೈವ್
ಭಾರತೀಯ ಜನತಾ ಪಕ್ಷವು ನಟಿ ಖುಷ್ಬೂ ಅವರನ್ನು ಇಲ್ಲಿನ ಥೌಸಂಡ್ ಲೈಟ್ಸ್ ಕ್ಷೇತ್ರದಿಂದ ಕಣಕ್ಕಿಳಿಸಿ, ಡಿಎಂಕೆ ಪಕ್ಷಕ್ಕೆ ಸವಾಲು ಹಾಕಿತ್ತು. ಇದೀಗ ಬಂದಿರುವ ಮಾಹಿತಿಯಂತೆ, ಬಿಜೆಪಿ ಅಭ್ಯರ್ಥಿ ಮತ ಲೆಕ್ಕಾಚಾರದಲ್ಲಿ ಆರಂಭಿಕ ಹಿನ್ನೆಡೆ ಅನುಭವಿಸಿದ್ದಾರೆ.
Kushboo
ವಿಧಾನಸಭೆ ಚುನಾವಣೆ ವೇಳೆಯಲ್ಲಿ ಖುಷ್ಬೂ ಅವರು ತಮಿಳುನಾಡು ಸಾಂಪ್ರದಾಯಿಕ ಆಟ ಜಲ್ಲಿಕಟ್ಟು ಪರ ಬ್ಯಾಟ್ ಬೀಸಿದ್ದರು. ಈ ಮೂಲಕ ತಮಿಳು ಮತದಾರರನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡಿದ್ದರು. ಜೊತೆಗೆ ಚುನಾವಣಾ ಭಾಷಣಗಳನ್ನು ಮೋದಿ ಸರ್ಕಾರದ ಕಾರ್ಯಕ್ರಮಗಳನ್ನು ಕೊಂಡಾಡಿದ್ದರು.