ಕರ್ನಾಟಕ

karnataka

ETV Bharat / bharat

Pegasus​ ತಂತ್ರಾಂಶ ವಿವಾದಕ್ಕೆ ಕಲಾಪಗಳು ಬಲಿ: ಮಧ್ಯಾಹ್ನಕ್ಕೆ ಮುಂದೂಡಿಕೆ!

ಪೆಗಾಸಸ್​ ಬಗೆಗಿನ ವಿಪಕ್ಷಗಳ ಆಕ್ರೋಶಕ್ಕೆ ರಾಜ್ಯಸಭೆ ಹಾಗೂ ಲೋಕಸಭೆ ಕಲಾಪಗಳು ಬಲಿಯಾಗಿವೆ.

ಕಲಾಪ
ಕಲಾಪ

By

Published : Jul 20, 2021, 11:45 AM IST

ರಾಜ್ಯಸಭೆ ಮತ್ತು ಲೋಕಸಭೆ ಕಲಾಪಗಳು ಎರಡನೇ ದಿನವೂ ಪೆಗಾಸಸ್ ಕಣ್ಗಾವಲು ತಂತ್ರಾಂಶ ವಿವಾದಕ್ಕೆ ಬಲಿಯಾಗಿವೆ. ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷಗಳು ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು, ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದವು.

ಉತ್ತರ ಕೊಡಲೂ ಅವಕಾಶ ನೀಡದಿರುವಷ್ಟು ಗದ್ದಲವಾದ್ದರಿಂದ ಎರಡೂ ಕಲಾಪಗಳನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.

ಇದನ್ನೂ ಓದಿ: Pegasus spyware: ಎಲ್ಲಾ ರಾಜ್ಯಗಳಲ್ಲೂ ನಾಳೆ ಕಾಂಗ್ರೆಸ್ ಸುದ್ದಿಗೋಷ್ಠಿ.. ಇಂದು ಪಿಎಂ ನೇತೃತ್ವದಲ್ಲಿ ಸಂಸದೀಯ ಪಕ್ಷದ ಸಭೆ!

ಸರ್ಕಾರಕ್ಕೂ ಪೆಗಾಸಸ್​ಗೂ ಸಂಬಂಧವಿಲ್ಲ

ಪೆಗಾಸಸ್ ಹಾಗೂ ಸರ್ಕಾರಕ್ಕೆ ಯಾವುದೇ ಸಂಬಂಧವಿಲ್ಲ. ವಿಪಕ್ಷಗಳು ಸರಿಯಾದ ಮಾರ್ಗದಲ್ಲಿ ದನಿ ಎತ್ತಲು ಬಯಸಿದರೆ ಎತ್ತಲಿ. ಈ ವಿಚಾರದ ಬಗ್ಗೆ ಐಟಿ ಸಚಿವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ABOUT THE AUTHOR

...view details