ಕರ್ನಾಟಕ

karnataka

ETV Bharat / bharat

ನಾಲ್ಕು ದಿನ ಜಮ್ಮು ಪ್ರವಾಸ ಕೈಗೊಂಡ ಮೋಹನ್ ಭಾಗವತ್ - ಮೋಹನ್ ಭಾಗವತ್

ಇಂದಿನಿಂದ ನಾಲ್ಕು ದಿನಗಳ ಕಾಲ ಆರ್​ಎಸ್ಎಸ್ ಮುಖ್ಯಸ್ಥ ಜಮ್ಮುವಿಗೆ ಪ್ರವಾಸ ಕೈಗೊಂಡಿದ್ದಾರೆ. 2016ರ ಬಳಿಕ ಇದೇ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದು, ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.

RSS chief Mohan Bhagawat
ಮೋಹನ್ ಭಾಗವತ್​

By

Published : Sep 30, 2021, 6:21 PM IST

ನವದೆಹಲಿ:ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಇಂದಿನಿಂದ ನಾಲ್ಕು ದಿನಗಳ ಕಾಲ ಜಮ್ಮು ಪ್ರವಾಸ ಕೈಗೊಂಡಿದ್ದಾರೆ. ಆರ್ಟಿಕಲ್ 370 ಮತ್ತು 35ಎ ವಿಧಿ ರದ್ದಾದ ಬಳಿಕ ಇದೇ ಮೊದಲ ಬಾರಿಗೆ ಆರ್​ಎಸ್​ಎಸ್ ಮುಖ್ಯಸ್ಥರು ಕೇಂದ್ರಾಡಳಿತ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದಾರೆ.

ಅಕ್ಟೋಬರ್ 2ರಂದು ಜಮ್ಮು ವಿಶ್ವವಿದ್ಯಾಲಯದ ಜೋರವಾರ್ ಸಿಂಗ್ ಸಭಾಭವನದಲ್ಲಿ ಕಾರ್ಯಾಗಾರ ಉದ್ದೇಶಿಸಿ ಭಾಗವತ್ ಭಾಷಣ ಮಾಡಲಿದ್ದಾರೆ. ಜೊತೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್​ಎಸ್​ಎಸ್ ಕೈಗೊಂಡಿರುವ ಕಾರ್ಯಗಳ ಪರಿಶೀಲನೆ ಮಾಡಲಿದ್ದಾರೆ. ಆ ಬಳಿಕ ಅ.3ರಂದು ಜಮ್ಮು ಮತ್ತು ಕಾಶ್ಮೀರದ ಆರ್​​ಎಸ್​​ಎಸ್​​ ಪ್ರಚಾರಕ್‌ ಉದ್ದೇಶಿಸಿ ವರ್ಚುವಲ್ ಸಭೆ ನಡೆಸುತ್ತಾರೆ.

ಈ ಮೊದಲು ಆರ್ಟಿಕಲ್ 370 ಮತ್ತು ವಿಶೇಷ ಸ್ಥಾನಮಾನ ರದ್ದುಪಡಿಸಿದ್ದ ಸರ್ಕಾರದ ನಡೆಯನ್ನು ಆರ್​​ಎಸ್​ಎಸ್ ಸ್ವಾಗತಿಸಿತ್ತು. ಆರ್​ಎಸ್​​​​ಎಸ್​ ಪ್ರಧಾನ ಕಾರ್ಯದರ್ಶಿ ಸುರೇಶ್ ಭಯ್ಯಾಜಿ ಈ ಕುರಿತು ಹೇಳಿಕೆ ನೀಡಿ, ರಾಷ್ಟ್ರದ ಏಕೀಕರಣ ಇದೀಗ ಪೂರ್ಣಗೊಂಡಿದೆ. ಭಾರತ ಸಂವಿಧಾನವು ಎಲ್ಲಾ ರಾಜ್ಯಗಳಿಗೂ ಸಮಾನವಾಗಿ ಅನ್ವಯಿಸಬೇಕು ಎಂಬುದು ಎಲ್ಲರ ಉದ್ದೇಶವಾಗಿತ್ತು. ಈ ಉದ್ದೇಶ ಈಗ ನೆರವೇರಿದೆ ಎಂದಿದ್ದರು.

ಇದನ್ನೂಓದಿ:ನಾನವನಲ್ಲ.. ನನಗೆ ಟ್ಯಾಗ್​ ಮಾಡುವುದು ದಯವಿಟ್ಟು ನಿಲ್ಲಿಸಿ: ಗೋಲ್​​ಕೀಪರ್​​ 'ಅಮರೀಂದರ್​ ಸಿಂಗ್​' ಮನವಿ

ABOUT THE AUTHOR

...view details