ಮಧುರೈ(ತಮಿಳುನಾಡು):ಈಗ ದುಬಾರಿ ದುನಿಯಾ... ಎಲ್ಲ ವಸ್ತುಗಳ ಬೆಲೆ ಗಗನಕ್ಕೇರಿದೆ. ಹೋಟೆಲ್ಗೆ ಹೋಗಿ ಬಿರಿಯಾನಿ ಊಟ ಮಾಡಬೇಕಾದ್ರೆ ಏನಿಲ್ಲ ಅಂದ್ರೂ ನಮ್ಮ ಬಳಿ 500 ರೂ. ಬೇಕು. ಆದರೆ ಇಲ್ಲೊಂದು ಹೋಟೆಲ್ನಲ್ಲಿ ಕೇವಲ 5 ಪೈಸೆಗೆ ಚಿಕನ್ ಬಿರಿಯಾನಿ ಮಾರಾಟ ಮಾಡಿರುವ ಘಟನೆ ನಡೆದಿದೆ.
ಕೇವಲ 5 ಪೈಸೆಗೆ ಬಿರಿಯಾನಿ ಮಾರಾಟ... ಕೊಂಡುಕೊಳ್ಳಲು ಮುಗಿಬಿದ್ದ ಜನ - 5 ಪೈಸೆಗೆ ಬಿರಿಯಾನಿ
ಕೇವಲ 5 ಪೈಸೆಗೆ ಬಿರಿಯಾನಿ ಮಾರಾಟ ಮಾಡಲು ಮುಂದಾಗುತ್ತಿದ್ದಂತೆ ನೂಕುನುಗ್ಗಲು ಆಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಹೊಸದಾಗಿ ಓಪನ್ ಆಗಿದ್ದ ಹೋಟೆಲ್ನಲ್ಲಿ ತಯಾರಿಸುತ್ತಿದ್ದ ಬಿರಿಯಾನಿ ಪ್ರಚಾರ ಮಾಡಲು ಕೇವಲ 5 ಪೈಸೆಗೆ ಮಾರಾಟ ಮಾಡಲು ಮುಂದಾಗುತ್ತಿದ್ದಂತೆ ಕೊಂಡುಕೊಳ್ಳಲು ಗ್ರಾಹಕರು ಮುಗಿಬಿದ್ದಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡಿನ ಮಧುರೈನಲ್ಲಿ ಹೊಸದಾಗಿ ಹೋಟೆಲ್ ಓಪನ್ ಆಗಿದ್ದು, ಅಲ್ಲಿ ಚಿಕನ್ ಬಿರಿಯಾನಿ ಸಿದ್ಧಗೊಳಿಸಿದ್ದಾರೆ. ಪ್ರಚಾರ ಪಡೆದುಕೊಳ್ಳುವ ಉದ್ದೇಶದಿಂದ 5 ಪೈಸೆಗೆ ಮಾರಾಟ ಮಾಡಲು ಮುಂದಾಗುತ್ತಿದ್ದಂತೆ ಜನರು ತಂಡೋಪ-ತಂಡವಾಗಿ ಆಗಮಿಸಿದ್ದಾರೆ. ಈ ವೇಳೆ ನೂಕುನುಗ್ಗಲು ಉಂಟಾಗಿದೆ.
ಹೋಟೆಲ್ ಓಪನ್ ಆಗುವುದಕ್ಕೂ ಮುಂಚಿತವಾಗಿ ಮಾಲೀಕರು 5 ಪೈಸೆಗೆ ಮಾರಾಟ ಮಾಡುವುದಾಗಿ ಜಾಹೀರಾತು ನೀಡಿದ್ದರು. ಇಂದು ಅದು ಓಪನ್ ಆಗುತ್ತಿದ್ದಂತೆ ನೂರಾರು ಜನರು ಅಲ್ಲಿಗೆ ಆಗಮಿಸಿದ್ದಾರೆ. ಈ ವೇಳೆ ಹೆಚ್ಚಿನ ಗದ್ದಲ ಉಂಟಾಗಿರುವ ಕಾರಣ ಮಾಲೀಕರು ಹೋಟೆಲ್ ಬಂದ್ ಮಾಡಿದ್ದಾರೆ.