ನವದೆಹಲಿ:ಅತ್ಯಾಚಾರ ಪ್ರಕರಣದ ಅಪರಾಧಿಗೆ 7.5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಛತ್ತೀಸ್ಗಢ ಸರ್ಕಾರಕ್ಕೆ ಸುಪ್ರೀಂಕೋರ್ಟ್ ತಾಕೀತು ಮಾಡಿದೆ. ಅಪರಾಧಿಗೆ ಕೋರ್ಟ್ ವಿಧಿಸಿದ ಶಿಕ್ಷೆಯ ಅವಧಿ ಮುಗಿದರೂ ಆತನನ್ನು ಹೆಚ್ಚು ಕಾಲ ಜೈಲಿನಲ್ಲಿಡಲಾಗಿತ್ತು. ಈ ಕಾರಣಕ್ಕೆ ಪರಿಹಾರ ನೀಡುವಂತೆ ಕೋರ್ಟ್ ಸೂಚಿಸಿತು.
ವಿವರ:ಅತ್ಯಾಚಾರ ಪ್ರಕರಣ ಸಾಬೀತಾದ ಹಿನ್ನೆಲೆಯಲ್ಲಿ ಭೋಲಾ ಎಂಬಾತನಿಗೆ ಛತ್ತೀಸ್ಗಢ ಹೈಕೋರ್ಟ್ ಹನ್ನೆರಡು ವರ್ಷಗಳ ಕಾಲ ಜೈಲು ಶಿಕ್ಷೆ ನೀಡಿತ್ತು. ಆದರೆ, 2018ರಲ್ಲಿ ಅಪರಾಧಿಯ ಶಿಕ್ಷೆಯ ಪ್ರಮಾಣವನ್ನು ಕಡಿತಗೊಳಿಸಿದ ಹೈಕೋರ್ಟ್, ಏಳು ವರ್ಷಗಳ ಕಠಿಣ ಜೈಲು ಸಜೆಯಾಗಿ ಪರಿವರ್ತಿಸಿದೆ. ಶಿಕ್ಷೆ ಪೂರ್ಣಗೊಳಿಸಿದರೂ ತನ್ನನ್ನು ಬಿಡುಗಡೆಗೊಳಿಸಿದ ನಡೆ ಪ್ರಶ್ನಿಸಿ, ಭೋಲಾ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ.