ಹೈದರಾಬಾದ್:ರಾಮೋಜಿ ಫಿಲಂ ಸಿಟಿ... ಈ ಹೆಸರು ಕೇಳದಿರುವವರೇ ಕಡಿಮೆ. ಆರ್ಎಫ್ಸಿ ಎಂಬ ಶಬ್ದ ಕಿವಿಗೆ ಬಿದ್ದ ತಕ್ಷಣ ಕಣ್ಣೆದುರು ಸುಂದರ ಲೋಕದ ಚಿತ್ರಣ ಮೂಡುತ್ತದೆ. ಸ್ಟಾರ್ಟ್ ಕ್ಯಾಮೆರಾ... ಆಕ್ಷನ್...' ಎಂಬ ಶಬ್ದ ಅನುರಣಿಸುತ್ತದೆ. ಅದೆಷ್ಟೋ ಸಿನಿಮಾಗಳ ಸೌಂದರ್ಯವನ್ನು ಹೆಚ್ಚಿಸಿದ ಸುಂದರ ತಾಣವಿದು. ಹೀಗಾಗಿ, ಒಮ್ಮೆಯಾದರೂ ಈ ಫಿಲಂ ಸಿಟಿಯ ಸೌಂದರ್ಯವನ್ನು ಆಸ್ವಾದಿಸಬೇಕೆಂಬ ಹೆಬ್ಬಯಕೆ ಎಲ್ಲರಲ್ಲೂ ಖಂಡಿತಾ ಇರುತ್ತದೆ. ಇವರ ಈ ಬಯಕೆಗೆ ಸರಿಯಾಗಿ ರಾಮೋಜಿ ಫಿಲಂ ಸಿಟಿ ಒಳ ಹೊಕ್ಕು ಒಂದು ಸಲ ದೃಷ್ಟಿಹಾಯಿಸಿದರೆ ಸಾಕು, ಕಿರಿಯರಿಂದ ಹಿಡಿದು ಹಿರಿಯರ ತನಕ ಎಲ್ಲರ ಕಣ್ಣಿಗೂ ಹಬ್ಬದ ಸಂಭ್ರಮ ತರುವ, ಮನಸ್ಸಿಗೆ ಮುದ ನೀಡುವ ಭರಪೂರ ಮನರಂಜನೆಗಳು ಇಲ್ಲಿವೆ. ಆದರೆ, ಕೊರೊನಾ ವೈರಸ್ ಅಬ್ಬರಿಸುತ್ತಿದ್ದ ಕಾರಣದಿಂದ ಜನರ ಸುರಕ್ಷತೆಯ ದೃಷ್ಟಿಯಿಂದ ಮತ್ತು ಸರ್ಕಾರದ ಮಾರ್ಗಸೂಚಿಯಂತೆ ರಾಮೋಜಿ ಫಿಲಂ ಸಿಟಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇದೀಗ, ಈ ಚಿತ್ರನಗರಿಯಲ್ಲಿ ಖುಷಿ ಮತ್ತೆ ಮರಳಿದೆ. ಪ್ರವಾಸಿಗರ ಸ್ವಾಗತಕ್ಕಾಗಿ ರಾಮೋಜಿ ಫಿಲಂ ಸಿಟಿ ಸಿಂಗಾರಗೊಂಡು ಸಜ್ಜಾಗಿ ನಿಂತಿದೆ.
ಫೆಬ್ರವರಿ 18ರಿಂದ ರಾಮೋಜಿ ಫಿಲಂ ಸಿಟಿಗೆ ಭೇಟಿ ನೀಡಲು ಎಂದಿನಂತೆ ಪ್ರವಾಸಿಗರಿಗೆ ಅವಕಾಶ ಸಿಗಲಿದೆ. ಪ್ರವಾಸಿಗರ ಸ್ವಾಗತಕ್ಕಾಗಿ ಚಿತ್ರನಗರಿಯಲ್ಲಿ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಕೋವಿಡ್-19 ಸುರಕ್ಷತಾ ಮುನ್ನೆಚ್ಚರಿಕೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಹೀಗಾಗಿ, ಯಾವುದೇ ಭಯ, ಆತಂಕ ಇಲ್ಲದೆ ಪ್ರವಾಸಿಗರು ತಮ್ಮ ಕುಟುಂಬ ಸ್ನೇಹಿತರ ಸಮೇತ ಬಂದು ರಜಾದಿನಗಳನ್ನು ಆಹ್ಲಾದಕರವಾಗಿ ಕಳೆಯಬಹುದು.
