ಡೆಹ್ರಾಡೂನ್(ಉತ್ತರಾಖಂಡ್): ಪರ್ವತಗಳ ಮೇಲೆ ಅಸಂಖ್ಯಾತ ಅದ್ಭುತ ಸಂಗತಿಗಳಿವೆ. ಅವುಗಳ ಉಪಯುಕ್ತತೆಯೂ ಕಳೆದು ಹೋಗುತ್ತಿದೆ. ರಿಂಗಲ್ ಅಥವಾ ರಿಂಗ್ಲು ಉತ್ತರಾಖಂಡದ ಬಹುಮುಖ ಸಸ್ಯವಾಗಿದೆ.
ಇದನ್ನು ಬಿದಿರಿನ ಕುಲ ಎಂದು ಪರಿಗಣಿಸಲಾಗಿದೆ. ಉತ್ತರಾಖಂಡದಲ್ಲಿ ಇದನ್ನು ಕುಬ್ಜ ಬಿದಿರು ಅಂತಲೂ ಕರೆಯುತ್ತಾರೆ. ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಮಧ್ಯೆ ಮನೆಗೆ ಮರಳುವ ಯುವಕರಿಗೆ ರಿಂಗಲ್ ಬುಟ್ಟಿ ತಯಾರಿಕೆಯು ಆರ್ಥಿಕ ಮೂಲವಾಗುತ್ತಿದೆ.
ಸಾವಿರದಿಂದ ಏಳು ಸಾವಿರ ಅಡಿ ಎತ್ತರದ ಪ್ರದೇಶಗಳಲ್ಲಿ ರಿಂಗಲ್ ಕಂಡು ಬರುತ್ತದೆ. ಆದಾಗ್ಯೂ, ರಿಂಗಲ್ ಗಿಡವು ಬಿದಿರಿನಷ್ಟು ಎತ್ತರವಾಗಿ ಬೆಳೆಯುವುದಿಲ್ಲ. ಇದು 10-12 ಅಡಿ ಎತ್ತರ ಮತ್ತು ಬಿದಿರಿಗಿಂತ ಹೆಚ್ಚು ತೆಳುವಾಗಿರುತ್ತದೆ.
ಇದಕ್ಕೆ ನೀರು ಮತ್ತು ತೇವಾಂಶ ಬೇಕಾಗುತ್ತದೆ. ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳುವುದರ ಜೊತೆಗೆ, ಭೂಕುಸಿತವನ್ನು ತಡೆಗಟ್ಟಲು ಸಹ ಇದು ಸಹಾಯಕವಾಗಿದೆ.