ರಾಯ್‌ಪುರ (ಛತ್ತೀಸ್‌ಗಢ) :ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ಛತ್ತೀಸ್‌ಗಢ ವಿಧಾನಸಭಾ ಚುನಾವಣೆಗೆ ಈಗಾಗಾಲೇ ತಯಾರಿ ಪ್ರಾರಂಭವಾಗಿದೆ. ಈ ಬೆನ್ನಲ್ಲೇ ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜ್ಯ ರಾಜಧಾನಿ ರಾಯ್‌ಪುರಕ್ಕೆ ಭೇಟಿ ನೀಡುತ್ತಿದ್ದಾರೆ. ಇಲ್ಲಿ ನಡೆಯುತ್ತಿರುವ 'ರಾಜೀವ್ ಯುವ ಮಿತನ್ ಸಮ್ಮೇಳನ'ದಲ್ಲಿ ಪಾಲ್ಗೊಂಡು ಯುವಕರೊಂದಿಗೆ ಸಂವಾದ ನಡೆಸುವ ಮೂಲಕ 48 ಲಕ್ಷ ಯುವ ಮತದಾರರ ಮನ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ.
ರಾಹುಲ್ ಗಾಂಧಿ ಪ್ರವಾಸದ ಮಾಹಿತಿ : ಬೆಳಗ್ಗೆ 11:55 ಕ್ಕೆ ದೆಹಲಿಯಿಂದ ರಾಯಪುರಕ್ಕೆ ತೆರಳಲಿರುವ ರಾಹುಲ್ ಗಾಂಧಿ, ಮಧ್ಯಾಹ್ನ 1:45 ಕ್ಕೆ ರಾಯ್‌ಪುರ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ರಾಯ್‌ಪುರದ ಮೇಳದ ಮೈದಾನದಲ್ಲಿ ಮಧ್ಯಾಹ್ನ 2 ರಿಂದ 4 ಗಂಟೆಯವರೆಗೆ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಂಜೆ ಐದು ಗಂಟೆಗೆ ಮತ್ತೆ ದೆಹಲಿಗೆ ತೆರಳಲಿದ್ದಾರೆ.
ಛತ್ತೀಸ್‌ಗಢ ಭೇಟಿಯ ವಿಶೇಷತೆ ಏನು? : ಚುನಾವಣಾ ಆಯೋಗದ ಪ್ರಕಾರ, ಛತ್ತೀಸ್‌ಗಢದಲ್ಲಿ ಸುಮಾರು 48 ಲಕ್ಷ ಯುವ ಮತದಾರರಿದ್ದಾರೆ. ಇವರ ವಯಸ್ಸು 18 ರಿಂದ 29 ವರ್ಷಗಳು. ಈ 48 ಲಕ್ಷ ಮತದಾರರಲ್ಲಿ ಪ್ರಥಮ ಬಾರಿಗೆ ಮತದಾನ ಮಾಡಿದ ಯುವಕರ ಸಂಖ್ಯೆ 4 ಲಕ್ಷದ 43 ಸಾವಿರ ಇದೆ. ಹೀಗಾಗಿ, ರಾಹುಲ್ ಮೊದಲ ಬಾರಿಗೆ ಮತದಾರರ ಮನ ಗೆಲ್ಲಲು 'ಛತ್ತೀಸ್‌ಗಢ ರಾಜೀವ್ ಯುವ ಮಿತನ್ ಕ್ಲಬ್'ನಲ್ಲಿ ಭಾಗವಹಿಸುತ್ತಿದ್ದಾರೆ.
ಇದನ್ನೂ ಓದಿ :2024ರ ಚುನಾವಣೆಗೆ ಸಮರೋಪಾದಿಯಲ್ಲಿ ಸಿದ್ಧತೆ .. INDIA ಕೂಟದಿಂದ ಇಂದು ಮಹತ್ವದ ಘೋಷಣೆಗಳ ಸಾಧ್ಯತೆ