ಕರ್ನಾಟಕ

karnataka

ETV Bharat / bharat

'ತಿಂಗಳಿಗೊಮ್ಮೆ ಅರ್ಥಹೀನ ಮಾತು': ಮೋದಿ ಮನ್ ಕಿ ಬಾತ್​ಗೆ ರಾಗಾ ಟೀಕೆ - Rahul Gandhi tweet

ಕೊರೊನಾ ವಿರುದ್ಧ ಹೋರಾಡಲು ಸರಿಯಾದ ಉದ್ದೇಶ, ದೃಢ ನಿಶ್ಚಯದ ಅಗತ್ಯವಿದೆಯೇ ಹೊರತು ಅರ್ಥಹೀನ ಮಾತುಗಳಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯ ಮನ್ ಕಿ ಬಾತ್ ವಿರುದ್ಧ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

Mann Ki Baat
ಮೋದಿ ಮನ್ ಕಿ ಬಾತ್​ಗೆ ರಾಗಾ ಟೀಕೆ

By

Published : May 30, 2021, 2:27 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' ಅರ್ಥಹೀನ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟೀಕಿಸಿದ್ದಾರೆ.

"ಕೊರೊನಾ ವಿರುದ್ಧ ಹೋರಾಡಲು ನಿಮಗೆ ಸರಿಯಾದ ಉದ್ದೇಶ, ನೀತಿ, ದೃಢ ನಿಶ್ಚಯದ ಅಗತ್ಯವಿದೆ. ಇದನ್ನು ಬಿಟ್ಟು ತಿಂಗಳಿಗೊಮ್ಮೆ ಬಂದು ಅರ್ಥಹೀನ ಮಾತುಗಳನ್ನಾಡುವುದಲ್ಲ" ಎಂದು ರಾಗಾ ಹಿಂದಿಯಲ್ಲಿ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ಕೋವಿಡ್​ 2ನೇ ಅಲೆಯಲ್ಲಿ ಆಕ್ಸಿಜನ್​ ಪೂರೈಕೆಯೇ ದೊಡ್ಡ ಸವಾಲಾಗಿತ್ತು: ಪ್ರಧಾನಿ ಮೋದಿ

ಇಂದು 77ನೇ ಆವೃತ್ತಿಯ 'ಮನ್ ಕಿ ಬಾತ್'ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೋವಿಡ್​ 2ನೇ ಅಲೆಯ ವೇಳೆ ದೂರದ​ ಪ್ರದೇಶಗಳೀಗೆ ವೈದ್ಯಕೀಯ ಆಮ್ಲಜನಕವನ್ನು ಪೂರೈಸಿದವರಿಗೆ, ಯಾಸ್ ಮತ್ತು ತೌಕ್ತೆ ಚಂಡಮಾರುತದ ಸಂದರ್ಭ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದವರನ್ನು ಶ್ಲಾಘಿಸಿದ್ದರು.

ABOUT THE AUTHOR

...view details