ಕರ್ನಾಟಕ

karnataka

ETV Bharat / bharat

ಆರೋಗ್ಯದಲ್ಲಿ ಏರುಪೇರು: ದೆಹಲಿಗೆ ಸುಪ್ರೀಂಕೋರ್ಟ್‌ ನ್ಯಾ.ಎಂ.ಆರ್.ಶಾ ಏರ್​ಲಿಫ್ಟ್‌ - ಹಿಮಾಚಲ ಪ್ರದೇಶದಲ್ಲಿ ಅಸ್ವಸ್ಥರಾಗಿದ್ದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಂ ಆರ್ ಶಾ ಅವರನ್ನು ವಿಮಾನದಲ್ಲಿ ದೆಹಲಿಗೆ ಕರೆತರಲಾಗುತ್ತಿದೆ

ಹಿಮಾಚಲ ಪ್ರದೇಶದಲ್ಲಿ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಂ.ಆರ್.ಶಾ ಅವರನ್ನು ವಿಮಾನದಲ್ಲಿ ದೆಹಲಿಗೆ ಕರೆದೊಯ್ಯಲಾಗುತ್ತಿದೆ.

ಆರೋಗ್ಯದಲ್ಲಿ ಏರುಪೇರು: ದೆಹಲಿಗೆ ಸುಪ್ರೀಂ ನ್ಯಾಯಮೂರ್ತಿ ಎಂ ಆರ್ ಶಾ ಏರ್​ಲಿಪ್ಟ್​
ದೆಹಲಿಗೆ ಸುಪ್ರೀಂ ನ್ಯಾಯಮೂರ್ತಿ ಎಂ ಆರ್ ಶಾ ಏರ್​ಲಿಪ್ಟ್​

By

Published : Jun 16, 2022, 5:37 PM IST

ನವದೆಹಲಿ: ಹಿಮಾಚಲ ಪ್ರದೇಶದಲ್ಲಿ ಅಸ್ವಸ್ಥರಾಗಿದ್ದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಂ.ಆರ್.ಶಾ ಅವರನ್ನು ವಿಮಾನದಲ್ಲಿ ದೆಹಲಿಗೆ ಕರೆತರಲಾಗುತ್ತಿದೆ. ನ್ಯಾಯಮೂರ್ತಿಗಳಿಗೆ ಎದೆಯಲ್ಲಿ ನೋವು ಕಾಣಿಸಿಕೊಂಡಿದೆ ಎಂದು ವೈಯಕ್ತಿಕ ಕಾರ್ಯದರ್ಶಿ ತಿಳಿಸಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಈ ಬಗ್ಗೆ ಎಚ್ಚರಿಕೆ ವಹಿಸಿದ್ದು, ಶಾ ಅವರಿಗೆ ಚಿಕಿತ್ಸೆ ನೀಡುವ ಕುರಿತಾಗಿ ಗೃಹ ಸಚಿವಾಲಯದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶಾ ಕಳೆದ ವಾರ ಸುಪ್ರೀಂಕೋರ್ಟ್‌ನಲ್ಲಿ ರಜಾಕಾಲದ ಪೀಠದ ಅಧ್ಯಕ್ಷತೆ ವಹಿಸಿದ್ದರು.

"ನನ್ನ ಆರೋಗ್ಯ ಸ್ಥಿರವಾಗಿದೆ, ಶೀಘ್ರದಲ್ಲೇ ದೆಹಲಿ ತಲುಪಲಿದ್ದೇನೆ. ನಾಳೆಯ ನಂತರ ಆರೋಗ್ಯ ಸುಧಾರಿಸುತ್ತದೆ" ಎಂದು ನ್ಯಾ.ಎಂ.ಆರ್.ಶಾ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ವ್ಯವಹಾರದಲ್ಲಿ ನಷ್ಟ: ಪರಿಹಾರಕ್ಕೆ ಮಗಳ ಬಾಯಿಗೆ ಕುಂಕುಮ ತುಂಬಿ ಕೊಂದ ಪಾಪಿ ತಂದೆ!

ABOUT THE AUTHOR

...view details