ಥಾಣೆ(ಮಹಾರಾಷ್ಟ್ರ):ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕುಟುಂಬದ ಸಂಬಂಧಿಕರಿಗೆ ಜಾರಿ ನಿರ್ದೇಶನಾಲಯ (ಇಡಿ) ಶಾಕ್ ನೀಡಿದೆ. ಠಾಕ್ರೆ ಅವರ ಪತ್ನಿ ರಶ್ಮಿ ಸಹೋದರನಿಗೆ ಸೇರಿದ 11 ಫ್ಲಾಟ್ಗಳಿಗೆ ಇಡಿ ಬೀಗ ಹಾಕಿದೆ. ಈ ಫ್ಲಾಟ್ಗಳ ಮೌಲ್ಯ ಅಂದಾಜು 6.54 ಕೋಟಿ ರೂ. ಆಗಿದೆ.
ಸಿಎಂ ಉದ್ಧವ್ ಠಾಕ್ರೆ ಬಾವನಿಗೆ ಸೇರಿದ 11 ಫ್ಲಾಟ್ಗಳಿಗೆ ಬೀಗ ಜಡಿದ ಇಡಿ
ಪುಷ್ಪಕ್ ಬುಲಿಯನ್ ಪ್ರಕರಣದಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪತ್ನಿ ರಶ್ಮಿ ಠಾಕ್ರೆ ಸಹೋದರ ಶ್ರೀಧರ್ ಪಾಟಣಕರ್ ಹೆಸರು ಕೇಳಿ ಬಂದಿದೆ. ಈ ಬಗ್ಗೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ವಸತಿ ಫ್ಲಾಟ್ಗಳ ಜಪ್ತಿ ಮಾಡುವ ಮೂಲಕ ಕಠಿಣ ಕ್ರಮ ಜರುಗಿಸಿದೆ.
uddhav thackeray
ಪುಷ್ಪಕ್ ಬುಲಿಯನ್ ಪ್ರಕರಣದಲ್ಲಿ ರಶ್ಮಿ ಠಾಕ್ರೆ ಸಹೋದರ ಶ್ರೀಧರ್ ಪಾಟಣಕರ್ ಅವರ ಹೆಸರು ಕೇಳಿ ಬಂದಿದೆ. ಈ ಬಗ್ಗೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಸಿಎಂ ಠಾಕ್ರೆ ಸಂಬಂಧಿ ವಿರುದ್ಧ ಕಠಿಣ ಕ್ರಮ ಜರುಗಿಸಿದೆ. ಮಹಾರಾಷ್ಟ್ರದ ಥಾಣೆಯಲ್ಲಿರುವ ಶ್ರೀಧರ್ ಪಾಟಣಕರ್ ಅವರಿಗೆ ಸೇರಿದ ವಸತಿ ಫ್ಲಾಟ್ಗಳನ್ನು ಜಪ್ತಿ ಮಾಡಿದೆ.
ಇದನ್ನೂ ಓದಿ:ಮಲ್ಯ, ನೀರವ್ ಮೋದಿ, ಚೋಕ್ಸಿಯಿಂದ ಬ್ಯಾಂಕ್ಗಳಿಗಾದ ನಷ್ಟ ಎಷ್ಟು?.. ಸರ್ಕಾರ ಜಪ್ತಿ ಮಾಡಿದ ಆಸ್ತಿ ಎಷ್ಟು?