ಡೆಹ್ರಾಡೂನ್ (ಉತ್ತರಾಖಂಡ):ಹಿಂದೂ ಧರ್ಮದ ಹೊರತಾಗಿ ಬೇರೆ ಧರ್ಮದ ಜನರಿಗೆ ದೇವಾಲಯಗಳಿಗೆ ಪ್ರವೇಶ ನಿಷೇಧಿಸಿ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡೆ ಸಾಧ್ವಿ ಪ್ರಾಚಿ ಹೇಳಿಕೆ ನೀಡಿದ್ದಾರೆ. ಈಗಾಗಲೇ ಉತ್ತರಾಖಂಡ ರಾಜಧಾನಿ ಡೆಹ್ರಾಡೂನ್ನ ಸುಮಾರು 150ಕ್ಕೂ ಹೆಚ್ಚು ದೇವಸ್ಥಾನಗಳ ಎದುರು 'ಹಿಂದೂಯೇತರರಿಗೆ ಪ್ರವೇಶ ನಿಷೇಧ' ಎಂದು ಬ್ಯಾನರ್ ಹಾಕಿರುವುದು ಕಂಡು ಬಂದಿದೆ.
ಇದನ್ನೂ ಓದಿ: ದೇವಾಲಯದಲ್ಲಿ ನೀರು ಕುಡಿದ ಮುಸ್ಲಿಂ ಬಾಲಕನಿಗೆ ಥಳಿತ ಆರೋಪ: ಸಂಜಯ್ ರಾವತ್ ಖಂಡನೆ
ಉತ್ತರಪ್ರದೇಶದ ಗಾಜಿಯಾಬಾದ್‌ನ ದೇಗುಲವೊಂದರಲ್ಲಿ ನೀರು ಕುಡಿಯಲು ಹೋದ ಮುಸ್ಲಿಂ ಬಾಲಕನನ್ನು ಥಳಿಸಲಾಗಿತ್ತು. ಈ ಘಟನೆ ಬೆನ್ನಲ್ಲೇ ಸಾಧ್ವಿ ಪ್ರಾಚಿ ಹೇಳಿಕೆ ನೀಡಿದ್ದಾರೆ. ಮೆಕ್ಕಾ ಮದೀನಾದಲ್ಲಿ ನಮಗೆ ಪ್ರವೇಶವಿಲ್ಲ.
ಹೀಗಿರುವಾಗ ಪದ್ಧತಿ, ವಿಚಾರಗಳು ವಿಭಿನ್ನವಾಗಿರುವ ನಮ್ಮ ಹಿಂದೂ ಧರ್ಮದ ಮಂದಿರಗಳಿಗೆ ನೀರು ಕುಡಿಯಲು ಏಕೆ ಹೋಗುತ್ತೀರಾ?. ಅಲ್ಲದೇ ನಮ್ಮ ಹೆಣ್ಣು ಮಕ್ಕಳನ್ನ ಲವ್ ಜಿಹಾದ್ ಬಲೆಗೆ ಬೀಳಿಸಿಕೊಳ್ಳುವಿರಿ ಎಂದು ಮುಸ್ಲಿಂ ಸಮುದಾಯದ ವಿರುದ್ಧ ಸಾಧ್ವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.