ಕರ್ನಾಟಕ

karnataka

ETV Bharat / bharat

ಏರ್​ಟೆಲ್​ಗೆ 923 ಕೋಟಿ ಜಿಎಸ್​ಟಿ ರಿಫಂಡ್ ವಿಚಾರ: ಹೈಕೋರ್ಟ್ ಆದೇಶ ವಜಾಗೊಳಿಸಿದ ಸುಪ್ರೀಂ - ಹೈಕೋರ್ಟ್ ಆದೇಶ ವಜಾಗೊಳಿಸಿದ ಸುಪ್ರೀಂ

ಕೇಂದ್ರ ಸರ್ಕಾರವು ಟೆಲಿಕಾಂ ಕಂಪನಿ ಏರ್​ಟೆಲ್​ಗೆ  ಜಿಎಸ್​ಟಿ ಮರುಪಾವತಿ ಮಾಡಬೇಕು ಎಂದು ದೆಹಲಿ ಹೈಕೋರ್ಟ್​ನ ಆದೇಶವನ್ನು ವಜಾಗೊಳಿಸಲಾಗಿದೆ. ಕೇಂದ್ರ ಸರ್ಕಾರದ ಮೇಲ್ಮನವಿ ಅರ್ಜಿಯನ್ನು ಎತ್ತಿ ಹಿಡಿದಿದೆ.

SC allows Centre's appeal against giving Airtel Rs 923 crore as GST refund
ಏರ್​ಟೆಲ್​ಗೆ 923 ಕೋಟಿ ಜಿಎಸ್​ಟಿ ರಿಫಂಡ್ ವಿಚಾರ: ಹೈಕೋರ್ಟ್ ಆದೇಶ ವಜಾಗೊಳಿಸಿದ ಸುಪ್ರೀಂ

By

Published : Oct 28, 2021, 2:44 PM IST

ನವದೆಹಲಿ:ಟೆಲಿಕಾಂ ಕಂಪನಿ ಏರ್​ಟೆಲ್​ಗೆ ಸುಮಾರು 932 ಕೋಟಿ ರೂಪಾಯಿ ಜಿಎಸ್​ಟಿ ಮರುಪಾವತಿಗಾಗಿ ಆದೇಶಿಸಿದ್ದ ದೆಹಲಿ ಹೈಕೋರ್ಟ್​ನ ಆದೇಶವನ್ನು ವಜಾಗೊಳಿಸಿರುವ ಸುಪ್ರೀಂಕೋರ್ಟ್, ಕೇಂದ್ರ ಸರ್ಕಾರದ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಎತ್ತಿ ಹಿಡಿದಿದೆ.

2017ರ ಜುಲೈನಿಂದ ಸೆಪ್ಟೆಂಬರ್​ವರೆಗಿನ ಜಿಎಸ್​ಟಿಯ ಸುಮಾರು 932 ಕೋಟಿ ರೂಪಾಯಿ ಮರುಪಾವತಿ ಮಾಡಬೇಕೆಂದು ದೆಹಲಿ ಹೈಕೋರ್ಟ್ 2020ರ ಮೇ 5ರಂದು ಕೇಂದ್ರ ಸರ್ಕಾರಕ್ಕೆ ಆದೇಶಿಸಿತ್ತು. ಈ ಆದೇಶದ ವಿರುದ್ಧ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು.

ದೆಹಲಿ ಹೈಕೋರ್ಟ್​ನ ದ್ವಿಸದಸ್ಯ ಪೀಠ ಜಿಎಸ್​ಟಿ ಮರು ಪಾವತಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು. ಕೇಂದ್ರ ಸರ್ಕಾರದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಎಂ ಖಾನ್ವಿಲ್ಕರ್ ಮತ್ತು ದಿನೇಶ್ ಮಹೇಶ್ವರಿ ಅವರಿದ್ದ ಪೀಠ ಮೇಲ್ಮನವಿಯನ್ನು ಊರ್ಜಿತಗೊಳಿಸಿದ್ದು, ಮುಂದಿನ ದಿನಗಳಲ್ಲಿ ವಿಚಾರಣೆ ನಡೆಸಲಿದೆ.

ಇದನ್ನೂ ಓದಿ:ಶಿವಾಜಿ ಮಹಾರಾಜರ ನಾಡಿನಲ್ಲಿ ನಮಗೆ ಪ್ರತಿದಿನ ಅವಮಾನ, ರಕ್ಷಿಸಿ: ಸಮೀರ್ ವಾಂಖೆಡೆ ಪತ್ನಿ ಮನವಿ

ABOUT THE AUTHOR

...view details