ಕರ್ನಾಟಕ

karnataka

ETV Bharat / bharat

ಸಾಲಾಸರ್​ ಬಾಲಾಜಿ ದೇಗುಲಕ್ಕೆ ಕುಟುಂಬ ಸಮೇತ ಭೇಟಿ ನೀಡಿದ ದೆಹಲಿ ಸಿಎಂ.. ಇಲ್ಲಿನ ವಿಶೇಷತೆ ಏನು? - Delhi Air Pollution

ರಾಜಸ್ಥಾನದ ಚುರು ಜಿಲ್ಲೆಯಲ್ಲಿರುವ ಸಾಲಾಸರ್ ಬಾಲಾಜಿ ದೇವಸ್ಥಾನಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕುಟುಂಬ ಸಮೇತ ಭೇಟಿ ನೀಡಿದ್ದಾರೆ.

ದೆಹಲಿ ಸಿಎಂ
ದೆಹಲಿ ಸಿಎಂ

By

Published : Nov 13, 2021, 9:57 AM IST

ಚುರು (ರಾಜಸ್ಥಾನ): ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Delhi Chief Minister Arvind Kejriwal) ಅವರು ಇಂದು ಮುಂಜಾನೆ ತಮ್ಮ ಕುಟುಂಬದೊಂದಿಗೆ ರಾಜಸ್ಥಾನದ ಚುರು ಜಿಲ್ಲೆಯಲ್ಲಿರುವ ಸಾಲಾಸರ್ ಬಾಲಾಜಿ ದೇವಸ್ಥಾನಕ್ಕೆ (Salasar Balaji Temple) ಭೇಟಿ ನೀಡಿದರು.

ಸಾಲಾಸರ್​ ಬಾಲಾಜಿ ದೇಗುಲಕ್ಕೆ ಕುಟುಂಬ ಸಮೇತ ಭೇಟಿ ನೀಡಿ ದೆಹಲಿ ಸಿಎಂ

ಶುಕ್ರವಾರ ತಡರಾತ್ರಿ ಸಾಲಾಸರ್ ತಲುಪಿದ ದೆಹಲಿ ಸಿಎಂ ಅವರನ್ನು ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ದೇವಸ್ಥಾನದ ಅರ್ಚಕರು ಬರಮಾಡಿಕೊಂಡರು. ಸಾಲಾಸರ್ ಧಾಮ್ (Salasar Dham) ಎಂದೂ ಕರೆಯಲ್ಪಡುವ ಈ ದೇವಾಲಯವು ಹನುಮನ ಭಕ್ತರಿಗೆ ಧಾರ್ಮಿಕ ಸ್ಥಳವಾಗಿದೆ.

ಬಿಗಿ ಭದ್ರತೆಯ ನಡುವೆ ದರ್ಶನಕ್ಕೆ ಆಗಮಿಸಿದ ಕೇಜ್ರಿವಾಲ್​ಗೆ ದೇವಾಲಯದ ಅರ್ಚಕರು ಬಾಲಾಜಿಯ ಫೋಟೋವನ್ನು ನೀಡಿದರು. ಬಾಲಾಜಿ ದರ್ಶನದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಕೇಜ್ರಿವಾಲ್, ಎಲ್ಲರಿಗೂ ಸುಖ ಶಾಂತಿ ಸಿಗಲಿ ಎಂದು ಹಾರೈಸಿದರು. ಈ ವೇಳೆ ಮಾಧ್ಯಮದವರು ದೆಹಲಿ ಮಾಲಿನ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಇದನ್ನೂ ಓದಿ:US Air Quality Index: ಪಾಕ್​ನ ಲಾಹೋರ್​ಗೆ 'ವಿಶ್ವದ ಅತ್ಯಂತ ಕಲುಷಿತ ನಗರ' ಎಂಬ ಹಣೆಪಟ್ಟಿ

ನವದೆಹಲಿಯ ವಾಯು ಮಾಲಿನ್ಯದ (Delhi Air Pollution) ಬಗ್ಗೆ ದೇಶ-ವಿದೇಶಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದ್ದು, ರಾಷ್ಟ್ರ ರಾಜಧಾನಿಯ ವಾಯು ಗುಣಮಟ್ಟ ಸೂಚ್ಯಂಕ (AQI) 700ರ ಗಡಿ ತಲುಪಿದೆ.

ABOUT THE AUTHOR

...view details