ಫಿಲಡೆಲ್ಫಿಯಾ:ಮಂಕಿಪಾಕ್ಸ್ ಕಾಯಿಲೆಯು 8 ವರ್ಷದ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಹೆಚ್ಚು ಕಂಡು ಬರುತ್ತಿದ್ದು, ಗಂಭೀರವಾದ ಅಪಾಯ ಸೃಷ್ಟಿ ಮಾಡಿದೆ. ಮಕ್ಕಳಿಗೆ ಬರುವ ಸಾಂಕ್ರಾಮಿಕ ರೋಗಗಳಲ್ಲಿ ಪೈಕಿ ಇದು ಹೆಚ್ಚು ಅಪಾಯ ಎಂಬುವುದನ್ನು ಜನರು ಮನಗಾಣಬೇಕು ಎಂದು ಯುರೋಪದ ದಿ ಪೀಡಿಯಾಟ್ರಿಕ್ ಇನ್ಫೆಕ್ಷಿಯಸ್ ಡಿಸೀಸ್ ಜರ್ನಲ್ ವೋಲ್ಟರ್ಸ್ ಕ್ಲುವರ್ ಲಿಪಿನ್‌ಕಾಟ್ ಪ್ರಕಟಿಸಿದೆ.
ಸ್ವಿಟ್ಜರ್ಲೆಂಡ್‌ನ ಫ್ರಿಬರ್ಗ್ ವಿಶ್ವವಿದ್ಯಾನಿಲಯದ ಪೆಟ್ರಾ ಝಿಮ್ಮರ್‌ಮ್ಯಾನ್, ಆಸ್ಟ್ರೇಲಿಯಾದ ಮೆಲ್ಬೋರ್ನ್ ವಿಶ್ವವಿದ್ಯಾಲಯ ಮತ್ತು ಮರ್ಡೋಕ್ ಮಕ್ಕಳ ಸಂಶೋಧನಾ ಸಂಸ್ಥೆಯ ನಿಗೆಲ್ ಕರ್ಟಿಸ್ ಪ್ರಕಾರ, ಮಂಕಿಪ್ಯಾಕ್ಸ್ ಏಕಾಏಕಿ ವಿಸ್ತರಿಸಿದರೆ ಸಿಡುಬು ವ್ಯಾಕ್ಸಿನೇಷನ್ ಮತ್ತು ಇತರ ತುರ್ತು ಕ್ರಮಗಳಿಗೆ ಚಿಕ್ಕ ಮಕ್ಕಳು ಪ್ರಮುಖ ಗುರಿಯಾಗಬೇಕಾಗುತ್ತದೆ.
ಆರಂಭದಲ್ಲಿ ಬರುವ ಮಂಕಿಪಾಕ್ಸ್ ಹೇಗೆ ಎದುರಿಸಬೇಕು ಎಂಬುವುದನ್ನು "ವೈದ್ಯರು ಏನು ತಿಳಿದುಕೊಳ್ಳಬೇಕು" ವೃತ್ತಿಪರ ದೃಷ್ಟಿಕೋನದ ಬಗ್ಗೆ ತಿಳಿಸಿದ ಅವರು, ಏಕಾಏಕಿ ಚಿಕ್ಕ ಮಕ್ಕಳಲ್ಲಿ ಮಂಕಿಪಾಕ್ಸ್ ಕಾಣಿಸಿಕೊಂಡು, ಅಪಾಯ ತರುವುದು ಜಾಸ್ತಿ ಎಂದ್ದಾರೆ.
47 ಸಾವಿರ ಮಂಕಿಪಾಕ್ಸ್ ಪ್ರಕರಣಗಳು:ಆಗಸ್ಟ್ 2022 ರ ಹೊತ್ತಿಗೆ ಪ್ರಯೋಗಾಲಯ ಜಾಗತಿಕವಾಗಿ ದೃಢೀಕರಿಸಿದ್ದ ಸುಮಾರು 47,000 ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ. ಅವುಗಳಲ್ಲಿ 211 ಮಾತ್ರ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು ಹದಿಹರೆಯದವರಲ್ಲಿ ಕಂಡುಬಂದಿವೆ. ಪ್ರಸ್ತುತ ಮಂಕಿಪಾಕ್ಸ್ ವೈರಸ್ ಲೈಂಗಿಕ ಅಥವಾ ನಿಕಟ ಸಂಪರ್ಕ ,ನೀರು ಹನಿ ಮತ್ತು ಕಲುಷಿತ ವಸ್ತು ಇತರ ಮಾರ್ಗಗಳ ಮೂಲಕ ದಿಢೀರ್ ಹರಡುತ್ತದೆ.