ಮುತ್ತಿನ ನಗರಿ ಹೈದರಾಬಾದ್ನ 2,000 ಎಕರೆಯ ವಿಶಾಲ ಪ್ರದೇಶದಲ್ಲಿ ರಾಮೋಜಿ ಫಿಲಂ ಸಿಟಿ ವ್ಯಾಪಿಸಿದೆ. ಇಲ್ಲಿರುವ ಸಿನಿ - ಮ್ಯಾಜಿಕ್, ಥಿಮ್ಯಾಟಿಕ್ ಆಕರ್ಷಣೆಗಳು, ಆಕರ್ಷಕ ಉದ್ಯಾನಗಳು, ಚಿಮ್ಮುವ ಕಾರಂಜಿಗಳು, ಮಕ್ಕಳ ಮನಸ್ಸಿಗೆ ಮುದ ನೀಡುವ ನಾನಾ ಆಟಗಳು, ಸ್ಟಂಟ್ ಲೈವ್ ಶೋಗಳು ಮನಸ್ಸಿಗೆ ಮುದ ನೀಡುತ್ತವೆ.
ವಿಶ್ವದ ಅತಿದೊಡ್ಡ ಚಲನಚಿತ್ರ ನಗರಿ
ರಾಮೋಜಿ ಫಿಲಂ ಸಿಟಿ ವಿಶ್ವದ ಅತಿದೊಡ್ಡ ಚಲನಚಿತ್ರ ನಗರಿಯೆಂದು 'ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್'ನಲ್ಲಿ ಸ್ಥಾನ ಪಡೆದಿದೆ. ಚಿತ್ರ ನಗರಿಯ ಮನರಂಜನಾ ಸೌಲಭ್ಯಗಳನ್ನು ತಂತ್ರಜ್ಞಾನ, ವಾಸ್ತುಶಿಲ್ಪ ಮತ್ತು ಭೂ ವಿನ್ಯಾಸ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವ ಅಂತಾರಾಷ್ಟ್ರೀಯ ತಜ್ಞರು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದ್ದಾರೆ. ಈ ಸುಂದರ ವಿನ್ಯಾಸ ಇಲ್ಲಿನ ಹಿರಿಮೆಯೂ ಹೌದು.
ಸಿನಿಮಾ ಮಂದಿಯ ನೆಚ್ಚಿನ ತಾಣ
ರಾಮೋಜಿ ಫಿಲಂ ಸಿಟಿ ಸಿನೆಮಾ ಮಂದಿಯ ನೆಚ್ಚಿನ ತಾಣ. ಇಲ್ಲಿ ಅದೆಷ್ಟೋ ಸಿನೆಮಾಗಳು ಸುಂದರ ರೂಪ ಪಡೆದಿವೆ. ಸಮಗ್ರ ಚಲನಚಿತ್ರ ನಿರ್ಮಾಣಕ್ಕೆ ಬೇಕಾದ ಮೂಲಸೌಕರ್ಯ ಮತ್ತು ವೃತ್ತಿಪರ ಸೇವೆಗೆ ರಾಮೋಜಿ ಫಿಲಂ ಸಿಟಿ ಹೆಸರುವಾಸಿ. ಯಾವುದೇ ದಿನವಿರಲಿ ಏಕಕಾಲದಲ್ಲಿ ಹಲವು ಸಿನಿಮಾಗಳನ್ನು ಚಿತ್ರೀಕರಣ ಮಾಡುವಂತಹ ಸಾಮರ್ಥ್ಯ ಇರುವ ಚಿತ್ರನಗರಿ ಇದು. ಈ ವಿಶೇಷತೆಗಳನ್ನು ಹೊಂದಿರುವ ರಾಮೋಜಿ ಚಿತ್ರ ನಗರಿಗೆ ವರ್ಷಕ್ಕೆ ಸುಮಾರು 1.5 ಮಿಲಿಯನ್ ಪ್ರವಾಸಿಗರು ಭೇಟಿ ನೀಡಿ ಇಲ್ಲಿನ ಸೌಂದರ್ಯವನ್ನು ಆಸ್ವಾದಿಸುತ್ತಾರೆ. ರಾಮೋಜಿ ಫಿಲಂ ಸಿಟಿ ತನ್ನ ವಿಶಾಲ ಮನರಂಜನಾ ಮತ್ತು ಥಿಮ್ಯಾಟಿಕ್ ರಂಜನೀಯತೆಗೆ ಪ್ರಸಿದ್ಧವಾಗಿದೆ. ಅವುಗಳಲ್ಲಿ ಕೆಲವು ಪ್ರಮುಖ ಆಕರ್ಷಣೆಗಳಿವು.
