ಕರ್ನಾಟಕ

karnataka

ಸಂವಿಧಾನದ 97ನೇ ತಿದ್ದುಪಡಿ ಭಾಗ ರದ್ದುಗೊಳಿಸಿದ ಸುಪ್ರೀಂಕೋರ್ಟ್

By

Published : Jul 20, 2021, 2:43 PM IST

ದೇಶದ ಸಹಕಾರ ಸಂಘಗಳ ಪರಿಣಾಮಕಾರಿ ನಿರ್ವಹಣೆಗೆ ಸಂಬಂಧಿಸಿದ 97ನೇ ಸಾಂವಿಧಾನಿಕ ತಿದ್ದುಪಡಿಯನ್ನು 2011ರ ಡಿಸೆಂಬರ್‌ನಲ್ಲಿ ಸಂಸತ್​ನಲ್ಲಿ ಅಂಗೀಕರಿಸಲಾಯಿತು ಮತ್ತು ಫೆಬ್ರವರಿ 15, 2012ರಿಂದ ಇದು ಜಾರಿಗೆ ಬಂದಿದೆ..

SC in majority verdict quashes part of Constitution inserted by 97th amendment on cooperatives
ಸಹಕಾರಿ ಸಂಘಗಳ 97 ನೇ ತಿದ್ದುಪಡಿ

ನವದೆಹಲಿ : ಸಹಕಾರಿ ಸಂಘಗಳ ಪರಿಣಾಮಕಾರಿ ನಿರ್ವಹಣೆಗೆ ಸಂಬಂಧಿಸಿದ ಸಂವಿಧಾನದ 97ನೇ ತಿದ್ದುಪಡಿಯ ಮಾನ್ಯತೆಯನ್ನು ಸುಪ್ರೀಂಕೋರ್ಟ್ ಮಂಗಳವಾರ 2:1 ಬಹುಮತದ ತೀರ್ಪಿನಲ್ಲಿ ಎತ್ತಿಹಿಡಿದಿದೆ. ಆದರೆ, ಸಂವಿಧಾನ ಮತ್ತು ಸಹಕಾರಿ ಸಂಘಗಳ ಕಾರ್ಯಕ್ಕೆ ಸಂಬಂಧಿಸಿದ ಒಂದು ಭಾಗವನ್ನು ಕೋರ್ಟ್ ತೆಗೆದು ಹಾಕಿದೆ.

ನ್ಯಾಯಮೂರ್ತಿಗಳಾದ ಆರ್ ಎಫ್ ನಾರಿಮನ್, ಕೆ ಎಂ ಜೋಸೆಫ್ ಮತ್ತು ಬಿ ಆರ್ ಗವಾಯಿ ಅವರಿದ್ದ ನ್ಯಾಯಪೀಠ ತೀರ್ಪು ನೀಡಿತು. ನ್ಯಾಯಮೂರ್ತಿಗಳಾದ ನಾರಿಮನ್ ಮತ್ತು ಗವಾಯಿ ಅವರು ತಿದ್ದುಪಡಿ ಭಾಗ IX ಬಿಯನ್ನು ಮಾತ್ರ ರದ್ದುಗೊಳಿಸಿದರೆ, ನ್ಯಾಯಮೂರ್ತಿ ಜೋಸೆಫ್ ಅವರು ತಿದ್ದುಪಡಿಗೆ ಅಸಮ್ಮತಿ ಸೂಚಿಸಿ, ಸಂಪೂರ್ಣ 97ನೇ ತಿದ್ದುಪಡಿಯನ್ನು ರದ್ದುಗೊಳಿಸುವಂತೆ ತಮ್ಮ ಟಿಪ್ಪಣಿಯಲ್ಲಿ ಬರೆದಿದ್ದಾರೆ.

ಓದಿ : Covid ನಿರ್ಬಂಧ ಸಡಿಲಿಕೆ ವಿಚಾರ: ಕೇರಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ

ದೇಶದ ಸಹಕಾರ ಸಂಘಗಳ ಪರಿಣಾಮಕಾರಿ ನಿರ್ವಹಣೆಗೆ ಸಂಬಂಧಿಸಿದ 97ನೇ ಸಾಂವಿಧಾನಿಕ ತಿದ್ದುಪಡಿಯನ್ನು 2011ರ ಡಿಸೆಂಬರ್‌ನಲ್ಲಿ ಸಂಸತ್​ನಲ್ಲಿ ಅಂಗೀಕರಿಸಲಾಯಿತು ಮತ್ತು ಫೆಬ್ರವರಿ 15, 2012ರಿಂದ ಇದು ಜಾರಿಗೆ ಬಂದಿದೆ.

ಸಹಕಾರಿ ಕ್ಷೇತ್ರದ ರಕ್ಷಣೆಯ ನಿಟ್ಟಿನಲ್ಲಿ ಸಂವಿಧಾನದ ವಿಧಿ 19(1)(ಸಿ)ಗೆ ತಿದ್ದುಪಡಿ ತರಲಾಗಿದೆ ಮತ್ತು ಆರ್ಟಿಕಲ್ 43ಬಿ ಮತ್ತು ಭಾಗ IXಬಿ ಇದಕ್ಕೆ ಸೇರಿಸಲಾಗಿದೆ.

ABOUT THE AUTHOR

...view details