ಕರ್ನಾಟಕ

karnataka

ETV Bharat / bharat

ಠಾಕ್ರೆ ಅವರನ್ನು ನೋಯಿಸುವುದು ನಮ್ಮ ಉದ್ದೇಶವಲ್ಲ: ಬಂಡಾಯ ಶಾಸಕ ದೀಪಕ್ ಕೇಸರ್ಕರ್ - Maharashtra political crisis

ಉದ್ಧವ್ ಠಾಕ್ರೆ ರಾಜೀನಾಮೆ ಕುರಿತು ಬಂಡಾಯ ಶಾಸಕ ದೀಪಕ್ ಕೇಸರ್ಕರ್ ಪ್ರತಿಕ್ರಿಯೆ ನೀಡಿದ್ದು, ಠಾಕ್ರೆ ಅವರನ್ನು ನೋಯಿಸುವುದು ಅಥವಾ ಅಗೌರವಿಸುವುದು ನಮ್ಮ ಉದ್ದೇಶವಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

Rebel Shiv Sena MLA Deepak Kesarkar
ಬಂಡಾಯ ಶಾಸಕ ದೀಪಕ್ ಕೇಸರ್ಕರ್

By

Published : Jun 30, 2022, 5:24 PM IST

ಮುಂಬೈ(ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ನೀಡುವ ಮೂಲಕ ಆಡಳಿತರೂಢ ಮಹಾವಿಕಾಸ್ ಅಘಾಡಿ ಮೈತ್ರಿ ಸರ್ಕಾರ 2 ವರ್ಷ 7 ತಿಂಗಳಲ್ಲಿ ಪತನಗೊಂಡಿದೆ. ಈ ಬಗ್ಗೆ ಗೋವಾದ ಪಣಜಿಯಲ್ಲಿರುವ ಬಂಡಾಯ ಶಾಸಕ ದೀಪಕ್ ಕೇಸರ್ಕರ್ ಪ್ರತಿಕ್ರಿಯೆ ನೀಡಿದ್ದಾರೆ.

ಸಿಎಂ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ್ದಾರೆ. ಆದರೆ ನಾವಿನ್ನೂ ಶಿವಸೇನೆಯಲ್ಲಿದ್ದೇವೆ ಮತ್ತು ಉದ್ಧವ್ ಠಾಕ್ರೆ ಅವರನ್ನು ನೋಯಿಸುವುದು ಅಥವಾ ಅಗೌರವಿಸುವುದು ನಮ್ಮ ಉದ್ದೇಶವಲ್ಲ ಎಂದು ಬಂಡಾಯ ಶಾಸಕ ದೀಪಕ್ ಕೇಸರ್ಕರ್ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:ಮಹಾರಾಷ್ಟ್ರಕ್ಕೆ ಸಿಎಂ ಫಡ್ನವೀಸ್​​, ಡೆಪ್ಯೂಟಿ ಸಿಎಂ​ ಶಿಂಧೆ: ವರದಿ

ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರು ಸಿಎಂ ಆಗಲಿರುವ ಏಕನಾಥ್​ ಶಿಂದೆ ಪ್ರಮಾಣವಚನದ ಬಗ್ಗೆ ಮಾಹಿತಿ ನೀಡಿದ್ದಾರೆ. ಈಗಾಗಲೇ ನಮ್ಮ ಮಾತುಕತೆ ಆರಂಭವಾಗಿದ್ದು, ನಾವು ಸರ್ಕಾರ ರಚಿಸುತ್ತೇವೆ ಎಂದು ಕೇಸರ್ಕರ್ ಹೇಳಿದ್ದಾರೆ.

ABOUT THE AUTHOR

...view details