ಯುರೇಕಾ
ನೃತ್ಯ ಮತ್ತು ಹಾಡಿನ ಸಂಭ್ರಮದೊಂದಿಗೆ ಪ್ರವಾಸಿಗರನ್ನು ಬರಮಾಡಿಕೊಳ್ಳುವ ಫಿಲಂ ಸಿಟಿ, ಮಧ್ಯಕಾಲೀನ ಕೋಟೆಗಳ ಮಾದರಿಯ ಬೃಹತ್ ಕಟ್ಟಡಗಳು ನೋಡುಗರನ್ನು ಸಾಮ್ರಾಟರ ಆಳ್ವಿಕೆಯತ್ತ ಕರೆದೊಯ್ಯುತ್ತವೆ. ಮಕ್ಕಳ ಆಟದ ಅಂಗಳಗಳು, ಥಿಮ್ಯಾಟಿಕ್ ರೆಸ್ಟೋರೆಂಟ್ಗಳು ಇಲ್ಲಿ ಪ್ರಮುಖ ಆಕರ್ಷಣೆ. ಇಷ್ಟೇ ಅಲ್ಲ.. ನಿಮಗೆ ಇಲ್ಲಿ ಶಾಪಿಂಗೂ ಅವಕಾಶ ಕಲ್ಪಿಸಲಾಗಿದೆ. ಯುರೇಕಾದ ಥೀಮ್ ಬಜಾರ್ಗಳಲ್ಲಿ ಸ್ಮರಣೀಯವಾದ ವಸ್ತುಗಳನ್ನು ನೀವು ಖರೀದಿಸಬಹುದು.
ಫಂಡೂಸ್ತಾನ್ ಮತ್ತು ಬೊರಾಸುರಾ
ಮಕ್ಕಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ'ಫಂಡೂಸ್ತಾನ್'ಯುವ ಮನಸ್ಸುಗಳನ್ನು ತಕ್ಷಣವೇ ಸೆಳೆಯುತ್ತದೆ. ಮಕ್ಕಳ ಕುತೂಹಲದ ಚಿಂತನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತಹ ವೈಶಿಷ್ಠ್ಯಗಳು ಇದರಲ್ಲಿವೆ. ಇಲ್ಲಿನ ಖುಷಿಯ ಅಂಗಳಕ್ಕೆ ಇಳಿದ ತಕ್ಷಣ ಮಕ್ಕಳಿಗೆ ಹೊಸ ಲೋಕದಲ್ಲಿ ವಿಹರಿಸಿದ ಅನುಭವವಾಗುತ್ತದೆ. ರೋಚಕತೆ, ಸವಾರಿ ಮತ್ತು ಗೇಮಿಂಗ್ನಲ್ಲಿ ಮಗ್ನರಾಗಿ ಬಿಡುತ್ತಾರೆ. 'ಬೋರಾಸುರಾ' ನೈಜ ಜಾದೂಗಾರನ ತಾಣ. ಇದೊಂದು ಅತ್ಯುತ್ತಮ ಥಿಮ್ಯಾಟಿಕ್ ವಾಕ್ ಥ್ರೂಗಳಲ್ಲಿ ಒಂದಾಗಿದೆ. 'ಬೋರಾಸುರಾ'ದಲ್ಲಿನ ಡಾರ್ಕ್ ಏಜ್ ಭಯಾನಕತೆಯ ವಿಶಿಷ್ಟ ಅನುಭವ ನೀಡುತ್ತದೆ.
ರಾಮೋಜಿ ಮೂವಿ ಮ್ಯಾಜಿಕ್
ಚಲನಚಿತ್ರ ಮತ್ತು ಫ್ಯಾಂಟಸಿಯ ಅನನ್ಯತೆಯನ್ನು ಪ್ರವಾಸಿಗರ ಅನುಭವಕ್ಕೆ ತರಲು ರಾಮೋಜಿ ಮೂವಿ ಮ್ಯಾಜಿಕ್ ತೆರೆಯಲಾಗಿದೆ. ಆಕ್ಷನ್ ಮೂವಿ ಹಿಂದಿನ ಶ್ರಮ, ಚಲನಚಿತ್ರ ನಿರ್ಮಾಣದ ಜಟಿಲತೆಗಳು, ಸ್ಪೆಷಲ್ ಅಫೆಕ್ಟ್, ಎಡಿಟಿಂಗ್, ಡಬ್ಬಿಂಗ್ಗಳಂತಹ ಅಪರೂಪದ ವಿಷಯಗಳನ್ನು ಪ್ರವಾಸಿಗರು ಇಲ್ಲಿ ತಿಳಿದುಕೊಳ್ಳಬಹುದು.
ಫಿಲ್ಮಿ ದುನಿಯಾ
ಫ್ಯಾಂಟಸಿ ವರ್ಲ್ಡ್ನಲ್ಲಿ ಅತ್ಯಾಕರ್ಷಕ ಡಾರ್ಕ್ ಸವಾರಿ ಸಾಕಷ್ಟು ರಂಜನೆ ನೀಡುತ್ತದೆ.
ರಾಮೋಜಿ ಬಾಹ್ಯಾಕಾಶ ಯಾತ್ರೆ!