ಕರ್ನಾಟಕ

karnataka

ETV Bharat / bharat

'ವಿರೋಧಿಗಳು ಮರ್ ಜಾ ಮೋದಿ ಅಂದ್ರೆ, ಜನತೆ ಮತ್ ಜಾ ಮೋದಿ ಅಂತಿದ್ದಾರೆ' - ಈಶಾನ್ಯ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ

ಪ್ರತಿಪಕ್ಷಗಳು ‘ಮರ್‌ ಜಾ ಮೋದಿ, ಮರ್‌ ಜಾ ಮೋದಿ’ (ಮೋದಿ ಸಾಯಿ) ಎಂದು ಘೋಷಣೆ ಕೂಗುತ್ತಿದ್ದರೆ ದೇಶದ ಜನತೆ 'ಮತ್ ಜಾ ಮೋದಿ' (ಮೋದಿ ಹೋಗಬೇಡಿ) ಎಂದು ಹೇಳುತ್ತಿದ್ದಾರೆ. ಹೀಗಾಗಿ, ನಾನು ಬದುಕಿರುವವರೆಗೂ ಏನೂ ಮಾಡಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Modi
ಪ್ರಧಾನಿ ನರೇಂದ್ರ ಮೋದಿ

By

Published : Mar 3, 2023, 8:43 AM IST

Updated : Mar 3, 2023, 1:44 PM IST

ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ನಿನ್ನೆ ಮೂರು ಈಶಾನ್ಯ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕ ರಾಷ್ಟ್ರ ರಾಜಧಾನಿಯಲ್ಲಿರುವ ಭಾರತೀಯ ಜನತಾ ಪಕ್ಷದ(ಬಿಜೆಪಿ) ಪ್ರಧಾನ ಕಚೇರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದರು. ಈ ವೇಳೆ ಕೇಂದ್ರ ಕಚೇರಿಯ ಬಳಿ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ತಮ್ಮ ರಾಜಕೀಯ ಪ್ರತಿಸ್ಪರ್ಧಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

"ಕೆಲವರು ಮೋದಿಗೆ ಸಮಾಧಿ ತೋಡಲು ಹಾತೊರೆಯುತ್ತಿದ್ದಾರೆ. ಮರ್ ಜಾ ಮೋದಿ...ಮರ್ ಜಾ ಮೋದಿ... ಎಂದು ಘೋಷಣೆ ಕೂಗುತ್ತಿದ್ದಾರೆ. ಆದ್ರೆ, ದೇಶದ ಜನತೆ "ಮತ್ ಜಾ ಮೋದಿ" (ಮೋದಿ ಹೋಗಬೇಡಿ) ಎಂದು ಜಪಿಸುತ್ತಿರುವಾಗ ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಅವಕಾಶ ಸಿಕ್ಕಲ್ಲೆಲ್ಲ ಕಮಲ ಅರಳುತ್ತಲೇ ಇರುತ್ತದೆ" ಎಂದು ಪ್ರತಿಪಕ್ಷಗಳಿಗೆ ಚಾಟಿ ಬೀಸಿದರು.

ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ, "ಈಶಾನ್ಯ ರಾಜ್ಯಗಳು ದೆಹಲಿಯಿಂದ ಅಥವಾ ನಮ್ಮ ಹೃದಯದಿಂದ ಹೆಚ್ಚು ದೂರದಲ್ಲಿಲ್ಲ. ಈ ಚುನಾವಣಾ ಫಲಿತಾಂಶ ಇಡೀ ದೇಶಕ್ಕೆ ಮತ್ತು ಜಗತ್ತಿಗೆ ಅನೇಕ ಸಂದೇಶಗಳನ್ನು ನೀಡಿದೆ. ಯಾವಾಗಲೂ ಎಲೆಕ್ಷನ್​ ರಿಸಲ್ಟ್​ ಪ್ರಜಾಪ್ರಭುತ್ವದಲ್ಲಿ ಜನರ ನಂಬಿಕೆಯನ್ನು ಬಿಂಬಿಸುತ್ತವೆ. ತ್ರಿಪುರಾ, ನಾಗಾಲ್ಯಾಂಡ್ ಮತ್ತು ಮೇಘಾಲಯದ ಜನರಿಗೆ ನಾನು ನಮ್ರತೆಯಿಂದ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ಬಾರಿ ಜನತೆ ನಮಗೆ ಆಶೀರ್ವಾದ ಮಾಡಿದ್ದಾರೆ. ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಜೊತೆಗೆ ಈ ಮೂರು ರಾಜ್ಯಗಳ ಬಿಜೆಪಿ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ. ಈ ಫಲಿತಾಂಶ ಎಲ್ಲಾ ಬಿಜೆಪಿ ಕಾರ್ಯಕರ್ತರ ಶ್ರಮದ ಫಲ. ಈಶಾನ್ಯದಲ್ಲಿ ಕೆಲಸ ಮಾಡುವುದು ಅಷ್ಟು ಸುಲಭದ ಮಾತಲ್ಲ. ಆದ್ದರಿಂದ ಅವರಿಗೆ ವಿಶೇಷ ಧನ್ಯವಾದ ಸಲ್ಲುತ್ತದೆ" ಎಂದರು.

