ಕರ್ನಾಟಕ

karnataka

ETV Bharat / bharat

ಯುವತಿಯನ್ನು ಪ್ರೀತಿಸಿ ಮದುವೆಯಾದ ಯುವತಿ: ರಾಜಸ್ಥಾನದಲ್ಲಿ ಪೋಷಕರ ಮಾತು ಧಿಕ್ಕರಿಸಿ ಒಂದಾದ ಜೋಡಿ

ಹರಿಯಾಣದ ಜಿಂದ್​​ನಲ್ಲಿ ವಾಸವಾಗಿದ್ದ ಯುವತಿ ಹಾಗೂ ರತನ್​ಗಢದಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದ ಮತ್ತೊಬ್ಬ ಯುವತಿ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸಲು ಶುರು ಮಾಡಿದ್ದಾರೆ. ಇದರ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಅವರಿಗೆ ಕಾವಲು ಸಹ ಇರಿಸಲಾಗಿತ್ತು. ಆದರೆ, ಗಾಢವಾದ ಪ್ರೀತಿಯಲ್ಲಿ ಮುಳುಗಿದ್ದ ಈ ಜೋಡಿ ಯಾರ ಮಾತನ್ನೂ ಕೇಳಲಿಲ್ಲ.

Churu Girl Weds Haryana Girl
Churu Girl Weds Haryana Girl

By

Published : Jan 13, 2022, 3:39 PM IST

Updated : Jan 13, 2022, 3:47 PM IST

ಚುರು(ರಾಜಸ್ಥಾನ):ಪ್ರೀತಿಯ ಬಲೆಯಲ್ಲಿ ಬಿದ್ದಿರುವ ಯುವತಿಯರಿಬ್ಬರು ಮನೆ ಬಿಟ್ಟು ಓಡಿ ಹೋಗಿ ಮದುವೆಯಾಗಿದ್ದಾರೆ. ರಾಜಸ್ಥಾನದ ಚುರು ಜಿಲ್ಲೆಯ ರತನ್​ಗಢದಲ್ಲಿ ಈ ಘಟನೆ ನಡೆದಿದೆ.

ಹರಿಯಾಣದ ಜಿಂದ್​​ನಲ್ಲಿ ವಾಸವಾಗಿದ್ದ ಯುವತಿ ಹಾಗೂ ರತನ್​ಗಢದಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದ ಮತ್ತೊಬ್ಬ ಯುವತಿ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸಲು ಶುರು ಮಾಡಿದ್ದಾರೆ. ಇದರ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಅವರಿಗೆ ಕಾವಲು ಸಹ ಇರಿಸಲಾಗಿತ್ತು. ಆದರೆ, ಗಾಢವಾದ ಪ್ರೀತಿಯಲ್ಲಿ ಮುಳುಗಿದ್ದ ಈ ಜೋಡಿ ಯಾರ ಮಾತನ್ನೂ ಕೇಳಲಿಲ್ಲ. ಕುಟುಂಬದವರ ಮಾತು ಧಿಕ್ಕರಿಸಿ, ಒಟ್ಟಿಗೆ ವಾಸಿಸುವ ನಿರ್ಧಾರವನ್ನೂ ಮಾಡಿದ್ದಾರೆ.

ಯುವತಿಯನ್ನು ಪ್ರೀತಿಸಿ ಮದುವೆಯಾದ ಯುವತಿ

ಸಂಪೂರ್ಣ ವಿವರ:

ಒಂದು ವರ್ಷದ ಹಿಂದೆ ಹರಿಯಾಣದ 22 ವರ್ಷದ ಯುವತಿ ರತನ್​ಗಢದಲ್ಲಿರುವ ತನ್ನ ಅತ್ತಿಗೆಯ ಮನೆಗೆ ಆಗಮಿಸಿದ್ದಳು. ಈಕೆಗೆ ಇಲ್ಲಿ ವಾಸವಾಗಿದ್ದ 18 ವರ್ಷದ ಅತ್ತಿಗೆಯ ಮಗಳೊಂದಿಗೆ ಸ್ನೇಹವಾಗಿದೆ. ಆ ಬಳಿಕ ಇಬ್ಬರು ಆಗಾಗ್ಗೆ ಭೇಟಿಯಾಗಿದ್ದು, ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು.

ಇದನ್ನೂ ಓದಿ:ಯುಪಿ ಚುನಾವಣೆಗೆ ಕಾಂಗ್ರೆಸ್ ರೆಡಿ: ಉನ್ನಾವೋ ರೇಪ್ ಸಂತ್ರಸ್ತೆಯ ತಾಯಿ ಸೇರಿ ಶೇ.40ರಷ್ಟು ಮಹಿಳೆಯರಿಗೆ ಟಿಕೆಟ್​

2021ರ ನವೆಂಬರ್​ 12ರಂದು ರಾತ್ರಿ 18 ವರ್ಷದ ಹುಡುಗಿ ತನ್ನ ಮನೆಯಿಂದ ಓಡಿ ಬಂದು ಹರಿಯಾಣದ 22 ವರ್ಷದ ಹುಡುಗಿಯನ್ನು ಭೇಟಿಯಾಗಿದ್ದಾಳೆ. ಇದರ ಬೆನ್ನಲ್ಲೇ ಇಬ್ಬರೂ ಫತೇಹಾಬಾದ್​ಗೆ ಹೋಗಿ ಮದುವೆಯಾಗಿದ್ದು, ಜಿಂದ್​ನಲ್ಲಿ ಎರಡು ತಿಂಗಳ ಕಾಲ ಒಟ್ಟಿಗೆ ವಾಸವಾಗಿದ್ದರು.

ಹುಡುಗಿಯರಿಬ್ಬರು ಕಾಣೆಯಾಗಿರುವ ಬಗ್ಗೆ ನವೆಂಬರ್​ 14ರಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಇಬ್ಬರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ತದನಂತರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಈ ವೇಳೆ ಯುವತಿಯರು ತಾವು ಒಟ್ಟಿಗೆ ಜೀವನ ನಡೆಸುವುದಾಗಿ ಪೊಲೀಸರಲ್ಲಿ ಮನವಿ ಮಾಡಿಕೊಂಡರು. ಹೀಗಾಗಿ ಪೊಲೀಸ್ ಇಲಾಖೆ ಕೂಡ ಇವರನ್ನು ಬಿಟ್ಟು ಕಳುಹಿಸಿತು.

Last Updated : Jan 13, 2022, 3:47 PM IST

ABOUT THE AUTHOR

...view details