ಸಿಡುಬು ಮತ್ತು ಮಂಕಿಪಾಕ್ಸ್ ಎರಡೂ ಆರ್ಥೋಪಾಕ್ಸ್ ವೈರಸ್‌ಗಳೇ ಆದರೆ ಮಂಕಿಪಾಕ್ಸ್ ಹರಡುವಿಕೆ ವೇಗ ಹೆಚ್ಚು. ಮಂಕಿಪಾಕ್ಸ್ ಪ್ರಕರಣಗಳಲ್ಲಿ ಹೆಚ್ಚಿನವು "ಸ್ವಯಂ-ಸೀಮಿತಗೊಳಿಸುವಿಕೆ" ಆಗಿದ್ದು, 2 ರಿಂದ 4 ವಾರಗಳಲ್ಲಿ ದಿಢೀರ್ ಬೆಳವಣಿಗೆ ಕಾಣುತ್ತದೆ. ಈ ವೈರಸ್ ಆರಂಭದಲ್ಲಿ ಅನುಪಸ್ಥಿತಿ ಹಾಗೂ ಸೌಮ್ಯವಾಗಿ ಆವರಿಸಿಕೊಂಡರೂ ಭವಿಷ್ಯದಲ್ಲಿ ಶೀಘ್ರ ನೋವಿಗೆ ಕಾರಣವಾಗುತ್ತದೆ.
ಮಕ್ಕಳಲ್ಲಿ ಕಾಣಿಸಿಕೊಂಡಿದ್ದ ಈ ವರೆಗೆ ಮಂಕಿಪಾಕ್ಸ್‌ನ ಕಡಿಮೆ ತೊಂದರೆಗಳು ಮತ್ತು ಇತರ ಗಂಭೀರ ಪರಿಣಾಮ ಹೊರತಾಗಿಯೂ ವರದಿಗಳು ಪ್ರಕಟವಾಗಿದ್ದು, ಮಕ್ಕಳಲ್ಲಿ ವಿಶೇಷ ಕಾಳಜಿ ಮೂಡಿಸಿವೆ. ಶ್ರೀಮಂತ ದೇಶಗಳಲ್ಲಿಯೂ ಸಹ ಮಕ್ಕಳು ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ,ಹೆಚ್ಚು ಮರಣ ಹೊಂದಿರುವ ವರದಿಗಳ ಬಗ್ಗೆ ಡಾ. ಜಿಮ್ಮರ್‌ಮ್ಯಾನ್ ಮತ್ತು ಕರ್ಟಿಸ್ ಬೆಳಕು ಚೆಲ್ಲಿದ್ದಾರೆ.
ಮುಖ್ಯವಾಗಿ ಕಡಿಮೆ ಆದಾಯ, ಬಡ ದೇಶಗಳ ದತ್ತಾಂಶವನ್ನು ನೋಡಿದರೆ, 8 ವರ್ಷದೊಳಗಿನ ಮಕ್ಕಳು ವಿಶೇಷವಾಗಿ ಹೆಚ್ಚು ಸಮಸ್ಯೆ ಅಪಾಯ ಎದುರಿಸಬೇಕಾಗುವುದು ಸಹಜವಾಗಿದೆ ಅನ್ನುತ್ತಾರೆ ತಜ್ಞರು. ಚಿಕ್ಕ ಮಕ್ಕಳು ಪದೆ ಪದೇ ಪರಚುವುದರಿಂದ ಕಣ್ಣುಗಳು ಸೇರಿದಂತೆ ದೇಹದ ಇತರ ಭಾಗಗಳಿಗೆ ಸೋಂಕು ಬೇಗ ಹರಡಲು ಸಹಕಾರಿಯಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.