ಇದನ್ನೂ ಓದಿ:ಚುನಾವಣೆ ಫಲಿತಾಂಶದಿಂದ ಪ್ರಜಾಪ್ರಭುತ್ವದ ಮೇಲಿನ ನಂಬಿಕೆ ಮತ್ತಷ್ಟು ದೃಢ: ಮೋದಿಯಿಂದ ಮತದಾರರಿಗೆ ಅಭಿನಂದನೆ

"ಈಶಾನ್ಯಕ್ಕೆ ಆಗಾಗ ಭೇಟಿ ನೀಡುವ ಮೂಲಕ ನಾನು ಅವರ ಹೃದಯ ಗೆದ್ದಿದ್ದೇನೆ. ಇದು ನನಗೆ ದೊಡ್ಡ ಗೆಲುವು. ಈ ಪ್ರದೇಶದ ಶಾಂತಿ, ಸಮೃದ್ಧಿ ಮತ್ತು ಅಭಿವೃದ್ಧಿಗೆ ಈಗ ಸಮಯ ಕೂಡಿಬಂದಿದೆ. ಹೊಸ ಇತಿಹಾಸ ಸೃಷ್ಟಿಸುವ ಕಾಲ ಸನ್ನಿಹಿತವಾಗಿದೆ. ಇಂದಿನ ಫಲಿತಾಂಶಗಳು ಈಶಾನ್ಯದ ಬಗ್ಗೆ ಕಾಂಗ್ರೆಸ್‌ನ ಚಿಂತನೆಯನ್ನು ಬಹಿರಂಗಪಡಿಸಿವೆ. ಇವು ಸಣ್ಣ ರಾಜ್ಯಗಳು ಮತ್ತು ಅತ್ಯಲ್ಪ ಎಂದು ಕಾಂಗ್ರೆಸ್ ಹೇಳಿಕೊಂಡಿತ್ತು. ಇದು ಜನಾದೇಶ ಮತ್ತು ಈಶಾನ್ಯ ರಾಜ್ಯಗಳ ಜನರಿಗೆ ಕಾಂಗ್ರೆಸ್​ ಮಾಡಿದ ಅವಮಾನ" ಎಂದು ವಾಗ್ದಾಳಿ ನಡೆಸಿದರು.

ದೇಶ, ದೇಶವಾಸಿಗಳಿಗೆ ಮೊದಲ ಪ್ರಾಶಸ್ತ್ಯ: "ಭಾರತದಲ್ಲಿ ಬಿಜೆಪಿ ಹೊಸ ಮಾದರಿಯ, ಅಭಿವೃದ್ಧಿ ಆಧಾರಿತ ರಾಜಕೀಯ ಮಾಡುತ್ತಿದೆ. ಇದನ್ನು ಜನತೆ ಸರ್ವಾನುಮತದಿಂದ ಸ್ವೀಕರಿಸಿದ್ದಾರೆ. ನಮ್ಮ ಪಕ್ಷವು ದೇಶ ಮತ್ತು ದೇಶದ ಜನತೆಗೆ ಮೊದಲ ಪ್ರಾಶಸ್ತ್ಯ ನೀಡುತ್ತದೆ" ಎಂದು ಮೋದಿ ಹೇಳಿದರು.

ಇದನ್ನೂ ಓದಿ:ಮೇಘಾಲಯದಲ್ಲಿ ಅತಂತ್ರ ಫಲಿತಾಂಶ: ಸಂಗ್ಮಾ ನೇತೃತ್ವದ ಎನ್‌ಪಿಪಿ ದೊಡ್ಡ ಪಕ್ಷ, ಬೆಂಬಲ ಸೂಚಿಸಿದ ಬಿಜೆಪಿ

Last Updated : Mar 3, 2023, 1:44 PM IST

ABOUT THE AUTHOR

...view details