ನವದೆಹಲಿ: ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು ಯುನೈಟಡ್ ಕಿಂಗಡಂನ್ ಪ್ರಧಾನಿಯಾಗಿ ಆಯ್ಕೆಯಾಗಿರುವ ಭಾರತೀಯ ಮೂಲದ ರಿಷಿ ಸುನಕ್ ಅವರನ್ನು ಶ್ಲಾಘಿಸಿದ್ದಾರೆ. ತಮ್ಮಇನ್‌ಸ್ಟಾಗ್ರಾಮ್ ಅಧಿಕೃತ ಖಾತೆಯಲ್ಲಿ ಬಿಗ್ ಬಿ, 'ಭಾರತ್ ಮಾತಾ ಕಿ ಜೈ, ಈಗ ಬ್ರಿಟನ್ ನನ್ನ ದೇಶದಿಂದ ಹೊಸ ವೈಸ್‌ರಾಯ್ ಅನ್ನು ತನ್ನ ಪ್ರಧಾನ ಮಂತ್ರಿಯಾಗಿ ಪಡೆದಿದೆ' ಎಂದು ಬರೆದುಕೊಂಡಿದ್ದಾರೆ.
ಬ್ರಿಟನ್‌ನ ಕನ್ಸರ್ವೇಟಿವ್ ಪಕ್ಷದ ನಾಯಕ ರಿಷಿ ಸುನಕ್ ಸೋಮವಾರ, ಟೋರಿ ನಾಯಕತ್ವದ ರೇಸ್‌ನಲ್ಲಿ ಲಿಜ್ ಟ್ರಸ್ ವಿರುದ್ಧ ಸೋತ ಎರಡು ತಿಂಗಳೊಳಗೆ ಯುನೈಟೆಡ್ ಕಿಂಗ್‌ಡಂನ ಮೊದಲ ಭಾರತೀಯ ಮೂಲದ ಪ್ರಧಾನ ಮಂತ್ರಿಯಾಗಿ ಆಯ್ಕೆ ಆಗಿದ್ದಾರೆ. ಇನ್ಫೋಸಿಸ್ ನಾರಾಯಣಮೂರ್ತಿ ಅವರ ಅಳಿಯ ಈ ಹುದ್ದೆ ಒಲಿದು ಬಂದಿದೆ.
ಲಿಜ್ ಟ್ರಸ್ ರಾಜೀನಾಮೆ ಬಳಿಕ ಒಲಿದ ಅದೃಷ್ಟ:ಯುಕೆ ಪೌಂಡ್ ಕುಸಿಯುವಂತೆ ಮಾಡಿ ಭಾರಿ ಟೀಕೆಗೆ ಒಳಗಾಗಿದ್ದ ಲಿಜ್ ಟ್ರಸ್ ಮಿನಿ - ಬಜೆಟ್‌ನ ನಂತರ ಬ್ರಿಟನ್‌ನಲ್ಲಿ ಬದಲಾವಣೆ ಕೂಗು ಎದ್ದಿತ್ತು. ದೇಶವನ್ನು ಮುನ್ನೆಡಸಲು ವಿಫಲರಾದ ಲಿಜ್ ಟ್ರಸ್ ರಾಜೀನಾಮೆ ನೀಡಿದ ಬಳಿಕ ಪ್ರಧಾನಿ ಹುದ್ದೆ ಅದೃಷ್ಟ ಸುನಕ್ ಗೆ ತಾನಾಗಿಯೇ ಖುಲಾಯಿಸಿದೆ. ಕಡಿಮೆ ಅವಧಿಯ ಬ್ರಿಟಿಷ್ ಪ್ರಧಾನಿ ಲಿಜ್ ಟ್ರಸ್ಗೆ 45 ದಿನಗಳಲ್ಲಿ ಅಧಿಕಾರದಿಂದ ಕೆಳಗಿಳಿದಿದ್ದಾರೆ.
ಭಾರತೀಯ ಮೂಲದ ವಂಶಸ್ಥರು:ಪೂರ್ವ ಆಫ್ರಿಕಾದಿಂದ ಬ್ರಿಟನ್‌ಗೆ ವಲಸೆ ಬಂದ ಭಾರತೀಯ ಮೂಲದ ವಂಶಸ್ಥ ದಂಪತಿ ಮಗನಾಗಿ ಸುನಕ್ ಸೌತಾಂಪ್ಟನ್‌ನಲ್ಲಿ ಜನಿಸಿದರು. ಆಕ್ಸ್‌ಫರ್ಡ್ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿ ಸುನಕ್ ಅವರು ಇನ್ಫೋಸಿಸ್ ಅನ್ನು ಸ್ಥಾಪಿಸಿದ ಬಿಲಿಯನೇರ್ ಉದ್ಯಮಿ ಎನ್‌ಆರ್ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಅವರನ್ನು ವಿವಾಹವಾಗಿದ್ದಾರೆ.
ಇದನ್ನೂ ಓದಿ:ಬ್ರಿಟನ್‌ನಲ್ಲಿ ದೀಪಾವಳಿ ಧಮಾಕ: 'ಸೂರ್ಯ ಮುಳುಗದ ದೇಶ'ಕ್ಕೆ ಭಾರತ ಮೂಲದ ರಿಷಿ ಸುನಾಕ್ ಪ್ರಧಾನಿ