ಭರತ್‌ಪುರ: ರಾಜಸ್ಥಾನದ ಭರತ್‌ಪುರ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕನಿಗೆ ಕಿರುಕುಳ ನೀಡಿದ್ದಾರೆ ಎನ್ನಲಾದ ಆರೋಪದ ಮೇಲೆ ವಿಶೇಷ ನ್ಯಾಯಾಧೀಶರು ಮತ್ತು ಅವರ ಇಬ್ಬರು ಸಹಚರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 7ನೇ ತರಗತಿ ಓದುತ್ತಿರುವ 14 ವರ್ಷದ ಬಾಲಕ ಇವರ ಕಿರುಕುಳಕ್ಕೆ ಒಳಗಾಗಿದ್ದಾನೆ ಎಂದು ತಿಳಿದು ಬಂದಿದೆ.
ಮಥುರಾ ಗೇಟ್ ಪೊಲೀಸ್ ಠಾಣೆ ಪ್ರಭಾರಿ ರಾಮನಾಥ್ ಈ ಸಂಬಂಧ ಮಾತನಾಡಿ, ಸಂತ್ರಸ್ತೆಯ ತಾಯಿ ನೀಡಿದ ದೂರಿನ ಮೇರೆಗೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.
ಏನಿದು ಘಟನೆ?:ಶುಕ್ರವಾರ ಈ ಘಟನೆ ನಡೆದಿದ್ದು, ಆತನ ತಾಯಿಗೆ ತಿಳಿದು ಬಂದಿದೆ. ತನ್ನ ಮಗುವಿನೊಂದಿಗೆ ನ್ಯಾಯಾಧೀಶರು ನಡೆದುಕೊಳ್ಳುತ್ತಿದ್ದ ರೀತಿಯಿಂದ ಆಕೆ ದಿಗ್ಭ್ರಮೆಗೊಂಡಿದ್ದಾಳಂತೆ. ನಂತರ ಶನಿವಾರ ನ್ಯಾಯಾಧೀಶರು ತನ್ನ ಸಹಚರರೊಂದಿಗೆ ಆಕೆಯ ಮನೆಗೆ ಬಂದು ವಿಷಯವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾರಂತೆ.
ಸಂತ್ರಸ್ತೆಯ ತಾಯಿಯ ಪ್ರಕಾರ, ಆತ ಭರತ್‌ಪುರ ನಗರದ ಕಾಲೋನಿಯಲ್ಲಿರುವ ಕ್ರೀಡಾ ಮೈದಾನದಲ್ಲಿ ಆಟವಾಡುತ್ತಿದ್ದಾಗ. ವಿಶೇಷ ನ್ಯಾಯಾಧೀಶ ವಿಜಿಲೆನ್ಸ್ ಜಿತೇಂದ್ರ ಗುಲಿಯಾ ಎಂಬುವರು ಮತ್ತು ಅವರ ಇಬ್ಬರು ಸಹಚರರು ಅಲ್ಲಿಗೆ ಬಂದು ಬಾಲಕನಿಗೆ ಕಿರುಕುಳ ನೀಡುತ್ತಿದ್ದರಂತೆ.
ಅವರು ನನ್ನ ಮಗುವನ್ನು ತಮ್ಮ ಮನೆಗೆ ಕರೆದೊಯ್ಯಲು ಮುಂದಾದರು. ಅವರು ಅವನಿಗೆ ಅಮಲು ಬೆರೆಸಿದ ಜ್ಯೂಸ್ ಅನ್ನು ನೀಡಿದ್ದರು. ನಂತರ ಮದ್ಯವನ್ನು ನೀಡಲು ಪ್ರಾರಂಭಿಸಿದ್ದರು. ಅಮಲೇರಿದ ನಂತರ ಅವರು ಕೆಟ್ಟ ಕೆಲಸದಲ್ಲಿ ತೊಡಗಿದ್ದರು ಎಂದು ಮಹಿಳೆ ಆರೋಪ ಮಾಡಿದ್ದಾರೆ.