ಹೈದರಾಬಾದ್:ಗಂಗೂಬಾಯಿ ಕಥಿಯಾವಾಡಿ ಚಿತ್ರದಲ್ಲಿನ ಪಾತ್ರಕ್ಕಾಗಿ ಇತ್ತೀಚೆಗೆ ನಡೆದ ಜೀ ಸಿನಿಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಹಿಳಾ ವಿಭಾಗದಲ್ಲಿ 'ಅತ್ಯುತ್ತಮ ನಟಿ' ಪ್ರಶಸ್ತಿ ಪಡೆದಿರುವ ಬಾಲಿವುಡ್ ನಟಿ ಆಲಿಯಾ ಭಟ್ ಫೊಟೋಗಳನ್ನು ಪತಿ ರಣಬೀರ್ ಕಪೂರ್ ಅವರು ಎಲ್ಲರ ಗಮನ ಸೆಳೆಯುವ ರೀತಿಯಲ್ಲಿ ಸೆರೆಹಿಡಿರುವುದು ವಿಶೇಷವಾಗಿದೆ. ರಣಬೀರ್ ಕಪೂರ್ ತಾವು ಯಾವುದೇ ಉತ್ತಮ ಛಾಯಾಗ್ರಾಹಕರೂ ಕಡಿಮೆಯಿಲ್ಲ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.
ನಟಿ ಆಲಿಯಾ ಭಟ್ ಈ ಪ್ರಶಸ್ತಿಯ ಫೋಟೋಗಳ ಸರಣಿಯನ್ನು ಮಧ್ಯಾರಾತ್ರಿ ಸಮಯದಲ್ಲಿ ಇನಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ, ಗಮನ ಸೆಳೆದದ್ದು ನಟಿ ಪ್ರಶಸ್ತಿಯೊಂದಿಗೆ ಪೋಸ್ ನೀಡಿದ ವಿಶೇಷ ಚಿತ್ರ. ಇದನ್ನು ಅವರ ಪತಿ ರಣಬೀರ್ ಕಪೂರ್ ಅವರೇ ಮಧ್ಯರಾತ್ರಿ 2 ಗಂಟೆಗೆ ಕ್ಲಿಕ್ ಮಾಡಿರುವುದು ಮತ್ತೊಂದು ವಿಶೇಷ.
ನಟಿ ಆಲಿಯಾ ಭಟ್ ತಮ್ಮ ಫೋಟೋವನ್ನು ಇನಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:ಝೀ ಸಿನಿಮಾ ಅವಾರ್ಡ್ಸ್ 2023: ಪ್ರಶಸ್ತಿ ಸಮಾರಂಭದಲ್ಲಿ ಮಿಂಚಿದ ಆಲಿಯಾ ಭಟ್, ಕಿಯಾರಾ ಅಡ್ವಾಣಿ
ಇನ್ಸ್ಟಾಗ್ರಾಮ್ನಲ್ಲಿ ಬರೆದಿದ್ದೇನು?: ಚಿತ್ರವನ್ನು ಹಂಚಿಕೊಂಡಿರುವ ನಟಿ ಹೀಗೆ ಬರೆದಿದ್ದಾರೆ, ಗಂಗು ಪ್ರೀತಿ. ಜೀ ಸಿನಿ ಪ್ರಶಸ್ತಿ ನೀಡಿರುವುದಕ್ಕೆ ಧನ್ಯವಾದ. ಸರ್ (ಬನ್ಸಾಲಿ ಪ್ರೊಡಕ್ಷನ್ಸ್), ನಾನು ನಿಮಗೆ ಎಷ್ಟು ಕೃತಜ್ಞನಾಗಿದ್ದೇನೆ ಎಂಬುದಕ್ಕೆ ಯಾವುದೇ ಪದಗಳಲ್ಲಿ ವರ್ಣಿಸಿದರೂ ಸಾಕಾಗುವುದಿಲ್ಲ. ಅವಕಾಶ ನೀಡಿದ ಗಂಗೂಬಾಯಿ ಕಥಿಯಾವಾಡಿ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಇನ್ನೂ ಮಧ್ಯರಾತ್ರಿ 2 ಗಂಟೆ ಸಮಯದಲ್ಲಿ ತಾಳ್ಮೆಯಿಂದ ನನ್ನ ಫೋಟೋವನ್ನು ತೆಗೆದುಕೊಂಡಿದ್ದ ನನ್ನ ಪತಿಗೆ ವಿಶೇಷ ಅಭಿನಂದನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಹೊಸ ಲುಕ್ನಲ್ಲಿ ರಶ್ಮಿಕಾ.. ಉರ್ಫಿ ಜಾವೇದ್ ಎರಡನೇ ಅವತಾರ ಎನ್ನುತ್ತಿರುವ ನೆಟಿಜನ್ಸ್
ರಣಬೀರ್ ಕಪೂರ್‌ಗೆ ಈ ಫೋಟೋ ಕ್ರೆಡಿಟ್:ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನ ಸ್ಟೋರಿ ವಿಭಾಗದಲ್ಲಿ ಹಂಚಿಕೊಂಡ ಚಿತ್ರದಲ್ಲಿ, ನಟಿ ಆಲಿಯಾ ತಮ್ಮ ಅತ್ಯುತ್ತಮ ನೈಜ ಸ್ವಭಾವ ಕಾಣಿಸುತ್ತದೆ. ಪ್ರಶಸ್ತಿಯತ್ತ ಗಮನವಿದ್ದರೂ, ಆಲಿಯಾ ಪ್ರಶಸ್ತಿಯ ಮೂಲಕ ಇಣುಕಿ ನೋಡುವುದು ಗಮನ ಸೆಳೆಯುತ್ತದೆ. ನಟಿ ತಮ್ಮ ಬೆಡ್ ರೂಮ್ನಲ್ಲಿ ತೆರೆದ ಕೂದಲು, ಬೂದು ಪೈಜಾಮಾ ಮತ್ತು ಬಿಳಿ ಸಡಿಲವಾದ ಟೀ ಶರ್ಟ್‌ನೊಂದಿಗೆ ಪ್ರಶಸ್ತಿಯನ್ನು ಕೈಯಲ್ಲಿ ಹಿಡಿದಿದ್ದಾರೆ. ಮನೆಯಲ್ಲಿ ಇರುವ ಸೌಕರ್ಯದಲ್ಲೇ ಪತ್ನಿ ಆಲಿಯಾ ಫೋಟೋವನ್ನು ಸೆರೆಹಿಡಿಯಲು ಕಾರಣರಾದ ಪತಿ ರಣಬೀರ್ ಕಪೂರ್‌ಗೆ ಈ ಸುಂದರ ಫೋಟೋದ ಕ್ರೆಡಿಟ್ ದೊರೆಯುತ್ತದೆ ಎಂದಿದ್ದಾರೆ.
ಇದನ್ನೂ ಓದಿ:ನಿರ್ದೇಶಕ ಸಂಜಯ್ ಬನ್ಸಾಲಿ ಬರ್ತ್ಡೇ ಪಾರ್ಟಿಯಲ್ಲಿ ರಣವೀರ್, ಆಲಿಯಾ, ಅದಿತಿ, ಸೋನಾಕ್ಷಿ ಕಾಣಿಸಿಕೊಂಡಿದ್ದು ಹೀಗೆ..